ಕಾಂಡೋಮ್ ಕೇಳೋಕೆ ನಾಚಿಕೆ ಆದ್ರೆ, ಪಕ್ಕದಲ್ಲಿದ್ದ ಗೆಳೆಯನ ಕಡೆ ನೋಡ್ತಾ ರಾಖಿ ಬೋಲ್ಡ್ ಹೇಳಿಕೆ

Entertainment Featured-Articles Movies News

ಬಾಲಿವುಡ್ ನಲ್ಲಿ ರಾಖಿ ಸಾವಂತ್ ಎಂದರೆ ಸುದ್ದಿ, ರಾಖಿ ಎಂದರೆ ಒಂದು ಹೊಸ ವಿ ವಾ ದ ಅಥವಾ ರಾಖೀ ಎಂದರೆ ಅಲ್ಲೊಂದು ಸಂಚಲನ. ಈ ನಟಿ ಯಾವ ಕಾರ್ಯಕ್ರಮಕ್ಕೆ ಬಂದರೆ ಆ ಶೋ ನ ಟಿ ಆರ್ ಪಿ ಮೇಲೆ ಹೋಗೋದು ಖಂಡಿತ. ಆದ್ದರಿಂದಲೇ ಈಕೆಯನ್ನು ಡ್ರಾಮಾ ಕ್ವೀನ್ ಅಂತಾನೇ ಕರೀತಾರೆ. ರಾಖೀ ಸಾವಂತ್ ಮಾದ್ಯಮಗಳ ಮಗಳು ಎಂದು ಸಹಾ ಹೆಸರನ್ನು ಪಡೆದಿರುವುದು ನೋಡಿದಾಗ ಆಕೆಯ ಕ್ರೇಜ್ ಎಂತದ್ದು ಅಂತ ಗೊತ್ತಾಗುತ್ತೆ. ಸದಾ ಒಂದಲ್ಲಾ ಒಂದು ವಿಷಯಕ್ಕೆ ರಾಖೀ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುವುದು ಒಂದು ಟ್ರೆಂಡ್ ಆದಂತೆ ಇದೆ ರಾಖೀ ಸಾವಂತ್ ಗೆ.

ಹಿಂದಿ ಬಿಗ್ ಬಾಸ್ ನ ಹದಿನೈದನೇ ಸೀಸನ್ ಮುಗಿಸಿ ಬಂದ ಮೇಲೆ ಪತಿಯಿಂದ ದೂರಾಗಿ ಒಂದಷ್ಟು ಸುದ್ದಿಯಾಗಿದ್ದ ರಾಖಿ ಈಗ ಮೈಸೂರಿನ ಹುಡುಗನ ಜೊತೆ ಲವ್ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ರಾಖಿ ಹೆಚ್ಚಾಗಿ ಸುದ್ದಿಯಾಗಿದ್ದು ತಮ್ಮ ಈ ಹೊಸ ಗೆಳೆಯ ಆದಿಲ್ ಕಾರಣದಿಂದಲೇ ಎನ್ನುವುದು ನಿಜ. ಇತ್ತೀಚೆಗೆ ದುಬೈಗೆ ತೆರಳುತ್ತಾ ವಿಮಾನ ನಿಲ್ದಾಣದಲ್ಲಿ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದ ರಾಖಿ ತನ್ನ ಗೆಳೆಯ ತನಗಾಗಿ ದುಬೈನಲ್ಲಿ ಮನೆಯೊಂದನ್ನು ಖರೀದಿ ಮಾಡಿರುವ ವಿಷಯವನ್ನು ಮಾದ್ಯಮಗಳ ಮುಂದೆ ಹಂಚಿಕೊಂಡಿದ್ದರು.

ಈಗ ಇವೆಲ್ಲವುಗಳ ನಡುವೆ ಇತ್ತೀಚಿಗೆ ರಾಖಿ ತಮ್ಮ ಗೆಳೆಯನ ಜೊತೆಗೆ ಬಾಲಿವುಡ್ ನ ಸಿನಿಮಾ ಒಂದನ್ನು ನೋಡಿದ್ದಾರೆ. ಹೌದು, ಜನ್ ಹಿತ್ ಮೇ ಜಾರೀ ಹೆಸರಿನ ಸಿನಿಮಾ ನೋಡಿದ ನಂತರ ಮಾದ್ಯಮಗಳ ಮುಂದೆ ಮಾತನಾಡಿದ ರಾಖಿ ಪಕ್ಕದಲ್ಲಿದ್ದ ಗೆಳೆಯನ ಕಡೆ ನೋಡುತ್ತಾ ನೀಡಿದ ಬೋಲ್ಡ್ ಹೇಳಿಕೆ ಈಗ ಸದ್ದು ಮಾಡಿದೆ. ಸಿನಿಮಾ ನೋಡಿ ಬಂದ ರಾಖಿ ಎಂದಿನಂತೆ ಬೋಲ್ಡ್ ಆಗಿ ಮಾತನಾಡಿದ್ದಾರೆ. ಜನ್ ಹಿತ್ ಮೇ ಜಾರಿ ಸಿನಿಮಾ ಮಾಮೂಲಿ ಸಿನಿಮಾಗಳಂತೆ ಅಲ್ಲ, ಈ ಸಿನಿಮಾದಲ್ಲಿ ಸುರಕ್ಷಿತ ಲೈಂಗಿಕತೆಯ ಕುರಿತು ಹೇಳುವುದರ ಜೊತೆಗೆ ಇಲ್ಲಿ ಕಾಂಡೋಮ್ ಬಳಕೆ ಜಾಗೃತಿ ಬಗ್ಗೆ ಸಹಾ ತಿಳಿಸಲಾಗಿದೆ.

ಸಿನಿಮಾ ನೋಡಿ ಬಂದ ರಾಖೀ, ಈ ವಿಚಾರವಾಗಿ ಮಾತನಾಡುತ್ತಾ, ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಒಂದು ರೀತಿಯಲ್ಲಿ ಬಹಳ ವಿಚಿತ್ರವಾಗಿದೆ ಎನಿಸುತ್ತದೆ. ಏಕೆಂದರೆ ಇಲ್ಲಿ ಜನ ಮದ್ಯ ಖರೀದಿ ಮಾಡೋದಕ್ಕೆ ಮದ್ಯದ ಅಂಗಡಿಗಳ ಮುಂದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕ್ಯೂ ನಲ್ಲಿ ನಿಂತ್ಕೊಳ್ತಾರೆ. ಆದರೆ ಅದೇ ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಖರೀದಿ ಮಾಡೋಕೆ ನಾಚಿಕೆ ಪಡ್ತಾರೆ ಎನ್ನುತ್ತಾ ರಾಖಿ ಗೆಳೆಯ ಆದಿಲ್ ಕಡೆ ನೋಡಿದ್ದಾರೆ.

Leave a Reply

Your email address will not be published.