ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗೆ ರಸ್ತೆ ಅಪಘಾತ:ಈಗ ಹೇಗಿದ್ದಾರೆ ನಟಿ ದಿವ್ಯ ಸುರೇಶ್??

Written by Soma Shekar

Published on:

---Join Our Channel---

ಬಿಗ್ ಬಾಸ್ ಶೋ ನ ಮಾಜಿ ಸ್ಪರ್ಶಿ ದಿವ್ಯ ಸುರೇಶ್ ಅವರು ಇತ್ತೀಚಿನ ದಿನಗಳಲ್ಲಿ ಕೆಲವು ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ದಿವ್ಯ ಸುರೇಶ್ ಅವರ ಕುರಿತಾದ ಹೊಸದೊಂದು ವಿಷಯ ಹೊರ ಬಂದಿದೆ. ದಿವ್ಯ ಸುರೇಶ್ ಅವರಿಗೆ ಸಣ್ಣ ಅ ಪ ಘಾತವೊಂದು ಆಗಿದ್ದು, ಅದರಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ರಸ್ತೆ ಅ ಪ ಘಾ ತದಲ್ಲಿ ಗಾಯಗೊಂಡಿರುವ ನಟಿಗೆ ಚಿಕಿತ್ಸೆ ನೀಡಿದ ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದ್ದು, ಆನಂತರ ಎಂದಿನಂತೆ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ನಟಿ ದಿವ್ಯ ಸುರೇಶ್ ಅವರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ, “ಎಲ್ಲರಿಗೂ ನಮಸ್ಕಾರಗಳು, ದಿವ್ಯ ಸುರೇಶ್ ಅವರಿಗೆ ಒಂದು ಸಣ್ಣ ರಸ್ತೆ ಅಪಘಾತವಾಗಿದ್ದು, ಅವರು ಕೆಲವು ದಿನಗಳ ಕಾಲ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವುದಿಲ್ಲ ಎಂದು ಹೇಳಲು ಕ್ಷಮೆ ಕೇಳುತ್ತೇವೆ. ಅವರಿಗೆ ನಿಮ್ಮ ಸಹಕಾರ ಸದಾ ಮುಂದುವರೆಯಿರಿ. ಅವರ ಮೇಲಿನ ಪ್ರೀತಿ ಹಾಗೆ ಇರಲಿ, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಂದು ಬರೆದಿರುವ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದೆ.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಂತಹದೊಂದು ಪೋಸ್ಟನ್ನು ನೋಡಿದ ಮೇಲೆ ಅವರ ಅಭಿಮಾನಿಗಳು ಕೂಡಲೇ ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ನಟಿ ದಿವ್ಯ ಸುರೇಶ್ ಅವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನು ದಿವ್ಯ ಸುರೇಶ್ ಅವರು ತ್ರಿಪುರಸುಂದರಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಈ ಸೀರಿಯಲ್ ಇನ್ನೂ ಆರಂಭವಾಗಿಲ್ಲ.

ಇನ್ನು ಕೆಲವೇ ದಿನಗಳ ಹಿಂದೆ ನೈಟ್ ಕರ್ಫ್ಯೂ ವೇಳೆ ಎಂಜಿ ರೋಡ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಪೊಲೀಸರ ಜೊತೆ ನಡೆಸಿದ ವಾಗ್ವಾದದ ವೀಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿತ್ತು. ಈಗ ಅವರಿಗೆ ರಸ್ತೆ ಅ ಪ ಘಾ ತ ವಾಗಿದೆಯೆಂದು ತಿಳಿದು ಅಭಿಮಾನಿಗಳು ಬೇಸರ ಪಟ್ಟಿದ್ದಾರೆ. ಆದರೆ ಸಣ್ಣ ಪುಟ್ಟ ಗಾಯಗಳಷ್ಟೇ ಎಂದು ಪೋಸ್ಟ್ ನಲ್ಲಿ ಬರೆದಿರುವ ಮಾಹಿತಿ ಕಂಡು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Leave a Comment