ಕಮಲಿ ಸೀರಿಯಲ್ ನಿರ್ದೇಶಕನ ಬಂಧನ: ಏನೀ ಅಕಸ್ಮಾತ್ ಬೆಳವಣಿಗೆ?

Entertainment Featured-Articles News

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಧಾರಾವಾಹಿಗಳಲ್ಲಿ ಕಮಲಿ ಧಾರಾವಾಹಿ ಸಹಾ ಒಂದಾಗಿದೆ. ಈ ಧಾರಾವಾಹಿ ಕಳೆದ ಕೆಲವು ವರ್ಷಗಳಿಂದಲೂ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಹೊಸ ಹೊಸ ತಿರುವುಗಳೊಂದಿಗೆ ಧಾರಾವಾಹಿ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಆರಂಭದಲ್ಲಿ ರಾತ್ರಿ ಏಳು ಗಂಟೆಗೆ ಪ್ರಸಾರವಾಗುತ್ತಿದ್ದ ಕಮಲಿ ಈಗ ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಪ್ರಸಾರವನ್ನು ಕಾಣುತ್ತಿದೆ. ಸಮಯ ಬದಲಾದರೂ ಸಹಾ ಪ್ರೇಕ್ಷಕರ ಆಸಕ್ತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಸೀರಿಯಲ್ ಜನ ಮನ್ನಣೆ ಪಡೆದು ಮುಂದೆ ಸಾಗಿದೆ‌.

ಇದೀಗ ಈ ಧಾರಾವಾಹಿಯ ಬಗ್ಗೆ ಹೊಸದೊಂದು ಸುದ್ದಿ ಹೊರಗೆ ಬಂದಿದೆ. ಹೌದು, ಧಾರಾವಾಹಿ ನಿರ್ಮಾಪಕರೊಬ್ಬರಿಂದ ಹಣ ಪಡೆದು, ವಂಚನೆಯನ್ನು ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕರಾದ ಅರವಿಂದ್​ ಕೌಶಿಕ್​ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅರವಿಂದ್​ ಕೌಶಿಕ್​ ಅವರು ಕನ್ನಡ ಕಿರುತೆರೆಯಲ್ಲಿ ಹಾಗೂ ಬೆಳ್ಳಿತೆರೆ ಹೀಗೆ ಎರಡೂ ಕಡೆಗಳಲ್ಲಿ ಅವರು  ಹೆಸರನ್ನು ಮಾಡಿದ್ದಾರೆ.

ನಿರ್ದೇಶಕ ಅರವಿಂದ್ ಕೌಶಿಕ್ ಅವರು ಈ ಹಿಂದೆ ಕನ್ನಡದಲ್ಲಿ, ನಮ್ ಏರಿಯಾದಲ್ಲಿ ಒಂದಿನ,‌ ಹುಲಿರಾಯ ಹಾಗೂ ಶಾರ್ದೂಲ ಹೆಸರಿನ  ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಸೀರಿಯಲ್ ಕಮಲಿ ಯನ್ನು ಸಹಾ ಅವರೇ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕನ ಮೇಲೆ ಬಂದಿರುವ ಆರೋಪವಾದರು ಏನು ಎನ್ನುವುದಾದರೆ,  ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ ನಿರ್ಮಾಪಕರಾದ ರೋಹಿತ್​ ಅವರು 73 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಈ ಹಣವನ್ನು ಅವರು 2018 ರಲ್ಲಿ ಸೀರಿಯಲ್ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಆದರೆ. ಧಾರಾವಾಹಿ ತೆರೆ ಕಂಡ ನಂತರ ಹಣ ಅವರಿಗೆ ಹಣವನ್ನು ಹಿಂತಿರುಗಿಸದೇ, ಸೀರಿಯಲ್ ನ ಲಾಭಾಂಶವನ್ನೂ ಸಹಾ ನೀಡದೇ ವಂಚನೆ ಮಾಡಲಾಗಿದೆ ಎಂದು ರೋಹಿತ್ ಅವರು ನಿರ್ದೇಶಕ ಅರವಿಂದ್ ಕೌಶಿಕ್​ ವಿರುದ್ಧ ಆರೋಪವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ರೋಹಿತ್ ಅವರು  ವೈಯ್ಯಾಲಿಕಾವಲ್ ಠಾಣೆಗೆ ದೂರು ದಾಖಲಿಸಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ 420 ಸೆಕ್ಷನ್​ ಅಡಿ ಪ್ರಕರಣ ದಾಖಲಾಗಿದ್ದು, ವೈಯ್ಯಾಲಿಕಾವಲ್ ಪೊಲೀಸರು ಅರವಿಂದ್ ಕೌಶಿಕ್​ರನ್ನು ಬಂಧಿಸಿದ್ದಾರೆನ್ನಲಾಗಿದೆ.

Leave a Reply

Your email address will not be published.