ಕನ್ನಡ ಸಿನಿಮಾದಿಂದ ದೂರ ಉಳಿಯೋಕೆ ಅಸಲಿ ಕಾರಣ ಏನೆಂದು ಮಾದ್ಯಮದ ಮುಂದೆ ಹೇಳಿಕೊಂಡ ನಟಿ ರಶ್ಮಿಕಾ ಮಂದಣ್ಣ

0 0

ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ದಕ್ಷಿಣ ಸಿನಿ ರಂಗದಲ್ಲಿ ಬಹಳ ಬೇಡಿಕೆ ಇರುವ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಆದರೆ ಕನ್ನಡ ಚಿತ್ರರಂಗದಿಂದ ಸಿನಿಮಾರಂಗಕ್ಕೆ ಅಡಿಯಿಟ್ಟರೂ ಕೂಡಾ, ರಶ್ಮಿಕಾ ಕನ್ನಡಕ್ಕಿಂತ ಅನ್ಯ ಭಾಷೆಗಳಲ್ಲೇ ಹೆಚ್ಚು ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ಧೃವ ಸರ್ಜಾ ಜೊತೆಗಿನ ಪೊಗರು ಸಿನಿಮಾ ನಂತರ ಕನ್ನಡದಲ್ಲಿ ರಶ್ಮಿಕಾ ಅಭಿನಯದ ಯಾವುದೇ ಹೊಸ ಸಿನಿಮಾ ಕೂಡಾ ಘೋಷಣೆಯಾಗಿಲ್ಲ ಎನ್ನುವುದು ಸಹಾ ವಾಸ್ತವವಾಗಿದೆ.

ತೆಲುಗು ಚಿತ್ರರಂಗದಲ್ಲಿ ಒಂದಾದ ನಂತರ ಮತ್ತೊಂದು ಎನ್ನುವಂತೆ ಹೊಸ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಬಾಲಿವುಡ್ ಎನ್ನುವ ಕನಸಿನ ಲೋಕಕ್ಕೆ ಎಂಟ್ರಿ ನೀಡಿದ್ದು, ಅಲ್ಲಿ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇಷ್ಟೆಲ್ಲಾ ಸಿನಿಮಾಗಳ ನಡುವೆ ರಶ್ಮಿಕಾ ನಟಿಸಲಿರುವ ಮುಂದಿನ ಕನ್ನಡ ಸಿನಿಮಾ ಯಾವುದು?? ಎನ್ನುವ ವಿಷಯ ಮಾತ್ರ ಎಲ್ಲೂ ಚರ್ಚೆಗೆ ಬಂದಿಲ್ಲ. ಅಸಲು ಕನ್ನಡದಲ್ಲಿ ನಟಿಸುತ್ತಾರೋ, ಇಲ್ಲವೋ ಎಂದು ಕೂಡಾ ಅನುಮಾನವೊಂದಿದೆ.

ತೆಲುಗು, ತಮಿಳು ಮತ್ತು ಹಿಂದಿ ಹೇಗೆ ಅನ್ಯ ಭಾಷೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ರಶ್ಮಿಕಾ ತೊಡಗಿಕೊಂಡಿದ್ದಾರೆ. ಇಷ್ಟೆಲ್ಲಾ ಬೇಡಿಕೆ ಇರುವ ನಟಿಗೆ ಕನ್ನಡ ಸಿನಿಮಾಗಳ ಅವಕಾಶ ಬರುತ್ತಿಲ್ಲವೇ?? ಅಥವಾ ನಟಿಯೇ ಕನ್ನಡ ಸಿನಿಮಾಗಳನ್ನು ಮಾಡುತ್ತಿಲ್ಲವೇ?? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಎಲ್ಲರಿಗೂ ಮೂಡುತ್ತದೆ. ರಶ್ಮಿಕಾ ಕನ್ನಡ ಸಿನಿಮಾಗಳಲ್ಲಿ ಏಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

ಈಗ ಅವೆಲ್ಲವಕ್ಕೂ ಖುದ್ದು ರಶ್ಮಿಕಾ ಉತ್ತರವನ್ನು ನೀಡಿದ್ದಾರೆ. ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ನೀಡಿದ್ದು ಮಿಷನ್ ಮಜ್ನು ಸಿನಿಮಾದ ಮೂಲಕ. ಈ ಸಿನಿಮಾದ ಶೂಟಿಂಗ್ ಮುಗಿಸಿದ ನಂತರ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ರಶ್ಮಿಕಾ ಅವರು ಕನ್ನಡ ಸಿನಿಮಾಗಳಿಂದ ತಾನೇಕೆ ದೂರ ಉಳಿದಿದ್ದೇನೆ ಎನ್ನುವ ವಿಚಾರವಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಎಲ್ಲರಿಗೂ ಒಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಈಗಾಗಲೇ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಅದರಲ್ಲೂ ಕನ್ನಡ ಸಿನಿಮಾದಲ್ಲಿ ನಟನೆ ಮಾಡಬೇಕೆಂದರೆ ಇನ್ನಷ್ಟು ಎನರ್ಜಿ ಬೇಕು. ಈಗಿರುವ ಬ್ಯುಸಿ ಶೆಡ್ಯೂಲ್ ನಲ್ಲಿ 365 ದಿನಗಳು ಕೂಡಾ ಸಾಲುತ್ತಿಲ್ಲ ಎಂದು ಹೇಳುವ ಮೂಲಕ ಕನ್ನಡ ಸಿನಿಮಾಗಳಲ್ಲಿ ಏಕೆ ನಟಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಇನ್ನು ತಾನು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವು ದಕ್ಷಿಣದ ನಾಲ್ಕು ಭಾಷೆಗಳು ಮತ್ತು ಹಿಂದಿಯಲ್ಲಿ ಸಹಾ ಬರುತ್ತಿವೆ. ಅದರ ಜೊತೆಗೆ ಪ್ರತ್ಯೇಕವಾಗಿ ಬಾಲಿವುಡ್ ಸಿನಿಮಾಗಳು ಕೂಡಾ ಇರುವುದರಿಂದ ಇರುವ ಸಮಯವೂ ಸಾಕಾಗುತ್ತಿಲ್ಲ ಎನ್ನುವುದು ರಶ್ಮಿಕಾ ಅವರ ಮಾತಾಗಿದೆ.

Leave A Reply

Your email address will not be published.