ಕನ್ಯಾಕುಮಾರಿ ಸೀರಿಯಲ್ ನ ಕನ್ನಿಕಾ ಅವರ ಅಸಲಿ ಹೆಸರು ಮತ್ತು ನಿಜ ಜೀವನದಲ್ಲಿ ಅವರು ಹೇಗಿದ್ದಾರೆ ನೋಡಿ

Entertainment Featured-Articles News
45 Views

ಕನ್ನಡ ಕಿರುತೆರೆ ಅಂದ್ರೆ ತಕ್ಷಣ ನೆನಪಾಗೋದು ಸೀರಿಯಲ್ ಗಳು ಆಮೇಲೆ ರಿಯಾಲಿಟಿ ಶೋ ಗಳು. ಆದ್ರೆ ಮೊದಲ ಸ್ಥಾನದಲ್ಲಿ ಇರೋದು ಸೀರಿಯಲ್ ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಮಹಿಳೆಯರಿಗೆ ಮನರಂಜನೆಗೆ ಇರುವ ದೊಡ್ಡ ಮಾದ್ಯಮ ಎಂದ್ರೆ ಈ ಸೀರಿಯಲ್ ಗಳಾಗಿವೆ‌ ಅನ್ನೋದು ಕೂಡಾ ವಾಸ್ತವ. ಇನ್ನು ಇತ್ತೀಚಿಗೆ ಟಿವಿ ಸೀರಿಯಲ್ ಗಳ ಗುಣಮಟ್ಟ ಹಾಗೂ ವೈಭವ ಕೂಡಾ ಅದ್ಭುತ ಅನ್ನೋ ತರ ಇದ್ದು, ಒಂದಕ್ಕಿಂತ ಇನ್ನೊಂದು ಅದ್ದೂರಿ ಸೀರಿಯಲ್ ಗಳು ಕಿರುತೆರೆಯಲ್ಲಿ ಮೂಡಿ ಬರುತ್ತಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುವ ಜೊತೆಗೆ ಅವರ ಮನಸ್ಸನ್ನು ಗೆಲ್ಲುವಲ್ಲಿಯೂ ಯಶಸ್ಸನ್ನು ಪಡೆದಿವೆ.

ಕೆಲವು ದಿನಗಳ ಹಿಂದೆಯಷ್ಟೇ ಕಿರುತೆರೆಯಲ್ಲಿ ದೈವ ಮತ್ತು ದುಷ್ಟ ಶಕ್ತಿಗಳ ನಡುವಿನ ಹೋರಾಟದ ಕಥಾನಕದೊಂದಿಗೆ, ಆಧುನಿಕ ನಿರ್ಮಾಣದಿಂದಾಗಿ ಜನರ ಅಪಾರವಾದ ಆಸಕ್ತಿ ಕೆರಳಿಸುತ್ತಾ, ಜನರ ಮನಸ್ಸನ್ನು ಗೆದ್ದು ಮುಂದೆ ಸಾಗಿದೆ ಕನ್ಯಾಕುಮಾರಿ ಹೆಸರಿನ ಹೊಸ ಧಾರಾವಾಹಿ. ಹೌದು ಕನ್ಯಾಕುಮಾರಿ ಕೆಲವೇ ದಿನಗಳಲ್ಲಿ ಕಿರುತೆರೆಯ ಕೋನದಲ್ಲಿ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡು ಯಶಸ್ಸಿನ ಹಾದಿಯ ಕಡೆಗೆ ನಾಗಾಲೋಟದಿಂದ ಮುನ್ನುಗ್ಗುತ್ತಿದೆ ಎಂದರೂ ತಪ್ಪಾಗಲಾರದು.

ಕನ್ಯಾಕುಮಾರಿ ಸೀರಿಯಲ್ ನ ಪ್ರಮುಖ ಪಾತ್ರ ನಾಯಕಿಯದ್ದಾಗಿದ್ದು, ನಾಯಕಿ ಕನ್ನಿಕಾ ಪಾತ್ರದ ಮೂಲಕ ಕಿರುತೆರೆಗೆ ಅಡಿಯಿಟ್ಟಿರುವ ಕಲಾವಿದೆ ಯಾರು ಎನ್ನುವುದು ಬಹಳಷ್ಟು ಜನರಿಗೆ ಆಸಕ್ತಿಯ ವಿಷಯವಾಗಿದೆ. ದೇವಿ ಭಕ್ತೆಯಾಗಿ, ಸರಳತೆಯ, ಸಾತ್ವಿಕತೆಯ ಮಾದರಿ ಹೆಣ್ಣು ಮಗಳಾಗಿ ಕಾಣಿಸಿಕೊಂಡು ಜನ ಮನ್ನಣೆ ಪಡೆದಿರುವ ಆ ನವ ನಟಿಯ ಬಗ್ಗೆ ತಿಳಿಯುವ ಆಸಕ್ತಿ ಸಹಾ ಅನೇಕರಿಗಿದ್ದು, ಆ ಆಸಕ್ತಿಗೆ ಇಲ್ಲಿದೆ ಉತ್ತರವನ್ನು ನಾವು ನೀಡಲು ಹೊರಟಿದ್ದೇವೆ.

ಕನ್ಯಾಕುಮಾರಿ ಎನ್ನುವ ಭಕ್ತಿಪ್ರಧಾನ ಸೀರಿಯಲ್ ನಲ್ಲಿ ಕನ್ನಿಕಾ ಪಾತ್ರದಲ್ಲಿನ ಜನರನ್ನು ರಂಜಿಸುತ್ತಿರುವ ನಟಿಯ ಹೆಸರು ಆಸಿಯಾ ಫಿರ್ದೋಸ್. ಆಸಿಯಾ ಅವರಿಗೆ ಇದೇ ಮೊದಲ ಸೀರಿಯಲ್ ಆಗಿದೆ. ಆಸಿಯಾ ಅವರು ಮಾಡೆಲಿಂಗ್ ಫೀಲ್ಡ್ ನಲ್ಲೂ ಸಕ್ರಿಯವಾಗಿದ್ದು, ಅದೇ ಕ್ಷೇತ್ರದಲ್ಲಿ ಅವರು ಪದವಿಯನ್ನು ಸಹಾ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ನೋಡಲು ಆಕರ್ಷಕವಾಗಿ ಇರುವ ಅವರು ಮೊದಲನೇ ಸೀರಿಯಲ್ ನ ಮೂಲಕವೇ ಪ್ರೇಕ್ಷಕರ ಮನಸ್ಸಿಗೆ ಹತ್ರಿರವಾಗಿದ್ದಾರೆ.

ಇನ್ಸ್ಟಾಗ್ರಾಂ ನಲ್ಲಿ ಸಾಕಷ್ಟು ಸಕ್ರಿಯವಾಗಿರುವ ಆಸಿಯಾ ಅವರು ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇನ್ಸ್ಟಾಗ್ರಾಂ ನಲ್ಲಿ 19 ಸಾವಿರಕ್ಕೂ ಅಧಿಕ ಮಂದಿ ಆಸಿಯಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಮೊದಲನೇ ಸೀರಿಯಲ್ ಮೂಲಕವೇ ಒಳ್ಳೆ ಹೆಸರನ್ನು ಪಡೆಯುತ್ತಿರುವ ಆಸಿಯಾ ಇನ್ನೂ ದೊಡ್ಡ ಹೆಸರನ್ನು ಪಡೆಯಲೆಂದು ಹಾರೈಸೋಣ.

Leave a Reply

Your email address will not be published. Required fields are marked *