ಕಲ್ಲೂ ಕರುಗುವ ಹಾಗೆ ಬಿಗ್ ಬಾಸ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ: ಇದಕ್ಕೆ ಕಾರಣ ಪ್ರೇಕ್ಷಕರು ಅಂದ್ರೆ ನಂಬ್ತೀರಾ?

0 0

ಬಿಗ್ ಬಾಸ್ ಓಟಿಟಿ ಕನ್ನಡ ಪ್ರಾರಂಭವಾದಾಗಿನಿಂದಲೂ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯನ್ನು ಮಾಡುತ್ತಾ, ಬಹಳಷ್ಟು ಗಮನವನ್ನು ಸೆಳೆಯುತ್ತಿದೆ. ಈ ಬಾರಿ ಓಟಿಟಿಯಲ್ಲಿ ಆರಂಭವಾದ ಬಿಗ್ ಬಾಸ್ ನ ಮೊದಲ ಸೀಸನ್ ನಲ್ಲಿ, ಮನೆಯ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶ ನೀಡಿದವರು ಆರ್ಯವರ್ಧನ್ ಗುರೂಜಿ. ಮೊದಲ ವಾರದಲ್ಲಿ ಬಾಸ್ ಮನೆಯಲ್ಲಿ ಸಾಕಷ್ಟು ಹುಮ್ಮಸ್ಸು ಹಾಗೂ ಹುರುಪುನಿಂದ, ತನ್ನದೇ ಆದ ಶೈಲಿಯಲ್ಲಿ ಬಿಗ್ ಬಾಸ್ ಮನೆಯ ಆಟವನ್ನು ಆಡುತ್ತಾ, ಎಲ್ಲರನ್ನೂ ಮನರಂಜಿಸುತ್ತಾ ಬಂದಿದ್ದ ಆರ್ಯವರ್ಧನ್ ಗುರೂಜಿ ಅವರು ಎರಡನೇ ವಾರದಲ್ಲಿ ಮನೆಯ ಯಾವ ಸದಸ್ಯರಿಗೂ ಸಹಾ ಬೇಡವಾಗಿದ್ದಾರೆ. ಇದು ಆರ್ಯವರ್ಧನ್ ಗುರೂಜಿ ಅವರಿಗೂ ಬೇಸರವನ್ನುಂಟು ಮಾಡಿದೆ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದರ ವಿಚಾರವಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಕರುನಾಡ ವಾರಿಯರ್ಸ್ ಮತ್ತು ಶಕ್ತಿ ಎನ್ನುವ ಹೆಸರಿನಲ್ಲಿ ಎರಡು ತಂಡಗಳು ಸಿದ್ಧವಾಯಿತು. ಎರಡು ತಂಡಗಳು ತಮ್ಮ ತಂಡದ ಸದಸ್ಯರಾಗಿ ತಲಾ ಆರು ಜನರನ್ನು ಮಾಡಿಕೊಳ್ಳಬೇಕೆಂದು ಕ್ಯಾಪ್ಟನ್ ಗಳಿಗೆ ಸೂಚನೆಯನ್ನು ನೀಡಲಾಯಿತು. ಆದರೆ ಈ ವೇಳೆ ಎರಡು ತಂಡದ ಕ್ಯಾಪ್ಟನ್ ಗಳು ಗುರೂಜಿ ಅವರನ್ನು ಬಿಟ್ಟು, ತಂಡಕ್ಕೆ ಅಗತ್ಯ ಇರುವ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಯ್ಕೆಯ ನಂತರ ಗುರೂಜಿಯವರು ಯಾವ ತಂಡಕ್ಕೂ ಬೇಡವಾದ ಸದಸ್ಯರಾಗಿ ಉಳಿಯಬೇಕಾಯಿತು.

ತಮ್ಮನ್ನು ಯಾವುದೇ ತಂಡದಲ್ಲಿ ಸೇರಿಸಿಕೊಂಡಿಲ್ಲ ಎನ್ನುವಂತಹ ನೋವು ಹಾಗೂ ದುಃಖ ಅವರನ್ನು ಬಹಳವಾಗಿ ಕಾಡತೊಡಗಿತ್ತು. ಈ ಹಿನ್ನೆಲೆಯಲ್ಲಿ ಒಂದು ವೋಟ್ ಪೋಲ್ ನಡೆಸಲಾಯಿತು. ಅದರಲ್ಲಿ ಆರ್ಯವರ್ಧನ್ ಗುರೂಜಿಯನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೇ ? ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದೆ ಕೇಳಲಾಯಿತು. ಈ ಪ್ರಶ್ನೆಗೆ ಪ್ರೇಕ್ಷಕರಿಂದ ಸಕಾರಾತ್ಮಕವಾದ ಉತ್ತರ ಬಂದಿದೆ. ಅಂದರೆ ಆರ್ಯವರ್ಧನ್ ಗುರೂಜಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರ ಪರವಾಗಿ ವೋಟ್ ಗಳು ಬಂದಿವೆ.ಈ ಕಾರಣದಿಂದಾಗಿ ಅನಿವಾರ್ಯವಾಗಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲೇಬೇಕಾಯಿತು.

ಇನ್ನು, ಪ್ರೇಕ್ಷಕರು ತಮ್ಮನ್ನು ಆಯ್ಕೆ ಮಾಡಿದ್ದಾರೆ ಎನ್ನುವ ವಿಷಯವನ್ನು ತಿಳಿದ ಕೂಡಲೇ ಆರ್ಯವರ್ಧನ್ ಗುರೂಜಿ ಅವರು ಸಿಕ್ಕಾಪಟ್ಟೆ ಭಾವುಕರಾಗಿದ್ದಾರೆ. ಅವರು ಕ್ಯಾಮರಾ ಮುಂದೆ ಬಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ನಿಮ್ಮ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಕೈಮುಗಿದು ಧನ್ಯವಾದಗಳನ್ನು ಹೇಳಿದ್ದಾರೆ. ಇದೇ ವೇಳೆ ಅವರು ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ ಎಂದು ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಮನವಿಯೊಂದನ್ನು ಸಹಾ ಮಾಡಿಕೊಂಡಿದ್ದಾರೆ.

Leave A Reply

Your email address will not be published.