ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರಲ್ಲಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಈಗಾಗಲೇ ತಾನೊಬ್ಬ ಪ್ರಬಲ ಸ್ಪರ್ಧಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಮನೆಯ ಕೆಲಸಗಳಲ್ಲೂ ಸಹಾ ಮೆಚ್ಚುಗೆ ಪಡೆದಿರುವ ಅವರು ಟಾಸ್ಕ್ ಗಳ ವಿಚಾರದಲ್ಲಿಯೂ ಹಿಂದೆ ಬಿದ್ದಿಲ್ಲ. ಇದೀಗ ಬಿಗ್ ಬಾಸ್ ನೀಡಿದ್ದ ದೊಡ್ಡ ಚೆಂಡನ್ನು ಹಿಡಿದಿಟ್ಟುಕೊಳ್ಳುವ ಟಾಸ್ಕ್ ಅನ್ನು ಸಹಾ ಗೆದ್ದು ಅವರು ಮನೆಯವರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ವಿಶೇಷ ಟಾಸ್ಕ್ ಗಳನ್ನು ನೀಡಿ, ಹಣ ಗಳಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಹೀಗೆ ಸಂಗ್ರಹಿಸಲಾದ ಹಣವನ್ನು ಪ್ರೇಕ್ಷಕರ ಅಭಿಪ್ರಾಯದ ಮೇರೆಗೆ ಫಿನಾಲೆಯಲ್ಲಿ ಒಬ್ಬ ಸ್ಪರ್ಧಿಗೆ ಅದನ್ನು ನೀಡಲಾಗುವುದು.
ಬಿಗ್ ಬಾಸ್ ಇಂತಹ ಒಂದು ವಿಶೇಷ ಟಾಸ್ಕ್ ನೀಡುತ್ತಾ ಕೈಯಲ್ಲಿ ಒಂದು ಬೃಹತ್ ಚೆಂಡನ್ನು ಹಿಡಿದಿಟ್ಟುಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಇದನ್ನು ಸೋಮಣ್ಣ ಮಾಚಿಮಾಡ ಮತ್ತು ಆರ್ಯವರ್ಧನ್ ಗುರೂಜಿ ಇಬ್ಬರೂ ಪೂರ್ಣಗೊಳಿಸಿದ್ದು, ಬಿಗ್ ಬಾಸ್ ಆರು ಸಾವಿರ ರೂ.ಗಳ ಹೆಚ್ಚವರಿಯಾಗಿ ನೀಡಿದ್ದಾರೆ. ಸೋಮಣ್ಣ ಮಾಚಿಮಾಡ ಟಾಸ್ಕ್ ಪೂರ್ತಿ ಮಾಡಿದ ಮೇಲೆ ಮನೆಯಲ್ಲಿದ್ದ ಸಾನ್ಯಾ ಅಯ್ಯರ್ ಸೋಮಣ್ಣ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದು, ಏನೋ ಗೊತ್ತಿಲ್ಲ, ತುಂಬಾ ಪ್ರೌಡ್ ಫೀಲ್ ಆಗ್ತಿದೆ. ಮನಸಾರೆ ಖುಷಿ ಆಗ್ತಿದೆ ಎಂದು ಕಣ್ಣೀರು ಹಾಕುತ್ತಾ, ಭಾವುಕರಾಗಿ ಮಾತನಾಡಿದ್ದಾರೆ.
ಆಗ ಸೋಮಣ್ಣ ಮಾಚಿಮಾಡ, ನೀವು ಅಳಬೇಡಿ ಪ್ಲೀಸ್, ನಾನು ಲೈಫ್ ನಲ್ಲಿ ತುಂಬಾ ಸೋತು ಬಿಟ್ಟಿದ್ದೀನಿ. ಎಷ್ಟೇ ಹಾರ್ಡ್‌ವರ್ಕ್ ಮಾಡಲಿ, ಎಷ್ಟೇ ಕಷ್ಟ ಪಡಲಿ, ಫೇಮ್ ಇದೆ, ನೇಮ್ ಇದೆ, ಆದರೆ ತುಂಬಾ ಸೋತೆ ಲೈಫ್‌ನಲ್ಲಿ. ಫ್ಯಾಮಿಲಿ ಲೈಫ್‌ನಲ್ಲಿ ಸೋತೆ. ಮನೆಯಲ್ಲಿ ಎಲ್ಲರೂ ನನ್ನನ್ನ ಕಸದ ಹಾಗೆ ನೋಡಿಬಿಟ್ಟರು ಎಂದು ಹೇಳಿಕೊಂಡು ಭಾವುಕರಾಗಿದ್ದಾರೆ. ಇದೇ ವೇಳೆ ಅವರು ನಾನು ಅನಾಥನ ತರಹ ಬದುಕಿದ್ದೀನಿ. ಈಗಲೂ ಅನಾಥನ ತರಹವೇ ಬದುಕುತ್ತಿದ್ದೀನಿ. ಲೈಫ್ ನ ಗಿವಪ್ ಮಾಡಬೇಕು ಇಲ್ಲ. ಇಲ್ಲಿ ಹೊಸ ಬದುಕು ಕಟ್ಟಿಕೊಳ್ಳಬೇಕು ಅಂತ ನಾನು ಬಂದಿದ್ದು.
ಮನೆಯಲ್ಲಿ ಎಲ್ಲರೂ ನನ್ನನ್ನ ಕಸದ ಹಾಗೆಯೇ ಕಂಡರು. ಮನೆಗೆ ನಾನು ಮಗ ಅಲ್ಲ ಅನ್ನೋ ತರಹ ಬದುಕಿದ್ದು ಎಂದು ಸೋಮಣ್ಣ ಮಾಚಿಮಾಡ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಆಗ ರಾಕೇಶ್ ಅಡಿಗ ಸೋಮಣ್ಣ ಅವರಿಗೆ ಸಮಾಧಾನ ಮಾಡುತ್ತಾ, ನೀವು ಗೆಲ್ಲೋದಕ್ಕೆ ಅದೆಲ್ಲಾ ಪ್ರಿಪರೇಷನ್, ನೀವು ಯಾವತ್ತೂ ಸೋಲಲ್ಲ. ದೇವರು ನಿಮ್ಮನ್ನು ಸಿದ್ಧ ಮಾಡುತ್ತಿದ್ದ. ಒಂದೊಂದು ಏಟಿನಿಂದ ಶಿಲೆ ಆಗಿದೆ ಎಂದು ಸೋಮಣ್ಣ ಅವರಿಗೆ ತಮ್ಮ ಸಮಾಧಾನದ ಮಾತುಗಳನ್ನು ಅವರು ಹೇಳಿದ್ದಾರೆ.. ಸೋಮಣ್ಣ ಮಾಚಿಮಾಡ ಅವರು ಭಾವುಕರಾಗಿದ್ದು ಅನೇಕರ ಮನಸ್ಸನ್ನು ಭಾವುಕರನ್ನಾಗಿ ಮಾಡಿದೆ.