ಕನ್ನಡದ ಮದುವೆ ಕರೆಯೋಲೆ ಶೇರ್ ಮಾಡಿದ ಅನುಷ್ಕಾ ಶರ್ಮಾ: ಯಾರ ಮದುವೆ ಎಂದು ನೆಟ್ಟಿಗರ ಕುತೂಹಲ

Written by Soma Shekar

Published on:

---Join Our Channel---

ಅನುಷ್ಕಾ ಶರ್ಮಾ ಬಾಲಿವುಡ್ ನ ಜನಪ್ರಿಯ ಹಾಗೂ ಸ್ಟಾರ್ ನಟಿ. ಬಾಲಿವುಡ್ ನ ದಿಗ್ಗಜ ನಟರೊಂದಿಗೆ ನಾಯಕಿಯಾಗಿ ನಟಿಸಿ, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಬಾಲಿವುಡ್ ನಲ್ಲಿ ನಟನೆಯ ವಿಚಾರದಲ್ಲಿ ತನ್ನದೇ ಆದ ಪ್ರತ್ಯೇಕವಾದ ಛಾಪನ್ನು ಮೂಡಿಸಿರುವ ನಟಿ. ಕೇವಲ ಗ್ಲಾಮರ್ ಅಲ್ಲದೇ ಪಾತ್ರಕ್ಕೆ ಪ್ರಾಧಾನ್ಯತೆ ನೀಡುವ ಅನುಷ್ಕಾ ಶರ್ಮಾ ಅವರಿಗೆ ಅಭಿಮಾನಿಗಳು ಕೂಡಾ ಸಿಕ್ಕಾಪಟ್ಟೆ ಇದ್ದಾರೆ. ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯನ್ನು ಮದುವೆಯಾಗಿ, ಅವರ ಮಗುವಿನ ತಾಯಾಗಿ, ಖುಷಿಯಾದ ಜೀವನ ನಡೆಸುತ್ತಿದ್ದಾರೆ ಅನುಷ್ಕಾ.

ಮುಂಬೈ ಎನ್ನುವ ಕನಸಿನ ನಗರಿಯಲ್ಲಿ ಬಾಲಿವುಡ್ ಸ್ಟಾರ್ ಆಗಿ ಮೆರೆಯುತ್ತಿರುವ ಈ ನಟಿಗೆ ಮೈಸೂರಿನ ಜೋಡಿಯೊಂದು ತಮ್ಮ ಮದುವೆಯ ಆಮಂತ್ರಣ ವನ್ನು ಕಳುಹಿಸಿದ್ದಾರೆ. ಈ ವಿಶೇಷ ಮದುವೆಯ ಕರೆಯೋಲೆಯನ್ನು ಕಂಡು, ಖುಷಿಯಿಂದ ಅನುಷ್ಕಾ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮೈಸೂರಿನ ನಯನ, ರುದ್ರೇಶ್ ಜೋಡಿಯು ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ಅನುಷ್ಕಾ ಶರ್ಮಾ ಅವರಿಗೆ ಕಳುಹಿಸಿದ್ದಾರೆ. ವಿಶೇಷ ಏನೆಂದರೆ ಈ ಕರೆಯೋಲೆ ಕನ್ನಡದಲ್ಲೇ ಇರುವುದು.

ಮದುವೆಯ ಕರೆಯೋಲೆಯ ಜೊತೆಗೆ ಒಂದು ಪತ್ರ ಹಾಗೂ ಸಿಹಿ ತಿನಿಸುಗಳನ್ನು ಸಹಾ ಕಳುಹಿಸಿದ್ದಾರೆ ಈ ನವ ಜೋಡಿ. ಇದರಿಂದ ಖುಷಿಯಾದ ಅನುಷ್ಕಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಇದು ಸ್ವೀಟೆಸ್ಟ್ ವೆಡ್ಡಿಂಗ್ ಇನ್ವಿಟೇಷನ್, ನಯನಾಗೆ ಧನ್ಯವಾದಗಳು. ನೀನು ಅತ್ಯಂತ ಸುಂದರ ವಧುವಾಗುವೆ” ಎಂದು ಬರೆದುಕೊಂಡು, ಮದುವೆಯ ಕರೆಯೋಲೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಅನುಷ್ಕಾ ಶರ್ಮಾ ಹಾಗೂ ನಯನಾಗೆ ಹೇಗೆ‌‌‌ ಪರಿಚಯ ಎನ್ನುವ ಪ್ರಶ್ನೆ ಕೆಲವರದ್ದಾಗಿದೆ.‌

ನಟಿ ಅನುಷ್ಕಾ ಅವರ ತಂದೆ ಆರ್ಮಿ ಆಫೀಸರ್ ಆಗಿದ್ದವರು. ಅನುಷ್ಕಾ ಅವರು ಹುಟ್ಟಿದ್ದು ಉತ್ತರ ಪ್ರದೇಶದಲ್ಲೇ ಆದರೂ ಅವರ ಶಿಕ್ಷಣ ಅಸ್ಸಾಂ ಮತ್ತು ಬೆಂಗಳೂರಿನಲ್ಲಿ ಆಯಿತು. ಅನುಷ್ಕಾ ಹೈಸ್ಕೂಲ್, ಡಿಗ್ರಿ ಶಿಕ್ಷಣ, ಮಾಡೆಲಿಂಗ್ ಕೆರಿಯರ್ ಎಲ್ಲಾ ಬೆಂಗಳೂರಿನಲ್ಲೇ ನಡೆಯಿತು ಎನ್ನುವುದು ಕೂಡಾ ನಿಜ.‌ ಬಹುಶಃ ನಯನ ಅವರ ಸ್ನೇಹಿತೆ ಇರಬಹುದು ಎಂದು ಊಹಿಸಲಾಗಿದೆ. ಅನುಷ್ಕಾ ಶೇರ್ ಮಾಡಿದ ಕರೆಯೋಲೆ ನೋಡಿ ಕನ್ನಡಿಗರು ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment