ಕನ್ನಡ ಡೈಲಾಗ್ ಅಭ್ಯಾಸ ಮಾಡಿ “ಕನ್ನಡ್ ಗೊತ್ತಿಲ್ಲ” ಅನ್ನೋರಿಗೆ ಸಾಯಿ ಪಲ್ಲವಿ ಕೊಟ್ರಾ ತಿರುಗೇಟು??

Entertainment Featured-Articles Movies News Viral Video

ಯಾವುದೇ ಭಾಷೆಯ ಚಿತ್ರರಂಗವೇ ಆಗಿರಲಿ ಅಲ್ಲಿ ತಮ್ಮ ಗ್ಲಾಮರ್, ಒನಪು ವೈಯಾರ ಗಳಿಂದ ಹೆಸರನ್ನು ಮಾಡಿದ ನಟಿಯರು ಸಾಲು-ಸಾಲಾಗಿ ಬಂದು ಹೋಗಿದ್ದಾರೆ. ಅಂತಹವರ ಹೆಸರುಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಕೇವಲ ಗ್ಲಾಮರ್ ನಿಂದ ಅಲ್ಲದೇ, ಉತ್ತಮ ಪಾತ್ರಗಳ ಮೂಲಕ, ಅದ್ಭುತ ಅಭಿನಯದ ಮೂಲಕ ಸ್ಟಾರ್ ನಟಿಯರ ಪಟ್ಟವನ್ನು ಪಡೆದುಕೊಂಡ ನಟಿಯರು ಮಾತ್ರ ಬೆರಳೆಣಿಕೆಯಷ್ಟು ನೋಡಲು ಸಿಗುತ್ತಾರೆ. ಪ್ರಸ್ತುತ ಅಂತಹ ನಟಿಯರಲ್ಲಿ ಒಬ್ಬರಾಗಿದ್ದಾರೆ ದಕ್ಷಿಣ ಸಿನಿರಂಗದ ಪ್ರಖ್ಯಾತ ನಟಿ ಸಾಯಿ ಪಲ್ಲವಿ.

ಮಲಯಾಳಂ ಚಿತ್ರದಿಂದ ಸಿನಿಮಾ ಪ್ರಯಾಣವನ್ನು ಪ್ರಾರಂಭಿಸಿದ ನಟಿ ಸಾಯಿ ಪಲ್ಲವಿ, ತೆಲುಗು ಚಿತ್ರರಂಗದ ಬಹುಬೇಡಿಕೆಯ ಹಾಗೂ ಸ್ಟಾರ್ ನಟಿಯಾಗಿ, ತನ್ನ ಸಹಜ ಸೌಂದರ್ಯ, ಅದ್ಭುತ ನಟನೆ ಹಾಗೂ ಡ್ಯಾನ್ಸ್ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಅದ್ಭುತವಾದ ಡ್ಯಾನ್ಸ್ ಗಳಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಂದು ಸಿನಿಮಾ ಕಥೆಯಲ್ಲಿ ತನ್ನ ಪಾತ್ರಕ್ಕೆ ಪ್ರಾಧಾನ್ಯತೆ ಇದೆಯೋ, ಇಲ್ಲವೋ ಎಂಬುದನ್ನು ಅಳೆದು ತೂಗಿ ಆಯ್ಕೆ ಮಾಡಿಕೊಂಡು ನಟಿಸುವಂತಹ ಪ್ರತಿಭಾವಂತ ನಟಿಯಾಗಿದ್ದಾರೆ.

ಇಂತಹ ಪ್ರತಿಭಾನ್ವಿತ ನಟಿಯು ಕನ್ನಡದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಲಿದ್ದಾರೆ ಎಂದು ಈ ಹಿಂದೆ ಒಂದು ಸುದ್ದಿ ಎಲ್ಲಾ ಕಡೆ ಹರಿದಾಡಿತ್ತು. ಅಲ್ಲದೇ ನಿರ್ದೇಶಕರು ಹೊಸ ಸಿನಿಮಾದ ಕಥೆಯ ಕುರಿತಾಗಿ ನಟಿಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಅದಕ್ಕಿಂತ ಮೊದಲೇ ಬೇರೊಂದು ಸಿನಿಮಾದ ಮೂಲಕ ನಟಿ ಸಾಯಿ ಪಲ್ಲವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನುವ ಹೊಸಸುದ್ದಿ ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.

ಇಂದು ನಟಿ ಸಾಯಿ ಪಲ್ಲವಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ನಟನೆಯ ವಿರಾಟಪರ್ವದ ಒಂದು ಪೋಸ್ಟರ್ ನ, ಜೊತೆಗೆ ಅವರು ನಟಿಸುತ್ತಿರುವ ಹೊಸ ಚತುರ್ಭಾಷಾ ಸಿನಿಮಾದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. ಅವರ ಹೊಸ ಸಿನಿಮಾದ ಹೆಸರು ಗಾರ್ಗಿ ಎಂದಾಗಿದೆ. ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗಿದೆ. ನಟಿ ಸಾಯಿಪಲ್ಲವಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡು ಶುಭ ಹಾರೈಸಿ ಎಂದು ಕೇಳಿದ್ದಾರೆ.

ಸಾಯಿ ಪಲ್ಲವಿ ಅವರು ಕನ್ನಡ ಭಾಷೆಯಲ್ಲಿ ಡೈಲಾಗ್ ಗಳನ್ನು ಕಲಿತು ಹೇಳಲು ಅಭ್ಯಾಸ ಮಾಡುತ್ತಿರುವುದು ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ನಾವು ನೋಡಬಹುದಾಗಿದೆ. ಮೊದಲ ಬಾರಿಗೆ ಕನ್ನಡದಲ್ಲೂ ಬರಲಿರುವ ತಮ್ಮ ಹೊಸ ಸಿನಿಮಾಕ್ಕಾಗಿ ನಟಿ ಕನ್ನಡ ಅಭ್ಯಾಸ ಮಾಡುತ್ತಿರುವುದು ನೋಡಿದಾಗ ಕನ್ನಡ್ ಗೊತ್ತಿಲ್ಲ ಎನ್ನುವ ನಟಿಯರಿಗಿಂತ ಸಾಯಿ ಪಲ್ಲವಿ ಗ್ರೇಟ್ ಎನಿಸದೇ ಇರಲ್ಲ.

Leave a Reply

Your email address will not be published. Required fields are marked *