ಟಾಲಿವುಡ್ ನಟ ಪವನ್ ಕಲ್ಯಾಣ್ ಇತ್ತೀಚಿಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಿನಿಮಾ ರಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಕಾರಣದಿಂದ ಅವರ ಬಗ್ಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲಿ ಮಾತನಾಡಿ, ವಾಗ್ದಾಳಿ ನಡೆಸಿದ್ದರು. ಇದಾದ ಬೆನ್ನಲ್ಲೇ ತೆಲಗು ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಪೋಸಾನಿ ಕೃಷ್ಣ ಮುರಳಿ ಮಾದ್ಯಮವೊಂದರ ಮುಂದೆ ನಟ ಪವನ್ ಕಲ್ಯಾಣ್ ವಿ ರು ದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವೇಳೆ ಅವರು ಪವನ್ ಕಲ್ಯಾಣ್ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರಿಗಿಂತ ದೊಡ್ಡವನೇನಲ್ಲ ಎನ್ನುವ ಮಾತು ಆಡಿದ್ದಾರೆ.
ಪವನ್ ಕಲ್ಯಾಣ್ ಇತ್ತೀಚಿಗೆ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಸರ್ಕಾರ ಸಿನಿಮಾ ಟಿಕೆಟ್ ಬೆಲೆ ಹೆಚ್ಚು ಮಾಡುವುದಕ್ಕೆ ಯಾರನ್ನು ಕೇಳಿ ಸರ್ಕಾರ ಈ ನಿರ್ಧಾರ ಮಾಡಿದೆ ಎನ್ನುವ ಪವನ್ ಕಲ್ಯಾಣ್ ಯಾರನ್ನು ಕೇಳಿ ಸಂಭಾವನೆ ಹೆಚ್ಚಿಸಿಕೊಂಡರು. ಸಿನಿಮಾಗಳು ಹಿಟ್ ಆದ ಕೂಡಲೇ ನಟರು ಮನಸ್ಸಿಗೆ ಬಂದಂತೆ ಸಂಭಾವನೆ ಹೆಚ್ಚಿಸಿಕೊಳ್ಳೋ ಮೊದ್ಲು ಕನ್ನಡದ ಮಾತ್ರವಲ್ಲ ಭಾರತದ ಶ್ರೇಷ್ಠ ನಟ ಡಾ.ರಾಜ್‌ಕುಮಾರ್ ಅವರನ್ನು ನೋಡಿ ಕಲಿಯಬೇಕಿದೆ ಎಂದು ಪೋಸಾನಿ ಒಂದು ಉದಾಹರಣೆ ನೀಡಿದ್ದಾರೆ.
ಡಾ.ರಾಜ್ ಕುಮಾರ್ ಬಹು ಬೇಡಿಕೆಯ ನಟ, ಕನ್ನಡದ ದಿಗ್ಗಜ ನಟ, ಆದರೆ ಅವರು ಸಂಭಾವನೆ ಹೆಚ್ಚು ಮಾಡಿಕೊಳ್ಳೋಕೆ ಮೊದಲು ನಿರ್ಮಾಪಕರು ಹಾಗೂ ಡಿಸ್ಟ್ರಿಬ್ಯೂಟರ್ ಗಳನ್ನು ತಮ್ಮ ಮನೆಗೆ ಕರೆಸಿ, ಡಿನ್ನರ್ ಅರೇಂಜ್ ಮಾಡಿ, ಅನಂತರ ಎಲ್ಲರ ಮುಂದೆ ಕೈ ಜೋಡಿಸಿ, ನನಗೂ ಕುಟುಂಬ, ಮಕ್ಕಳು ಇದ್ದಾರೆ. ನೀವೆಲ್ಲಾ ಒಪ್ಪೋದಾದ್ರೆ ನಾನು 25 ಸಾವಿರ ಸಂಭಾವನೆ ಜಾಸ್ತಿ ಮಾಡಿಕೊಳ್ಳಲಾ? ಎಂದು ಮನವಿ ಮಾಡಿದ್ದರು.
ಆಗ ಎಲ್ಲಾ ನಿರ್ಮಾಪಕರು ಹಾಗೂ ಡಿಸ್ಟ್ರಿಬ್ಯೂಟರ್ ಗಳ ನಮ್ಮ ಅನುಮತಿ ಕೇಳಬೇಡಿ, ನೀವ್ಯಾಕೆ ನಮ್ಮನ್ನು ಕೇಳಬೇಕು ಎಂದಿದ್ರು, ಅಲ್ಲಿಯವರೆಗೆ ರಾಜ್‌ಕುಮಾರ್ ಅವರು ಸಂಭಾವನೆ ಎಲ್ಲಾ ಸಿನಿಮಾಕ್ಕೂ ಏಕರೂಪದಲ್ಲಿ ಪಡೀತಾ ಇದ್ರು.. ನಟ ಅಂದರೆ ಅವರು. ಅವರಲ್ಲಿರೋ ಸಭ್ಯತೆ, ಸಂಸ್ಕಾರ, ಸಂಸ್ಕೃತಿ, ಜ್ಞಾನ ಏನಾದ್ರೂ ಒಂದು ಗುಣ ಪವನ್ ಕಲ್ಯಾಣ್ ನಲ್ಲಿ ಇದ್ದರೆ ತೋರಿಸಲಿ, ನಾನು ಮಾತಾಡಿದ್ದು ತಪ್ಪು ಅಂತ ಒಪ್ಪಿಕೊಳ್ತೀನಿ ಎಂದಿದ್ದಾರೆ ಪೋಸಾನಿ ಕೃಷ್ಣ ಮುರಳಿ..
ಹೀಗೆ ಡಾ.ರಾಜ್‌ಕುಮಾರ್ ಅವರ ಉದಾಹರಣೆ ನೀಡುತ್ತಾ ಅವರು ಸಂಭಾವನೆ ವಿಚಾರದಲ್ಲಿ ತೆಲುಗಿನ ನಟರು ಡಾ.ರಾಜ್ ಅವರನ್ನು ಮಾದರಿಯನ್ನಾಗಿ ಸ್ವೀಕರಿಸಬೇಕು ಎನ್ನುತ್ತಾ ನಟ ಪವನ್ ಕಲ್ಯಾಣ್ ಅವರನ್ನು ಟೀಕೆ ಮಾಡಿದ್ದಾರೆ ಹಾಗೂ ಪವನ್ ಕಲ್ಯಾಣ್ ತನ್ನ ಅಣ್ಣ ಚಿರಂಜೀವಿ ಅವರಿಂದ ಒಳ್ಳೆಯ ನಡತೆಯನ್ನು ಕಲಿಯಬೇಕು ಎನ್ನುವ ಮಾತನ್ನು ಹೇಳಿದ್ದಾರೆ.