ಕನ್ನಡ ಕಿರುತೆರೆಗೆ ಎಂಟ್ರಿ ನೀಡ್ತಿದೆ ಮತ್ತೊಂದು ಡಬ್ಬಿಂಗ್ ಸೀರಿಯಲ್: ಈ ಸೀರಿಯಲ್ ವಿಶೇಷ ಏನು??

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಲೋಕದಲ್ಲಿ ಡಬ್ಬಿಂಗ್ ಸೀರಿಯಲ್ ಗಳ ಅಬ್ಬರ ಸಹಾ ಕಡಿಮೆಯೇನಿಲ್ಲ. ಖಾಸಗಿ ವಾಹಿನಿಗಳು ಒಂದರ ಮೇಲೆ ಮತ್ತೊಂದು ಎನ್ನುವ ಹಾಗೆ ಸ್ಪರ್ಧೆಗಿಳಿದಂತೆ ಅನ್ಯ ಭಾಷೆಗಳ ಸೀರಿಯಲ್ ಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುವುದರಲ್ಲಿ ತೊಡಗಿಕೊಂಡಿದೆ. ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಕಿರುತೆರೆಯ ವಾಹಿನಿಗಳಲ್ಲಿ ಪ್ರಸಾರ ಮಾಡಿದ ಮಹಾಭಾರತ, ಸೀತೆಯ ರಾಮ, ರಾಧಾ ಕೃಷ್ಣ ಗಳಂತಹ ಪೌರಾಣಿಕ ಧಾರಾವಾಹಿಗಳು ಸಾಕಷ್ಟು ಜನರ ಮನಸ್ಸನ್ನು ಗೆದ್ದವು. ಮಹಾಭಾರತ ಸೀರಿಯಲ್ ಮರು ಪ್ರಸಾರ ಕೂಡಾ ಕಂಡಿತು. ಇದರ ಬೆನ್ನಲ್ಲೇ ಇನ್ನೂ ಹಲವು ಸೀರಿಯಲ್ ಗಳು ಪ್ರಸಾರವನ್ನು ಕಂಡವು. ಈಗಲೂ ತ್ರಿನಯನಿ, ಕೃಷ್ಣ ಸುಂದರಿ, ನಾಗಭೈರವಿ ಹೀಗೆ ಸಾಲು ಸಾಲು ಡಬ್ಬಿಂಗ್ ಸೀರಿಯಲ್ ಗಳು ಪ್ರಸಾರವಾಗುತ್ತಿರುವಾಗಲೇ ಇದೀಗ ಕನ್ನಡಕ್ಕೆ ಮತ್ತೊಂದು ಡಬ್ಬಿಂಗ್ ಸೀರಿಯಲ್ ಬರಲು ಸಜ್ಜಾಗಿದೆ‌.

ಹೌದು ಡಬ್ಬಿಂಗ್ ಸೀರಿಯಲ್ ಗಳ ಪರ್ವದಲ್ಲಿ ಈಗ ಮತ್ತೊಂದು ಯಶಸ್ವಿ ಹಿಂದಿ ಸೀರಿಯಲ್ ಕನ್ನಡ ಕಿರುತೆರೆಗೆ ಎಂಟ್ರಿ ನೀಡಲು ಸಜ್ಜಾಗಿದೆ. ಕಲರ್ಸ್ ಹಿಂದಿ ವಾಹಿನಿಯಲ್ಲಿ ಕಳೆದೊಂದು ವರ್ಷದಿಂದಲೂ ಬ್ಯಾರಿಸ್ಟರ್ ಬಾಬು ಎನ್ನುವ ಸೀರಿಯಲ್ ಒಂದು ಪ್ರಸಾರವಾಗುತ್ತಿದೆ. ಬಂಗಾಳದ ಸಮಾಜದಲ್ಲಿ ಈ ಹಿಂದೆ ಇದ್ದ ಬಾಲ್ಯ ವಿವಾಹ, ಅದರಿಂದ ಹೆಣ್ಣು ಮಕ್ಕಳು ಅನುಭವಿಸಿದ ಶೋ ಷ ಣೆ ಹಾಗೂ ಸಮಾಜದಲ್ಲಿ ಅವರನ್ನು ನೋಡುವ ವಿಧಾನದ ಬಗ್ಗೆ ಹಾಗೂ ಅದೆಲ್ಲವನ್ನು ಮೀರಿ ತನ್ನ ಗುರಿ ತಲುಪಲು ಪುಟ್ಟ ಹುಡುಗಿಯು ಮಾಡುವ ಪ್ರಯತ್ನ, ಹೀಗೆ ಒಂದು ಅಪರೂಪದ ಕಥೆಯ ಸೀರಿಯಲ್ ಇದಾಗಿದ್ದು, ಹಿಂದಿ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಜನಮನ್ನಣೆಯನ್ನು ಪಡೆದುಕೊಂಡಿದೆ.

ಕನ್ನಡದಲ್ಲಿ ಚಿಕ್ಕಜಮಾನಿ ಹೆಸರಿನಲ್ಲಿ ಬ್ಯಾರಿಸ್ಟರ್ ಬಾಬು ಬರಲಿದ್ದು, ವಾಹಿನಿ ಈಗಾಗಲೇ ಪ್ರೊಮೋ ಸಹಾ ಬಿಡುಗಡೆ ಮಾಡಿದ್ದು ಬಹಳಷ್ಟು ಜನರ ಗಮನವನ್ನು ಸೆಳೆದಿದೆ. ಎಂಟು ವರ್ಷದ ಬಾಲಕಿ ಬೋಂದಿತಾ, ಬ್ಯಾರಿಸ್ಟರ್ ಬಾಬು ಅನಿರುದ್ಧ್ ಜೊತೆ ವಿವಾಹ ವಾಗುವ ಈ ಕಥೆ ಅಪರೂಪದ್ದು ಹಾಗೂ ವಿಶೇಷವಾಗಿದೆ. ಮತ್ತೊಂದು ವಿಶೇಷ ಎಂದರೆ ಬ್ಯಾರಿಸ್ಟರ್ ಬಾಬು ಸೀರಿಯಲ್ ಕೆಲವೇ ದಿನಗಳ ಹಿಂದೆ ಬಂಗಾಳಿ ಮತ್ತು ತಮಿಳು ಭಾಷೆಗೂ ಸಹಾ ಡಬ್ ಆಗಿದ್ದು, ಅಲ್ಲೂ ಸಹಾ ಪ್ರಸಾರವನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಇನ್ನು ಕಿರುತೆರೆಯಲ್ಲಿ ಬರಲಿರುವ ಚಿಕ್ಕಜಮಾನಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ಹೇಗೆ ಗೆಲ್ಲಲಿದೆ ಎಂದು ನೋಡ ಬೇಕಾಗಿದೆ.

Leave a Comment