ಕಸ ಮಾರಬೇಡಿ: ದೀಪಿಕಾ ಪಡುಕೋಣೆ ಸಿನಿಮಾವನ್ನು ಕಸ, ಅಶ್ಲೀಲ ಎಂದ ಕಂಗನಾ ರಣಾವತ್!!

Entertainment Featured-Articles News

ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಬೋಲ್ಡ್ ಹಾಗೂ ಖಡಕ್ ಹೇಳಿಕೆಗಳಿಂದಾಗಿಯೇ ಸಾಕಷ್ಟು ಸುದ್ದಿಯನ್ನು ಮಾಡಿರುವ ನಟಿಯಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕಂಗನಾ ಹೇಳುವ ಮಾತುಗಳು ದೊಡ್ಡ ಚರ್ಚೆ ಮತ್ತು ವಿ ವಾ ದಗಳಿಗೆ ಕಾರಣವಾಗುತ್ತದೆ. ತಮಗೆ ಅನಿಸಿದ್ದನ್ನು ಸದಾ ಮುಕ್ತವಾಗಿ ವ್ಯಕ್ತಪಡಿಸುವ ನಟಿ ಕಂಗನಾ ರಣಾವತ್ ಬಾಲಿವುಡ್‌ ನ ಯಾವ ನಟರನ್ನು ಕೂಡಾ ಎದುರು ಹಾಕಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ನೇರವಾಗಿ ಟೀಕಾಪ್ರಹಾರವನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ನಟಿ ದೀಪಿಕಾ ಪಡುಕೋಣೆ,‌ಅನನ್ಯ ಪಾಂಡೆ,‌ ಸಿದ್ದಾಂತ್ ಚತುರ್ವೇದಿ ಧೈರ್ಯ ಕರ್ವ, ಹಿರಿಯ ನಟ ನಸೀರುದ್ದಿನ್ ಶಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದ ಶಕುನ್ ಬಾತ್ರಾ ನಿರ್ದೇಶನ ಮಾಡಿರುವ ಗೆಹರಾಯಿಯಾ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನೋಡಿದ ನಂತರ ನಟಿ ಕಂಗನಾ ರಣಾವತ್ ತಮ್ಮದೇ ಆದ ಕ ಟು ವಾದ ಶೈಲಿಯಲ್ಲಿ ಸಿನಿಮಾದ ಕುರಿತಾಗಿ ತಮ್ಮ ಅ ಸಮಾಧಾನವನ್ನು ಹೊರಹಾಕಿದ್ದಾರೆ.

ಗೆಹರಾಯಿಯಾ ಸಿನಿಮಾ ಆಧುನಿಕ ಕಾಲದಲ್ಲಿನ ಸಂಬಂಧಗಳ ಕುರಿತಾದ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ಒಂದಷ್ಟು ಹಸಿಬಿಸಿ ದೃಶ್ಯಗಳನ್ನು ಕೂಡಾ‌ ಇಡಲಾಗಿದೆ. ಪ್ರಸ್ತುತ ಕಾಲದಲ್ಲಿ ಸಂಬಂಧಗಳು ಎಷ್ಟು ಗೊಂದಲಮಯವಾಗಿದೆ ಎನ್ನುವುದನ್ನು ಜನರ ಮುಂದೆ ಇಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಶಕುನ್ ಬಾತ್ರ. ಇದೊಂದು ಒಂದು ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬಂದ ಸಿನಿಮಾ ಆಗಿದ್ದು, ಕೆಲವರಿಗೆ ಸಿನಿಮಾ ಇಷ್ಟವಾಗಿದೆ, ಇನ್ನೂ ಕೆಲವರ ಟೀಕೆಗೆ ಸಿನಿಮಾ ಗುರಿಯಾಗಿದೆ.

ಹೀಗೆ ಟೀಕೆ ಮಾಡಿದವರಲ್ಲಿ ನಟಿ ಕಂಗನಾ ಕೂಡ ಸೇರಿದ್ದಾರೆ. ಕಂಗನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ, ಗೆಹರಾಯಿಯಾ ಸಿನಿಮಾದ ಕುರಿತಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಂಗನಾ, “ನಾನು ಕೂಡ ಈ ಕಾಲದವಳೆ, ಇಂತಹ ರೋಮ್ಯಾನ್ಸ್ ಅನ್ನೋ ಗುರ್ತಿಸಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಸಹಸ್ರಮಾನದ ಸಿನಿಮಾ, ಈ ಕಾಲದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂದು ಉಲ್ಲೇಖ ಮಾಡುತ್ತಾ ಕಸವನ್ನು ಮಾರಾಟ ಮಾಡಬೇಡಿ” ಎಂದು ಗೆಹರಾಯಿಯಾ ಸಿನಿಮಾದ ಕುರಿತಾಗಿ ಟೀಕೆ ಮಾಡಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಅ ಶ್ಲೀ ಲ ತೆ ಮತ್ತು ಚರ್ಮ ಪ್ರದರ್ಶನವನ್ನು ಮಾಡಿದರೂ ಕೂಡಾ ಕೆಟ್ಟ ಸಿನಿಮಾವನ್ನು ಗೆಲ್ಲಿಸುವುದಕ್ಕೆ ಸಾಧ್ಯವಿಲ್ಲ. ಒಂದು ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾ ಆಗಿಯೇ ಇರುತ್ತದೆ. ಇದು ಮೂಲಭೂತವಾದ ವಿಚಾರವಾಗಿದ್ದು ಇದರಲ್ಲಿ ಯಾವುದೇ ರೀತಿಯ ಗಹನವಾದ ವಿಷಯವಿಲ್ಲ, ಎಂದು ಹೇಳುವ ಮೂಲಕ ದೀಪಿಕಾ ಪಡುಕೋಣೆ ಅವರ ಹೊಸ ಸಿನಿಮಾವನ್ನು ಟೀಕಿಸಿದ್ದಾರೆ. ಕಂಗನಾ ಹೇಳಿಕೆಯನ್ನು ಕಂಡು ಸಹಜ ಭಾಗ್ಯ ದೀಪಿಕಾ ಪಡುಕೋಣೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಆದರೆ ಇನ್ನೊಂದಷ್ಟು ಜನ ಕಂಗನಾ ಅವರ ಹೇಳಿಕೆಗೆ ಮೆಚ್ಚುಗೆಯನ್ನು ನೀಡಿದ್ದಾರೆ.

Leave a Reply

Your email address will not be published.