ಕನ್ನಡ ಬಿಗ್ ಬಾಸ್ ಹೊಸ ಸೀಸನ್: ಈ ಬಾರಿ ಯಾರೆಲ್ಲಾ ದೊಡ್ಮನೆಗೆ ಎಂಟ್ರಿ ಕೊಡ್ತಿದ್ದಾರೆ??

Entertainment Featured-Articles News

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಶೋ ಎಂದರೆ ಬಿಗ್ ಬಾಸ್ ಎಂದು ಅನುಮಾನವೇ ಇಲ್ಲದೇ ಹೇಳಬಹುದು. ಬಿಗ್ ಬಾಸ್ ನೋಡುವ ಒಂದು ದೊಡ್ಡ ಪ್ರೇಕ್ಷಕ ವರ್ಗವೇ ಇದೆ ಎನ್ನುವುದು ಸಹಾ ವಾಸ್ತವ. ಬಿಗ್ ಬಾಸ್ ನ ಪ್ರಮುಖ ಆಕರ್ಷಣೆ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸ್ಯಾಂಡಲ್ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರು. ಸುದೀಪ್ ಅವರು ಕನ್ನಡ ಬಿಗ್ ಬಾಸ್ ಆರಂಭವಾದಾಗಿನಿಂದಲೂ ಶೋ ನ ನಿರೂಪಣೆ ಮಾಡುತ್ತಾ ಬಂದಿದ್ದು, ಯಶಸ್ವಿ 8 ಸೀಸನ್ ಗಳ ನಿರೂಪಣೆ ಮಾಡಿದ್ದಾರೆ.

ಕಳೆದ ಬಾರಿ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಡವಾಗಿ ಆರಂಭವಾಯ್ತು, ಮಧ್ಯದಲ್ಲಿ ಅದರ ಪಯಣವು ಅಲ್ಪ ಕಾಲ ನಿಂತಿತ್ತು. ಅನಂತರ ಮತ್ತೆ ಮೈಗೊಡವಿಕೊಂಡು ಬಂದ ಬಿಗ್ ಬಾಸ್ ಸೀಸನ್ ಎಂಟು ಭರ್ಜರಿಯಾಗಿ ಮುಗಿಯಿತು. ಇದಾದ ನಂತರ ಎಲ್ಲರಲ್ಲೂ ಇರುವ ಪ್ರಶ್ನೆ ಒಂದೇ, ಬಿಗ್ ಬಾಸ್ ನ ಹೊಸ ಸೀಸನ್ ಅಂದ್ರೆ ಸೀಸನ್ 9 ರ ಆರಂಭ ಯಾವಾಗ? ಎನ್ನುವುದು. ಸೀಸನ್ ಒಂಬತ್ತರ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಆದರೆ ಈ ಬಾರಿ ಸ್ಪರ್ಧಿ ಗಳು ಯಾರಾಗಬಹುದೆಂದು ಸಂಭವನೀಯ ಸ್ಪರ್ಧಿಗಳ ಪಟ್ಟಿ ಸುದ್ದಿಗಳಲ್ಲಿ ಹರಿದಾಡಿದೆ.

ಹಾಗಾದರೆ ಈ ಬಾರಿ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಬರುವ ಅವಕಾಶ ಇದೆ?? ಬನ್ನಿ ತಿಳಿಯೋಣ. ಸಾಮಾನ್ಯವಾಗಿ ಬಿಗ್ ಬಾಸ್ ಎಂದಾಗ ಸಖತ್ ಸುದ್ದಿ ಮಾಡಿರುವ, ವಿ ವಾ ದಗಳನ್ನು ಮೈಮೇಲೆ ಎಳೆದುಕೊಂಡು ಬಹು ಚರ್ಚಿತರಾದವರು, ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯತೆ ಪಡೆದವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುತ್ತಾರೆ. ಅದರಲ್ಲೂ ಸಾಕಷ್ಟು ಚರ್ಚೆಗಳಿಗೆ ಕಾರಣರಾದ ಸೆಲೆಬ್ರಿಟಿಗಳನ್ನು ನಾವು ಇಲ್ಲಿ ನಿರೀಕ್ಷಿಸಬಹುದು. ಈಗ ಅಂತಹ ಒಂದು ಆಧಾರದ ಮೇಲೆ ಕೆಲವರ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಮಾದ್ಯಮವೊಂದರ ವರದಿಯ ಪ್ರಕಾರ ಈ ಬಾರಿ ಬಿಗ್ ಬಾಸ್ ಗೆ ಪ್ರವೇಶ ನೀಡಲಿರುವ ಸ್ಪರ್ಧಿಗಳ ಪಟ್ಟಿ ಹೀಗಿದೆ. ಸ್ಯಾಂಡಲ್ವುಡ್ ನಟ, ಸಾಮಾಜಿಕ ಹೋರಾಟಗಾರ ಎನ್ನುವ ಹೆಸರನ್ನು ಗಳಿಸಿರುವ ಚೇತನ್ ಅವರು, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿರುವಂತಹ ಲಾಯರ್ ಜಗದೀಶ್, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಇತ್ತೀಚಿಗೆ ಸಾಕಷ್ಟು ಟ್ರೋಲ್ ಗೆ ಗುರಿಯಾಗಿ, ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ ಮಾದ್ಯಮವೊಂದರ ನಿರೂಪಕಿ ದಿವ್ಯ ವಸಂತ ಅವರ ಹೆಸರು ಕೇಳಿ ಬಂದಿದೆ.

ಇದಲ್ಲದೇ ಟಿಕ್ ಟಾಕ್, ಇನ್ಸ್ಟಾಗ್ರಾಂ ಮೂಲಕ ಜನಪ್ರಿಯತೆ ಪಡೆದಂತಹ ಸೋನು ಶ್ರೀನಿವಾಸ್ ಗೌಡ, ಕನ್ನಡದ ಪ್ರಖ್ಯಾತ ರ‌್ಯಾಪರ್ ಅಲೋಕ್, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ‌ಮಜಾಭಾರತದ ರಾಘವೇಂದ್ರ ಹಾಗೂ ನಜ್ಮಾ ಚಿಕ್ಕನೇರಳೆ ಹೆಸರುಗಳನ್ನು ಮಾದ್ಯಮವೊಂದು ಪಟ್ಟಿ ಮಾಡಿದೆ. ಇನ್ನು ಸೀರಿಯಲ್ ಗಳಲ್ಲಿ ದೊಡ್ದ ಮಟ್ಟದ ಜನಪ್ರಿಯತೆ ಪಡೆದಿರುವ, ಕಳೆದ ಬಾರಿ ಬರುವರೆಂಬ ನಿರೀಕ್ಷೆ ಇದ್ದ ನಟ ಅನಿರುದ್ಧ್, ನಟಿ ವಿನಯ ಪ್ರಸಾದ್ ಅವರ ನಿರೀಕ್ಷೆ ಪ್ರೇಕ್ಷಕರಿಗೆ ಇದೆ.

ಒಟ್ಟಾರೆ ಬಿಗ್ ಬಾಸ್ ನ ಹೊಸ ಸೀಸನ್ ಗಳಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಬರ್ತಾರೆ ಅಂತ ಈಗ ಚರ್ಚೆ ಪ್ರಾರಂಭವಾಗಿದೆ. ವಾಹಿನಿ ಅಧಿಕೃತ ಘೋಷಣೆ ಮಾಡೋವರೆಗೆ ಇಂತಹ ಹೆಸರುಗಳು ಪ್ರತಿ ಬಾರಿಯೂ ಹರಿದಾಡುತ್ತದೆ. ವಿಶೇಷ ಏನೆಂದರೆ ಹೀಗೆ ಹರಿದಾಡುವ ಕೆಲವು ಹೆಸರುಗಳ ಸೆಲೆಬ್ರಿಟಿಗಳು ಬಿಗ್ ಬಾಸ್ ಗೆ ಎಂಟ್ರಿ ನೀಡುವುದು ಸಹಾ ವಾಸ್ತವ. ಇನ್ನು ಈ ಬಾರಿ ಬಿಗ್ ಬಾಸ್ ಯಾವಾಗ? ಇದು ವಾಹಿನಿ ನೀಡಬೇಕಾದ ಉತ್ತರವಾಗಿದೆ.

Leave a Reply

Your email address will not be published.