ಕನ್ನಡ ಕಿರುತೆರೆಗೆ ಮತ್ತೋರ್ವ ಹೆಸರಾಂತ ಸಿನಿಮಾ ನಟನ ಎಂಟ್ರಿ: ಅಂದು ಅನಿರುದ್ಧ್, ಇಂದು ಈ ನಟ, ಅದೃಷ್ಟ ಪರೀಕ್ಷೆಗೆ ಮುಂದಾದ ನಟ

Entertainment Featured-Articles News

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯ ವ್ಯಾಪ್ತಿ ಹಾಗೂ ಜನಪ್ರಿಯತೆ ಬಹಳ ವಿಸ್ತಾರವಾಗಿದೆ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಬಹಳಷ್ಟು ಜನ ಕಿರುತೆರೆಯ ಕಲಾವಿದರು ನಾಡಿನ ಮೂಲೆ ಮೂಲೆಯಲ್ಲಿಯೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸಿನಿಮಾ ತಾರೆಯರಿಗೆ ಇರುವಷ್ಟೇ ತಾರಾ ವರ್ಚಸ್ಸನ್ನು ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಕಲಾವಿದರು ಪಡೆದುಕೊಳ್ಳುತ್ತಿದ್ದಾರೆ. ಧಾರಾವಾಹಿಗಳ ಮೂಲಕ ಪ್ರತಿನಿತ್ಯ ಮನೆ ಮಂದಿಯ ಮುಂದೆ ಬಂದು ರಂಜಿಸುವ ಈ ಕಲಾವಿದರು ಬಹಳಷ್ಟು ಜನರಿಗೆ ಅವರ ಮನೆಯ ಸದಸ್ಯರಂತೆಯೇ ಕಾಣುತ್ತಾರೆ. ಇದೇ ಕಾರಣದಿಂದಲೇ ಕಿರುತೆರೆಯ ಕಲಾವಿದರು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿದು ಬಿಡುತ್ತಾರೆ.

ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದಂತಹ ಹಲವು ಕಲಾವಿದರು ಸಿನಿಮಾಗಳಲ್ಲಿ ಈಗಾಗಲೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ ವರ್ಷಗಳ ಕಾಲ ಬೆಳ್ಳಿತೆರೆಯಲ್ಲಿ ಮಿಂಚುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಾ, ಅವರ ಅಪಾರ ಆದರ ಅಭಿಮಾನಿಗಳನ್ನು ಪಡೆದುಕೊಂಡಂತಹ ಸ್ಟಾರ್ ನಟರು, ಉತ್ತಮ ಅವಕಾಶಗಳು ದೊರೆತಾಗ ಕಿರುತೆರೆಗೆ ಬರುವುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಗಮನಾರ್ಹವಾದ ಬದಲಾವಣೆಯಾಗಿದೆ.

ಅದು ಮಾತ್ರವೇ ಅಲ್ಲದೇ ಬೆಳ್ಳಿತೆರೆಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗದ ಪ್ರತಿಭಾವಂತ ಕಲಾವಿದರು ತಮ್ಮ ಪ್ರತಿಭೆಗೆ ತಕ್ಕಂತಹ ಪಾತ್ರಗಳು ದೊರೆತರೆ ಕಿರುತೆರೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಲು ಬರುವುದು ಉಂಟು. ಅಂತಹದೇ ಒಂದು ಬೆಳವಣಿಗೆಯಲ್ಲಿ ಕನ್ನಡ ಚಿತ್ರರಂಗದ ಹೆಸರಂತ ನಟರೊಬ್ಬರು ಇದೀಗ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಸ್ಯಾಂಡಲ್ವುಡ್ ನಟ ಅನಿರುದ್ಧ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದ ನಂತರ ಅವರು ಪಡೆದುಕೊಂಡ ಅಪಾರವಾದ ಜನಾದರಣೆ ಎಲ್ಲರಿಗೂ ತಿಳಿದೇ ಇದೆ..

ಈಗ ಅದೇ ಹಾದಿಯಲ್ಲಿ ಮತ್ತೊಬ್ಬ ನಟ ಕನ್ನಡ ಕಿರುತೆರೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಲು ಸಜ್ಜಾಗಿರುವಂತೆ ಕಾಣುತ್ತಿದೆ. ಹಾಗಾದರೆ ಯಾರು ಆ ನಟ ಎನ್ನುವಿರಾ?? ಆ ನಟ ಮತ್ತಾರು ಅಲ್ಲ, ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ, ಹಾಗೆಯೇ ಪ್ರಸ್ತುತ ಕಿರುತೆರೆಯಲ್ಲಿಯೂ ಧಾರಾವಾಹಿಯೊಂದರ ಪ್ರಮುಖ ಪಾತ್ರದ ಮೂಲಕ ಭರ್ಜರಿ ಜನಪ್ರಿಯತೆ ತನ್ನದಾಗಿಸಿಕೊಂಡಿರುವ, ಎಸ್ ನಾರಾಯಣ್ ಅವರ ಪತ್ರ ಪಂಕಜ್ ಅವರೇ ಆಗಿದ್ದಾರೆ.

ಪಂಕಜ್ ಕೆಲವು ಸಿನಿಮಾಗಳಲ್ಲಿಯೂ ನಾಯಕನಾಗಿ ಕಾಣಿಸಿಕೊಂಡಿದ್ದರು. ಅವರ ಕೆಲವು ಸಿನಿಮಾಗಳು ಹೆಸರು‌ ಮಾಡಿದವು. ಆದರೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗದ ಕಾರಣ ಪಂಕಜ್ ಅವರು ಕೆಲ ಸಮಯದಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದರು. ಪಂಕಜ್ ಅವರು ನಟ ದರ್ಶನ್ ಅವರ ಸಿನಿಮಾವೊಂದರಲ್ಲಿ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಿನಿಮಾಗಳಿಂದ ಪಂಕಜ್ ಕಿರುತೆರೆಯ ಕಡೆಗೆ ಅಡಿಯಿಟ್ಟಿದ್ದಾರೆ. ಅವರ ಈ ಜರ್ನಿ ಎಲ್ಲಿಯವರೆಗೆ ಎನ್ನುವುದು ಮಾತ್ರ ಸದ್ಯಕ್ಕೆ ಪ್ರಶ್ನೆಯಾಗಿದೆ.

ಏಕೆಂದರೆ ಪಂಕಜ್ ಅವರು ಕಿರುತೆರೆಯ ಜನಪ್ರಿಯ ಧಾರಾವಾಹಿ ಪಾರು ವಿನಲ್ಲಿ ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿಯನ್ನು ನೀಡಿದ್ದಾರೆ. ಅವರ ಈ ಪಾತ್ರ ಆಗಲೇ ಜನರ ಮನಸ್ಸನ್ನು ಗೆದ್ದಿದೆ, ಜನರ ಗಮನವನ್ನು ಸೆಳೆದಿದೆ. ಪಂಕಜ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಮುಂದಿನ ದಿನಗಳಲ್ಲಿ ಕಿರುತೆರೆಯಲ್ಲಿ ಹೊಸ ಪ್ರಾಜೆಕ್ಟ್ ಗಳನ್ನು ಮಾಡುತ್ತಾರೆಯೋ ಇಲ್ಲವೋ ಎನ್ನುವುದು ಕಾದು ನೋಡಬೇಕಾಗಿದೆ. ಪಾರು ಸೀರಿಯಲ್ ಮೂಲಕ ಪಂಕಜ್ ಅವರ ಕಿರುತೆರೆಯ ಜರ್ನಿ ಆರಂಭವಂತೂ ಆಗಿದೆ.

Leave a Reply

Your email address will not be published.