ಕನ್ನಡ ಕಿರುತೆರೆಗೆ ಬರ್ತಿದೆ ಹೊಸ ಡಬ್ಬಿಂಗ್ ಸೀರಿಯಲ್: ಪ್ರೊಮೊ ನೋಡಿ ಥ್ರಿಲ್ ಆದ ಪ್ರೇಕ್ಷಕರು!!

0 2

ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ವಿಚಾರದಲ್ಲಿ ವಿವಿಧ ವಾಹಿನಿಗಳು ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವತ್ತ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ‌. ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ವಾಹಿನಿಯಾಗಿ ಮನರಂಜನೆಯ ವಿಚಾರದಲ್ಲಿ ಮುಂಚೂಣಿ ಯಲ್ಲಿರುವ ಜೀ ಕನ್ನಡ ವಾಹಿನಿಯು ಹೊಸ ಹೊಸ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸುವಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಜೀ ಕನ್ನಡದ ಹೊಸ ಧಾರಾವಾಹಿಗಳು ಟಾಪ್ ಸೀರಿಯಲ್ ಗಳ ಸಾಲಿನಲ್ಲಿ ಸ್ಥಾನ ಪಡೆದು ದೊಡ್ಡ ಯಶಸ್ಸನ್ನು ಪಡೆಯುತ್ತಿವೆ.

ಇನ್ನು ಜೀ ವಾಹಿನಿಯಲ್ಲಿ ಮಧ್ಯಾಹ್ನದ ವೇಳೆ ಪ್ರಸಾರ ಆಗುವ ಧಾರಾವಾಹಿಗಳೆಲ್ಲಾ ತೆಲಗಿನಿಂದ ಡಬ್ ಆಗಿ ಕನ್ನಡಕ್ಕೆ ಬಂದಿರುವ ಸೀರಿಯಲ್ ಗಳಾಗಿವೆ. ಜೀ ತೆಲುಗಿನಲ್ಲಿ ಅದ್ಬುತ ಯಶಸ್ಸು ಪಡೆದಿರುವ ಸೀರಿಯಲ್ ಗಳು ಕನ್ನಡ ಭಾಷೆಗೆ ಡಬ್ ಆಗಿ ಮಧ್ಯಾಹ್ನದ ವೇಳೆ ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿವೆ‌. ನಂಬರ್ ಒನ್ ಸೊಸೆ, ಅಗ್ನಿ ಪರೀಕ್ಷೆ, ತ್ರಿನಯನಿ, ಪುನರ್ವಿವಾಹ ಹೀಗೆ ತೆಲುಗಿನ ಸೀರಿಯಲ್ ಗಳು ಕನ್ನಡದಲ್ಲೂ ಸಹಾ ಪ್ರಸಾರ ಕಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ.

ಈಗ ಅದೇ ಸಾಲಿಗೆ ಮತ್ತೊಂದು ಹೊಸ ಸೀರಿಯಲ್ ಸೇರ್ಪಡೆಯಾಗಿದೆ. ಜೀ ವಾಹಿನಿಯು ಈಗಾಗಲೇ ಈ ಹೊಸ ಸೀರಯಲ್ ನ ಪ್ರೊಮೋ ಕೂಡಾ‌ ಬಿಡುಗಡೆ ಮಾಡಿದ್ದು ಪ್ರೇಕ್ಷಕರು ಹೊಸ ಸೀರಿಯಲ್ ಕುರಿತಾಗಿ ಕುತೂಹಲ ವ್ಯಕ್ತಪಡಿಸುತ್ತಾ, ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹೌದು ಜೀ ತೆಲುಗು ವಾಹಿನಿಯಲ್ಲಿ ಜನಪ್ರಿಯತೆ ಪಡೆಸಿರುವ ವೈದೇಹಿ ಪರಿಣಯ ಈಗ ಕನ್ನಡಕ್ಕೆ ಡಬ್ ಆಗಿ ಜೀ ಕನ್ನಡದಲ್ಲಿ ಪ್ರಸಾರವನ್ನು ಕಾಣಲಿದೆ. ಕನ್ನಡದಲ್ಲೂ ಸಹಾ ವೈದೇಹಿ ಪರಿಣಯ ಹೆಸರಿನಲ್ಲೇ ಸೀರಿಯಲ್ ಪ್ರೇಕ್ಷಕರ ಮುಂದೆ ಬರಲಿದೆ.

https://www.instagram.com/p/CetlxFkt48f/?igshid=YmMyMTA2M2Y=

ಇದೊಂದು ಸಾಂಸಾರಿಕ ಕಥೆಯಾಗಿದ್ದು, ತೆಲುಗು ಕಿರುತೆರೆಯಲ್ಲಿ ಇತ್ತೀಚಿಗೆ ಕನ್ನಡದ ಪ್ರತಿಭೆಗಳೇ ಹೆಚ್ಚು ಮಿಂಚುತ್ತಿದ್ದು ವೈದೇಹಿ ಪರಿಣಯದಲ್ಲೂ ಸಹಾ ಕನ್ನಡ ಕಿರುತೆರೆಯಲ್ಲಿ ಕಾವ್ಯಾಂಜಲಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟ ಪವನ್ ರವೀಂದ್ರ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ನಟಿ ಯುಕ್ತ ಮಲ್ನಾಡ್ ಅವರು ಸಹಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಹೊಸ ಸೀರಿಯಲ್ ನ ಪ್ರೊಮೊ ಇದೀಗ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದೆ.

Leave A Reply

Your email address will not be published.