ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇನ್ನಿಲ್ಲ: ಕಂಬನಿ ಮಿಡಿದ ಚಿತ್ರರಂಗ ಹಾಗೂ ಸಿನಿ ಪ್ರೇಮಿಗಳು

Written by Soma Shekar

Published on:

---Join Our Channel---

ಕೆಲವು ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ 83 ವರ್ಷದ ಹಿರಿಯ ನಟ ಇಂದು ನಿಧನರಾಗಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಲ್ಲಿ ಅವರು ಪೋಷಕ ನಟನಾಗಿ, ಹಾಸ್ಯ ನಟನಾಗಿ ಕಾಣಿಸಿಕೊಂಡು ಅಸಂಖ್ಯಾತ ಸಿನಿಪ್ರೇಮಿಗಳಿಗೆ ಮನರಂಜನೆಯನ್ನು ನೀಡಿದ್ದರು. ಕನ್ನಡದ ಹಿರಿಯ ನಟರಾದ ವರನಟ ಡಾಕ್ಟರ್ ರಾಜಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಶಿವರಾಂ ಅವರು ಬಹಳ ಆಪ್ತರಾಗಿದ್ದವರು.

ನಟನೆ ಮಾತ್ರವಲ್ಲದೇ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿ,‌ ನಿರ್ದೇಶನ ಕೂಡಾ ಅವರು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಕಾರು ಅ ಪ ಘಾ ತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದು, ಅವರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಬಿದ್ದು ಗಾಯಗೊಂಡು ಮತ್ತೆ ಆಸ್ಪತ್ರೆ ಸೇರಿದ್ದರು. ಅವರ ಮೆದುಳಿನಲ್ಲಿ ತೀವ್ರವಾದ ರ ಕ್ತ ಸ್ರಾ ವವಾಗಿದ್ದ ಕಾರಣ ಅವರ ಸ್ಥಿತಿ ಗಂಭೀರವಾಗಿತ್ತು. ಐಸಿಯುನಲ್ಲಿ ಇರಿಸಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.

ಆದರೆ ಆಸ್ಪತ್ರೆಯ ವೈದ್ಯರು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದರು. 1938 ರಲ್ಲಿ ಜನಿಸಿದ ಶಿವರಾಂ ಅವರು, ಬೆಂಗಳೂರಿಗೆ ಬಂದ ಮೇಲೆ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಿಂದ ಸ್ಫೂರ್ತಿ ಪಡೆದು ನಾಟಕರಂಗವನ್ನು ಪ್ರವೇಶಿಸಿದ್ದರು. 1965 ರಲ್ಲಿ ಬೆರೆತ ಜೀವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿ ನೂರಾರು ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಪೋಷಿಸಿ ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡರು.

ಕನ್ನಡ ಸಿನಿಮಾ ರಂಗದಲ್ಲಿ ಎಲ್ಲರಿಂದಲೂ ಅವರು ಶಿವರಾಮಣ್ಣ ಎಂದೇ ಗೌರವದಿಂದ ಕರೆಯಲ್ಪಟ್ಟವರು ಬೆಳ್ಳಿತೆರೆ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಕೂಡಾ ಜನಪ್ರಿಯ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಪ್ರಸ್ತುತ ಕೂಡಾ ಅವರು ಜನಪ್ರಿಯ ಧಾರಾವಾಹಿಯೊಂದರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿರಿಯ ಕಲಾವಿದನ ಅಗಲಿಕೆಗೆ ಸಿನಿರಂಗದ ಗಣ್ಯರು ಕಂಬನಿ ಮಿಡಿದು, ಸಂತಾಪವನ್ನು ಸೂಚಿಸುತ್ತಿದ್ದಾರೆ.

Leave a Comment