ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ರಶ್ಮಿಕಾ ಚಾರ್ಮ್ ಗೆ ದಂಗಾದ ಬಾಲಿವುಡ್‌ !!

Entertainment Featured-Articles Movies News

ನಿನ್ನೆ ಬಾಲಿವುಡ್ ನಲ್ಲೆಲ್ಲಾ ದೊಡ್ಡ ಸುದ್ದಿಯೆಂದರೆ ಅದು ನಿರ್ಮಾಪಕ, ನಿರ್ದೇಶಕ ಹಾಗೂ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್ ಬರ್ತಡೇ ಪಾರ್ಟಿಯ ವಿಷಯ. ಹೌದು ನಿನ್ನೆ ಕರಣ್ ಜೋಹರ್ ತಮ್ಮ 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಂದು ಅವರು ಈ ಬಾರಿ ಬಾಲಿವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರಿಗೆಲ್ಲಾ ತಮ್ಮ ಜನ್ಮದಿನದ ಅದ್ದೂರಿ ಪಾರ್ಟಿಗೆ ಆಹ್ವಾನವನ್ನು ನೀಡಿದ್ದರು. ಒಂದರ್ಥದಲ್ಲಿ ಪಾರ್ಟಿ ಹೆಸರಲ್ಲಿ ಭಾರತೀಯ ಸಿನಿಮಾ ರಂಗವನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಕರಣ್ ಕೈ ಹಾಕಿದ್ದರು.

ಪ್ರತಿ ಬಾರಿ ಕರಣ್ ಜನ್ಮದಿನಕ್ಕೆ ಬಾಲಿವುಡ್ ಮಂದಿಗೆ ಮಾತ್ರವೇ ಆಹ್ವಾನ ಇರುತ್ತಿತ್ತು. ಆದರೆ ಈ ಬಾರಿ ಹಾಗೆ ಆಗಿಲ್ಲ. ಈ ಬಾರಿ ದಕ್ಷಿಣದ ಕಲಾವಿದರಾದ ಸಮಂತಾ, ರಶ್ಮಿಕಾ ಮಂದಣ್ಣ‌ ಹಾಗೂ ವಿಜಯ್ ದೇವರಕೊಂಡ ರಂತಹ ಸ್ಟಾರ್ ಗಳಿಗೆ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಸ್ಯಾಂಡಲ್ವುಡ್ ನಟ ಯಶ್ ಅವರಿಗೂ ಸಹಾ ಆಹ್ವಾನ ನೀಡಲಾಗಿತ್ತು ಎನ್ನುವ ಸುದ್ದಿಗಳು ಸಹಾ ಮಾದ್ಯಮಗಳಲ್ಲಿ ಹರಿದಾಡಿತ್ತು. ಇನ್ನು ಪಾರ್ಟಿಯ ವಿಶೇಷತೆ ಏನೆಂದರೆ ಅದು ರಶ್ಮಿಕಾ ಮಂದಣ್ಣ‌.

ಹೌದು, ಕರಣ್ ಜೋಹರ್ ಅವರ ಜನ್ಮದಿನದ ಪಾರ್ಟಿ ತಡರಾತ್ರಿಯವರೆಗೂ ನಡೆದಿದ್ದು, ಇದರಲ್ಲಿ ಎಲ್ಲರಿಗಿಂತ ಹೆಚ್ಚು ಮಿಂಚಿದ್ದು ಮಾತ್ರ ನಟಿ ರಶ್ಮಿಕಾ ಮಂದಣ್ಣ ಎನ್ನಲಾಗಿದೆ. ಕಪ್ಪು ಬಣ್ಣದ ವಿಶೇಷ ವಿನ್ಯಾಸದ ಕಾಸ್ಟ್ಯೂಮ್ ಧರಿಸಿದ್ದ ರಶ್ಮಿಕಾ ಪಾರ್ಟಿಯಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದರು. ತನ್ನ ಅಂದವಾದ ಡ್ರೆಸ್ ನಲ್ಲಿ ರಶ್ಮಿಕಾ ಅಪ್ಸರೆಯಂತೆ ಪಾರ್ಟಿಯಲ್ಲಿ ಮಿಂಚಿದ್ದು ಅನೇಕರ ಗಮನವನ್ನು ಸೆಳೆದಿದ್ದಾರೆ.

ಇನ್ನು ವಿಜಯ್ ದೇವರಕೊಂಡ ಸಹಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರೂ ಸಹಾ ರಶ್ಮಿಕಾ ಮತ್ತು ವಿಜಯ್ ಆದಷ್ಟು ಅಂತರವನ್ನು ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಇತ್ತೀಚಿಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಗಳು ಹರಿದಾಡಿವೆ. ಅಲ್ಲದೇ ಕೆಲವು ದಿನಗಳಿಂದಲೂ ಅವರು ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ರಶ್ಮಿಕಾ ನಟನ ಜನ್ಮದಿನಕ್ಕೆ ವಿಶ್ ಕೂಡಾ ಮಾಡಿಲ್ಲ ಎನ್ನುವುದು ಸತ್ಯವಾದ ಮಾತು.

Leave a Reply

Your email address will not be published.