ಕನ್ನಡ ಬಿಗ್ ಬಾಸ್ ಹೊಸ ಸೀಸನ್!! ಈ ಬಾರಿ ಶಾಕಿಂಗ್ ವಿಶೇಷಗಳೊಂದಿಗೆ ಬರ್ತಿದೆ ಬಿಗ್ ಬಾಸ್

Entertainment Featured-Articles Movies News

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಬಿಗ್ ಬಾಸ್ ಶೋ. ಕನ್ನಡದಲ್ಲಿ ಬಿಗ್ ಬಾಸ್ ಭರ್ಜರಿ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ಬಾರಿ ಒಂಬತ್ತನೇ ಸೀಸನ್ ನ ನಿರೀಕ್ಷೆಯಲ್ಲಿ ಇದ್ದಾರೆ ಕಿರುತೆರೆಯ ಪ್ರೇಕ್ಷಕರು ಮತ್ತು ಬಿಗ್ ಬಾಸ್ ಅಭಿಮಾನಿಗಳು. ಕಳೆದ ಬಾರಿ ಕೋವಿಡ್ ನಿಂದ ಬಿಗ್ ಬಾಸ್ ತಡವಾಗಿತ್ತು, ಅನಂತರ ಅದು ಪ್ರಸಾರವಾಗಿ ಯಶಸ್ಸನ್ನು ಪಡೆದುಕೊಂಡಿತ್ತು. ಅಲ್ಲದೇ ಕೋವಿಡ್ ಏರಿಕೆಯಿಂದಾಗಿ ಮಧ್ಯದಲ್ಲಿ ಬಿಗ್ ಬಾಸ್ ಗೆ ಬ್ರೇಕ್ ಬಿದ್ದಿತ್ತಾದರೂ ಅನಂತರ ಶೋ ಮತ್ತೆ ಆರಂಭವಾಗಿ ಜನರ ಮನಸ್ಸು ಗೆದ್ದು ಸೀಸನ್ ಯಶಸ್ವಿಯಾಗಿ ಮುಗಿದಿತ್ತು.

ಕನ್ನಡ ಬಿಗ್ ಬಾಸ್ ನ ಪ್ರಮುಖ ಆಕರ್ಷಣೆ ಎಂದರೆ ಅದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ನಿರೂಪಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾದಾಗಿನಿಂದಲೂ ಸುದೀಪ್ ಅವರೇ ಶೋ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ. ಇನ್ನು ಈ ಬಾರಿ ಬಿಗ್ ಬಾಸ್ ಯಾವಾಗ?? ಎನ್ನುವುದು ಪ್ರೇಕ್ಷಕರು ಹಾಗೂ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಈಗ ಈ ವಿಚಾರವಾಗಿ ಹೊಸದೊಂದು ಅಪ್ಡೇಟ್ ಹೊರ ಬಂದಿದ್ದು, ಬಿಗ್ ಬಾಸ್ ಅಭಿಮಾನಿಗಳಿಗೆ ಈ ವಿಚಾರ ಖುಷಿಯನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ.

ಹೌದು, ಬಿಗ್ ಬಾಸ್ ನ ಹೊಸ ಸೀಸನ್ ಬರುವ ಆಗಸ್ಟ್ ನ ಮೊದಲ ವಾದದಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈ ಬಾರಿ ಬಿಗ್ ಬಾಸ್ ಬಹಳ ವಿಶೇಷವಾಗಿದ್ದು ಕಲರ್ಸ್ ಕನ್ನಡದ ಜೊತೆಗೆ ಕಳೆದ ಬಾರಿಯ ಹಾಗೆ ವೂಟ್ ಸೆಲೆಕ್ಟ್ ನಲ್ಲಿ ಸಹಾ ಬಿಗ್ ಬಾಸ್ ಪ್ರಸಾರವಾಗಲಿದೆ ಎನ್ನಲಾಗಿದೆ. ಅಲ್ಲದೇ ಈ ಬಾರಿ ಬಿಗ್ ಬಾಸ್ ಟಿವಿ ಯಲ್ಲಿ ಮತ್ತು ಓಟಿಟಿ ಯಲ್ಲೂ ಸಹಾ ಪ್ರಸಾರ ಕಾಣಲಿದೆ ಎನ್ನಲಾಗಿದೆ. ಅಲ್ಲದೇ ಈ ಬಾರಿ ಟಿವಿಯ ಬಿಗ್ ಬಾಸ್ ಗೂ ಮೊದಲು ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ನಡೆಯಲಿದೆ ಎನ್ನಲಾಗಿದೆ.

ಮಿನಿ ಬಿಗ್ ಬಾಸ್ ಸೀಸನ್ 42 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಇಂಟರ್ ನೆಟ್ ಸ್ಟಾರ್ ಗಳು ಮತ್ತು ಇನ್ ಫ್ಲೂ ಯೆನ್ಸರ್ ಗಳು ಸ್ಪರ್ಧಿಗಳಾಗಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದರಲ್ಲಿನ ಕೆಲವು ಆರಿಸಿದ ಸ್ಪರ್ಧಿಗಳು ನಂತರ ಪ್ರಸಾರ ಕಾಣುವ ಪೂರ್ಣ ಪ್ರಮಾಣದ ಬಿಗ್ ಬಾಸ್ ನಲ್ಲಿ ಸಹಾ ಸ್ಪರ್ಧಿಗಳಾಗಿ ಭಾಗವಹಿಸುವರು ಎನ್ನಲಾಗಿದ್ದು, ಎರಡೂ ಬಿಗ್ ಬಾಸ್ ಗಳ ನಿರೂಪಣೆಯ ಹೊಣೆಯನ್ನು ಕಿಚ್ಚ ಸುದೀಪ್ ಅವರೇ ವಹಿಸಿಕೊಳ್ಳಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಕಳೆದ ಬಾರಿ ಹಿಂದಿಯಲ್ಲಿ ಮೊದಲ ಓಟಿಟಿ ಬಿಗ್ ಬಾಸ್ ಪ್ರಸಾರವಾಗಿತ್ತು. ಇದರಲ್ಲಿ ಸದ್ದು ಮಾಡಿದ ಮೂರು ಜನ ಸ್ಪರ್ಧಿ ಗಳು ಟಿವಿಯ ಬಿಗ್ ಬಾಸ್ ಗೆ ಬಂದಿದ್ದು ಮಾತ್ರವೇ ಅಲ್ಲದೇ ಫೈನಲ್ ಹಂತದವರೆಗೂ ತಲುಪಿದ್ದರು. ಇನ್ನೂ ತೆಲುಗಿನಲ್ಲಿ ಸಹಾ ಓಟಿಟಿ ಬಿಗ್ ಬಾಸ್ ನ ಮೊದಲ ಸೀಸನ್ ಯಶಸ್ವಿಯಾಗಿ ಮುಗಿದಿದೆ. ಕನ್ನಡದಲ್ಲೂ ಈ ಬಾರಿ ಓಟಿಟಿ ಬಿಗ್ ಬಾಸ್ ಬರಲಿದ್ದು, ಯಾವ ಮಟ್ಟಕ್ಕೆ ಸದ್ದು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.