ಕನ್ನಡ ಪರ ಈ ಸ್ಟಾರ್ ನಟರೇಕೆ ದನಿ ಎತ್ತಲಿಲ್ಲ: ನಟರ ವಿ ರು ದ್ಧ ಹೊರ ಬಂತು ಕನ್ನಡಿಗರ ಅಸಮಾಧಾನ

Entertainment Featured-Articles News
69 Views

ಕೆಲವೇ ದಿನಗಳ ಹಿಂದೆ ಕನ್ನಡ ಧ್ವಜಕ್ಕೆ ಎಂಇಎಸ್ ಪುಂಡರು ಬೆಂಕಿ ಇಟ್ಟು ದರ್ಪ ತೋರಿದರು, ಅದಾದ ಬೆನ್ನಲ್ಲೇ ಕ್ರಾಂ ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಹಾನಿಗೊಳಿಸಿದರು. ಹೀಗೆ ಒಂದರನಂತರ ಇನ್ನೊಂದು ಎನ್ನುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆದು ಇಡೀ ರಾಜ್ಯದಲ್ಲಿ ಇಂತಹ ಪುಂಡಾಟಿಕೆ ಮೆರೆದ ಕಿಡಿಗೇಡಿಗಳ ವಿ ರು ದ್ಧ ಆ ಕ್ರೋ ಶ ದ ದನಿಯು ಮಾರ್ದನಿಸಿತು. ಕನ್ನಡ ಸಿನಿಮಾ ರಂಗದ ಕಲಾವಿದರು ದನಿ ಎತ್ತಿದರು. ಸೋಶಿಯಲ್ ಮೀಡಿಯಾಗಳ ಮೂಲಕ ತಪ್ಪಿತಸ್ಥರಿಗೆ ಶಿ ಕ್ಷೆ ಆಗಬೇಕೆಂದರು.

ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹಾ ಕನ್ನಡ ಸಿನಿ ರಂಗದ ಇಬ್ಬರು ಸ್ಟಾರ್ ನಟರು ಮಾತ್ರ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೇ ಮೌನಕ್ಕೆ ಜಾರಿದ್ದಾರೆ. ಹೌದು ಕನ್ನಡದ ಸ್ಟಾರ್ ನಟರು ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿಯೂ ಹೆಸರು ಮಾಡಿರುವ ನಟ ಯಶ್ ಮತ್ತು ಸುದೀಪ್ ಇಬ್ಬರೂ ಕೂಡಾ ಕನ್ನಡ ಧ್ವಜವನ್ನು ಸುಟ್ಟ ವಿಚಾರವಾಗಿ ಒಂದು ಟ್ವೀಟ್ ಕೂಡಾ ಮಾಡಿಲ್ಲ ಹಾಗೂ ಅದು ತಪ್ಪು ಎಂದು ಹೇಳಿಲ್ಲ. ಅವರ ಈ ಮೌನವನ್ನು ಕಂಡು ಕನ್ನಡಿಗರು ಈ ಮೌನದ ಹಿಂದಿನ ಕಾರಣವಾದರೂ ಏನು?? ಎಂದು ಪ್ರಶ್ನೆ ಮಾಡುವಂತಾಗಿದೆ.

ನಟ ಸುದೀಪ್ ಅವರು ಈಗಾಗಲೇ ಕನ್ನಡ ಮಾತ್ರವೇ ಅಲ್ಲದೇ ತೆಲುಗು, ಹಿಂದಿ ಸಿನಿಮಾಗಳಲ್ಲಿ ಕೂಡಾ ಹೆಸರನ್ನು ಪಡೆದಿದ್ದಾರೆ. ಇನ್ನೊಂದು ಕಡೆ ನಟ ಯಶ್ ಅವರು ಕೆಜಿಎಫ್ ಮೂಲಕ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈ ಇಬ್ಬರು ನಟರ ಮುಂದಿನ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದವೇ ಆಗಿವೆ. ಸಹಜವಾಗಿಯೇ ಹಿಂದಿ ಭಾಷೆಯ ಸಿ‌ನಿಮಾ ಎಂದರೆ ಮಹಾರಾಷ್ಟ್ರದಲ್ಲಿ ದೊಡ್ಡ ಮಾರುಕಟ್ಟೆ ಇದೆ‌. ಅಲ್ಲದೇ ಅಲ್ಲೂ ಈ ನಟರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ.

ಬಹುಶಃ ತಾವು ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿದ್ದೇ ಅವರು ಕನ್ನಡ ಪರ ದನಿ ಎತ್ತಲು ಅಡ್ಡಿಯಾಯಿತೇ ಎನ್ನುವ ಚರ್ಚೆಯೊಂದು ಈಗ ನಡೆಯುತ್ತಿದೆ. ಅಲ್ಲದೇ ಕನ್ನಡ ನಾಡು, ಭಾಷೆ ಎಂದಾಗ ಎಲ್ಲರೂ ಒಗ್ಗೂಡುವ ಅಗತ್ಯವಿದೆ, ಇಲ್ಲವಾದರೆ ಕನ್ನಡದ ಮೇಲೆ ಇಂತಹ ದೌ ರ್ಜ ನ್ಯ ಗಳು ಮತ್ತೆ ಮತ್ತೆ ನಡೆಯುತ್ತದೆ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈಗಾಗಲೇ ನಟ ಶಿವರಾಜ್ ಕುಮಾರ್, ಜಗ್ಗೇಶ್, ದರ್ಶನ್, ದುನಿಯಾ ವಿಜಯ್ ಅವರು ಈ ವಿಚಾರದಲ್ಲಿ ದನಿ ಎತ್ತಿದ್ದಾರೆ.

Leave a Reply

Your email address will not be published. Required fields are marked *