ಕರ್ನಾಟಕದ ಪಾಲಿಗೆ ಇಂದು ಕರಾಳ ಶುಕ್ರವಾರ: ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ ಪವರ್ ಸ್ಟಾರ್ ಅಪ್ಪು

Entertainment Featured-Articles News

ಕನ್ನಡ ಸಿನಿ ರಂಗಕ್ಕೊಂದು ಬರ ಸಿಡಿಲು ಬಡಿದಿದೆ. ಯಾರೂ ಊಹಿಸಿರದ ನೋವು ಅಸಂಖ್ಯಾತ ಸಿನಿ ಪ್ರೇಮಿಗಳಗಿ ಆ ಘಾ ತವನ್ನು ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತೀವ್ರವಾದ ಹೃದಯಾಘಾತ ಆದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವಿಕ್ರಮ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಅಪ್ಪು ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಭಿಮಾನಿಗಳಲ್ಲಿ ಆ ತಂ ಕವನ್ನು ಮೂಡಿಸಿತ್ತು ಪುನೀತ್ ಅವರಿಗೆ, ಇಂದು ಬೆಳಿಗ್ಗೆ 11:30 ಕ್ಕೆ ಎದೆ ನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ಬಂದಿದ್ದಾರೆ. ಅವರು ಬರುವಾಗಲೇ ಸ್ವಲ್ಪ ಸೀರಿಯಸ್​ ಆಗಿತ್ತು ಎನ್ನಲಾಗಿತ್ತು. ಇವೆಲ್ಲವುಗಳ ನಡುವೆಯೇ ಅಪ್ಪು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ಇಹಲೋಕ ತ್ಯಜಿಸಿದ್ದಾರೆ.

ಪುನೀತ್ ಅವರಿಗೆ ಗಂಭೀರ ಹೃದಯಾಘಾತವಾಗಿತ್ತು, ವೈದ್ಯರು ಕೂಡಾ ಆರೋಗ್ಯ ಗಂಭೀರವಾಗಿದೆ ಹಾಗೂ ಅವರ ಪರಿಸ್ಥಿತಿ ಬಗ್ಗೆ ಏನನ್ನೂ ಹೇಳೋಕೆ ಆಗಲ್ಲ ಎಂದಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಬಹಳ ಪ್ರಯತ್ನವನ್ನು ಮಾಡಿದ್ದರು.ಅಪ್ಪು ಅವರು ತಮ್ಮ ಫಿಟ್ನೆಸ್ ಬಗ್ಗೆ ಪುನೀತ್ ಹೆಚ್ಚು ಗಮನ ನೀಡುತ್ತಿದ್ದರು. ಅವರು ಪ್ರತಿದಿನವೂ ಸಹಾ ಜಿಮ್ ನಲ್ಲಿ ನಿಗಧಿತವಾಗಿ ವರ್ಕೌಟ್ ಮಾಡುವುದು ನಡೆಸುವುದು ಮರೆತಿದ್ದಿಲ್ಲ. ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಕೂಡಾ ಬಹಳಷ್ಟು ಕಾಳಜಿ ಇತ್ತು. ಆದರೆ ಇವೆಲ್ಲವುಗಳ ನಡುವೆ ಈಗ ಅವರ ಆರೋಗ್ಯದಲ್ಲಿ ಇಂತಹುದೊಂದು ಸಮಸ್ಯೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ದಿಢೀರ್ ಎನ್ನುವಂತೆ ಎಲ್ಲವೂ ನಡೆದಿರುವುದನ್ನು ನೋಡಿ ಜನರು ಇನ್ನೂ ಈ ಶಾ ಕ್ ನಿಂದ ಹೊರಗೆ ಬರಲಾಗಿಲ್ಲ.

ಪುನೀತ್ ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಪ್ರಾರ್ಥನೆ ಮಾಡಿದ್ದರು. ಆದರೆ ಆ ದೇವರ ನಿರ್ಧಾರವೇ ಬೇರೆಯಾಗಿತ್ತು ಎನಿಸುತ್ತದೆ. ಆಸ್ಪತ್ರೆಗೆ ಸೆಲೆಬ್ರಿಟಿಗಳು, ಮಂತ್ರಿಗಳು ಆಗಮಿಸುವುದನ್ನು ನೋಡಿ ಹೊರಗೆ ಅಭಿಮಾನಿಗಳ ದಂಡೇ ನೆರೆದಿತ್ತು. ಅದರಲ್ಲೂ ಯುವಜನರಿಗೆ ಐಕಾನ್ ಆಗಿದ್ದ ಪುನೀತ್ ರಾಜ್ ಕುಮಾರ್ ಅವರ ಈ ಅನಿರೀಕ್ಷಿತ ಅಗಲಿಕೆಯು ನಾಡಿನ ಜನರಿಗೆ ತೀರದ ನೋವನ್ನು ಉಳಿಸಿ ಹೋಗಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ನೋವನ್ನು ಮರೆಯಲು ಸ್ವಲ್ಪ ಕಷ್ಟವೇ ಆಗಬಹುದು. ಇದೊಂದು ಭರಿಸಲಾಗದ ಹಾಗೂ ಮಾತಿನಲ್ಲಿ ಹೇಳಲಾಗದ ನಷ್ಟ ಹಾಗೂ ನೋವಾಗಿದೆ.

Leave a Reply

Your email address will not be published. Required fields are marked *