ಕಮಲಿ ಸೀರಿಯಲ್ ಗೆ ಬೀಳುತ್ತಾ ಬ್ರೇಕ್? ಬಿಗ್ ಬಾಸ್ ಗೆ ಕಿರುತೆರೆಯ ಈ ನಟಿ ಎಂಟ್ರಿ ಪಕ್ಕಾ?

Entertainment Featured-Articles Movies News

ಓಟಿಟಿ ಬಿಗ್ ಬಾಸ್ ಗೆ ತೆರೆ ಬಿದ್ದಾಗಿದೆ. ಟಿವಿಯಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಆರಂಭಕ್ಕೆ ದಿನಗಣನೇ ಈಗಾಗಲೇ ಆರಂಭವಾಗಿದೆ. ಕನ್ನಡ ಬಿಗ್ ಬಾಸ್ ಸೀಸನ್ 9 ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಮನೆಯೊಳಗೆ ಪ್ರವೇಶ ಮಾಡುತ್ತಾರೆ ಎನ್ನುವ ವಿಚಾರವಾಗಿ ಚರ್ಚೆಗಳು ಪ್ರಾರಂಭವಾಗಿದ್ದು, ಕೆಲವು ಸೆಲೆಬ್ರಿಟಿಗಳ ಹೆಸರುಗಳು ಕೂಡಾ ಹರಿದಾಡವೆ. ಬಿಗ್ ಬಾಸ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ಮೆಚ್ಚಿ ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಹೊಸ ಸೀಸನ್ ಆರಂಭಕ್ಕೂ ಮೊದಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕುತ್ತದೆ.

ಕೆಲವೇ ದಿನಗಳ ಹಿಂದೆಯಷ್ಟೇ ಜನ ಅನಿರುದ್ಧ್ ಅವರು ಬಿಗ್ ಬಾಸ್ ಗೆ ಹೋಗ್ತಾರೆ ಎನ್ನುವ ಒಂದು ಸುದ್ದಿ ಹರಿದಾಡಿತ್ತು. ಆದರೆ ಅನಂತರ ನಟ ಅನಿರುದ್ಧ್ ಅವರ ಸೋಶಿಯಲ್ ಮೀಡಿಯಾ ಮೂಲಕ ತಾನು ಬಿಗ್ ಬಾಸ್ ಗೆ ಹೋಗ್ತಿಲ್ಲ ಎನ್ನುವ ಸ್ಪಷ್ಟನೆ ನೀಡಿದ್ದರು. ಈಗ ಇದರ ಬೆನ್ನಲ್ಲೇ ಕನ್ನಡ ಕಿರುತೆರೆಯ ಜನಪ್ರಿಯ ನಟಿಯ ಹೆಸರು ಹರಿದಾಡಿದೆ.‌ ಈಗಾಗಲೇ ಓಟಿಟಿ ಯ ಬಿಗ್ ಬಾಸ್ ನಿಂದ ನಾಲ್ಕು ಜನರು ಅಂದರೆ ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಟಿವಿ ಬಿಗ್ ಬಾಸ್ ಗೆ ಬರುವುದು ಪಕ್ಕಾ ಆಗಿದೆ. ಅಲ್ಲದೇ ಹಿಂದಿನ ಸೀಸನ್ ಗಳಲ್ಲಿ ಭಾಗವಹಿಸಿದ್ದ, ಒಂದಷ್ಟು ಹಳೆಯ ಮುಖಗಳು ಸಹಾ ಈ ಬಾರಿ ಬಿಗ್ ಬಾಸ್ ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗ ಇವೆಲ್ಲವುಗಳ ಜೊತೆಗೆ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ತನ್ನ ಅಂದ ಮತ್ತು ನಟನೆಯ ಮೂಲಕ ಹೆಸರನ್ನು ಗಳಿಸಿ, ತೆಲುಗು ಕಿರುತೆರೆಗೂ ಎಂಟ್ರಿ ನೀಡಿರುವ, ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಓಂಕಾರ್ ಗೌಡ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ನಟಿ ಅಮೂಲ್ಯ ಬರೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಆದರೆ ಈ ವಿಷಯ ಎಷ್ಟು ನಿಜ ಎನ್ನುವುದು ಮಾತ್ರ ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಈ ಸುದ್ದಿಯ ಸತ್ಯಾಸತ್ಯತೆ ಇನ್ನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ.

ನಟಿ ಪ್ರಸ್ತುತ ಕಮಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ತೆಲುಗಿನ ಕಿರುತೆರೆಗೆ ಸಹಾ ಎಂಟ್ರಿ ನೀಡಿದ್ದಾರೆ. ಆದ್ದರಿಂದಲೇ ಅಮೂಲ್ಯ ಅವರು ಬಿಗ್ ಬಾಸ್ ಗೆ ಬರುವುದು ನಿಜವೋ, ಸುಳ್ಳೋ ಎನ್ನುವುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಅಲ್ಲದೇ ಸೀರಿಯಲ್ ಗಳಿಂದ ಸ್ವಲ್ಪ ಬ್ರೇಕ್ ಪಡೆದು ಬಿಗ್ ಬಾಸ್ ಗೆ ಎಂಟ್ರಿ ನೀಡಿ, ತಮ್ಮ ಅಭಿಮಾನಿಗಳು ಮತ್ತು ಕಿರುತೆರೆಯ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರ ಆಗ್ತಾರಾ ಅನ್ನೋದನ್ನು ಈಗ ಕಾದು ನೋಡಬೇಕಾಗಿದೆ. ‌

Leave a Reply

Your email address will not be published.