ಕನ್ನಡ ಚಿತ್ರರಂಗಕ್ಕೆ ನಟಿ ಸಾಯಿ ಪಲ್ಲವಿ ಎಂಟ್ರಿ?? ಯಾವ ಸಿನಿಮಾದಲ್ಲಿ ನಾಯಕಿ ಆಗಲಿದ್ದಾರೆ??

0 0

ತಮ್ಮ ಸಹಜವಾದ ಸೌಂದರ್ಯ, ಅದ್ಭುತವಾದ ನಟನೆ ಹಾಗೂ ಜಬರ್ದಸ್ತ್ ಡ್ಯಾನ್ಸ್ ಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ತನ್ನದೇ ಆದಂತಹ ಸ್ಥಾನವನ್ನು ಪಡೆದುಕೊಂಡಿದ್ದಾರೆ ನಟಿ ಸಾಯಿ ಪಲ್ಲವಿ. ಈ ನಟಿಯು ತೆಲುಗು ಮಾತ್ರವೇ ಅಲ್ಲದೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಜನಪ್ರಿಯತೆಗೆ ತನ್ನದಾಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಸಾಕಷ್ಟು ಬ್ಯಸಿಯಾಗಿದ್ದಾರೆ ನಟಿ ಸಾಯಿ ಪಲ್ಲವಿ. ಸೋಶಿಯಲ್ ವಿಡಿಯೋಗಳಲ್ಲಿಯೂ ಭರ್ಜರಿ ಫಾಲೋಯಿಂಗ್ ಹೊಂದಿರುವ ಈ ನಟಿ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುವ ಮೂಲಕ ಸಾಕಷ್ಟು ಸದ್ದನ್ನು ಮಾಡುತ್ತಿದೆ. ನಟಿ ಸಾಯಿ ಪಲ್ಲವಿ ತನ್ನದೇ ಆದ ಸ್ಟೈಲ್ ಹಾಗೂ ತನ್ನದೇ ಆದ ವಿಶೇಷ ಪಾತ್ರಗಳ ಮೂಲಕ ಬೇರೆ ನಟಿಯರಿಗಿಂತ ಭಿನ್ನವಾದ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ.‌ ಕೇವಲ ಗ್ಲಾಮರ್ ಗೊಂಬೆಯಾಗಿ ನಟಿಸುವ ಪಾತ್ರಗಳಿಗೆ ಅವರು ಪ್ರಾಮುಖ್ಯತೆ ನೀಡುವುದಿಲ್ಲ.

ಪ್ರಸ್ತುತ ತೆಲುಗು ಸಿನಿಮಾ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟಿ ಸಾಯಿ ಪಲ್ಲವಿ, ತೆಲುಗಿನ ಯುವ ಸ್ಟಾರ್ ನಟ ನಾಗ ಚೈತನ್ಯ ನಾಯಕ ನಟನಾಗಿರುವ ಬಹುನಿರೀಕ್ಷಿತ ಸಿನಿಮಾ ಲವ್ ಸ್ಟೋರಿಯಲ್ಲಿ ನಾಯಕಿಯಾಗಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬರುವ ಸೆಪ್ಟೆಂಬರ್ 10 ರಂದು ಈ ಸಿನಿಮಾ ತೆರೆ ಕಾಣಲು ಸಿದ್ಧವಾಗಿದ್ದು, ಈಗ ಇದರ ಬೆನ್ನಲ್ಲೆ ಸಾಯಿ ಪಲ್ಲವಿ ಕನ್ನಡ ಸಿನಿಮಾ ಒಂದರಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹೊರ ಬಂದಿದ್ದು, ಈ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಮಂಸೋರೆ ಅವರು ಈ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಮಂಸೋರೆ ಅವರು ತಮ್ಮ ಹೊಸ ಸಿನಿಮಾದ ವಿಷಯವಾಗಿ ನಟಿ ಸಾಯಿಪಲ್ಲವಿ ಜೊತೆಗೆ ಫೋನ್ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ, ಆದರೆ ನಟಿ ಸಾಯಿ ಪಲ್ಲವಿ ಸಿನಿಮಾದ ಕಥೆಯನ್ನು ಕೇಳಿ ಬಹಳ ಇಷ್ಟ ಪಟ್ಟಿದ್ದು, ಸಿನಿಮಾದ ಅಂತಿಮ ಸ್ಕ್ರಿಪ್ಟ್ ನೀಡುವಂತೆ ಕೇಳಿದ್ದಾರೆ ಎಂದು ಮಂಸೋರೆ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. ವಿವಾಹದ ವಿಷಯವಾಗಿ ಬ್ರೇಕ್ ತೆಗೆದುಕೊಂಡಿದ್ದೆ, ಆದಷ್ಟು ಬೇಗ ಪೊಲಿಟಿಕಲ್ ತ್ರಿಲ್ಲರ್ ಸಿನಿಮಾ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.