ಕಷ್ಟ ಕಳೆದು ಜೀವನ ಮತ್ತೊಮ್ಮೆ ಸುಂದರವಾಗಿದೆ: ಕೇಶ ಮುಂಡನ ಮಾಡಿಸಿಕೊಂಡ ಜನಪ್ರಿಯ ನಟಿ

Entertainment Featured-Articles News

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಪ್ರಸ್ತುತ ತಮ್ಮ ಮಗುವಿನ ನಿರೀಕ್ಷೆಯಲ್ಲಿ, ತಾಯಿಯಾಗುವ ಸಂಭ್ರಮದಲ್ಲಿ ಸಂತೋಷದ ದಿನಗಳನ್ನು ಕಳೆಯುತ್ತಿದ್ದಾರೆ. ನಟಿ ಸಂಜನಾ ಗಲ್ರಾನಿ ಆಗಾಗ ಮಾಧ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಈ ನಟಿಯು ತಮ್ಮ ಜೀವನದ ಕುರಿತಾದ ಹಾಗೂ ಒಂದಷ್ಟು ಮುಖ್ಯವಾದ ವಿಷಯಗಳ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಈ ಮೂಲಕ ಅವರು ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ. ಪ್ರಸ್ತುತ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಹೊಸ ಫೋಟೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅಲ್ಲದೇ ಇದೊಂದು ವಿಶೇಷ ಫೋಟೋ ಕೂಡಾ ಆಗಿದೆ. ಸಂಜನಾ ಫೋಟೋ ಹಂಚಿಕೊಂಡು, ಅದರ ಜೊತೆಗೆ ಕೆಲವೊಂದು ಪ್ರಮುಖವಾದ ವಿಚಾರಗಳನ್ನು ಸಹ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ತಾಯಿಯಾಗುವ ಸಂಭ್ರಮದಲ್ಲಿರುವ ನಟಿ ಸಂಜನಾ ಗಲ್ರಾನಿ ತಮ್ಮ ಕೇಶಮುಂಡನ ವನ್ನು ಮಾಡಿಸಿಕೊಂಡಿದ್ದಾರೆ. ಅವರು ಒಂದು ಕೃತಜ್ಞತೆಯ ಭಾವನೆಯಿಂದ ಸರ್ವಶಕ್ತನಾದ ಭಗವಂತನ ಹೆಸರಿನಲ್ಲಿ ಕೇಶಮುಂಡನ ವನ್ನು ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೇಶಮುಂಡನ ಮಾಡಿಸಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಂಜನಾ ತಮ್ಮ ಪೋಸ್ಟ್ ನಲ್ಲಿ, ಸೌಂದರ್ಯವು ನೋಡುಗರ ಕಣ್ಣಿನಲ್ಲಿದೆ. ಅದಕ್ಕೆ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಲ್ಲಿ ಮಾಡಿಕೊಂಡಿದ್ದ ಕೋರಿಕೆಯನ್ನು ಈಡೇರಿಸಲು ಕೇಶ ಮುಂಡನ ಮಾಡಿಸಿಕೊಂಡಿದ್ದೇನೆ. ತುಂಬಾ ಕಷ್ಟಗಳನ್ನು ದಾಟಿದ ನಂತರ ಜೀವನ ಮತ್ತೊಮ್ಮೆ ಸುಂದರವಾಗಿದೆ. ನನ್ನ ಜೀವನದಲ್ಲಿನ ಈ ಸಂತೋಷಕ್ಕಾಗಿ ನಾನು ದೇವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

ನನ್ನ ಮಗು ನನ್ನ ಜೀವನಕ್ಕೆ ಶೀಘ್ರದಲ್ಲೇ ಬರಲಿದೆ.
ನನ್ನ ಕೃತಜ್ಞತೆ ಹಾಗೂ ಧನ್ಯವಾದಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಬರೆದುಕೊಂಡು ಕೊನೆಯಲ್ಲಿ ಸಂಜನಾ ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಸ್ಮಿ ಎಂದು ಬರೆದುಕೊಂಡಿದ್ದಾರೆ. ಸಂಜನಾ ಅವರ ಪೋಸ್ಟ್ ಗೆ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅಲ್ಲದೇ ಅವರ ಮಗುವಿನ ನಿರೀಕ್ಷೆಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published.