ಕನ್ನಡದ ನಟಿಯ ಸಾವಿಗೆ ಕಂಬನಿ ಮಿಡಿದು, ವೈದ್ಯರ ವಿರುದ್ಧ ಕೆಂಡಕಾರಿದ ರಾಖೀ ಸಾವಂತ್

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದ 21 ವರ್ಷ ವಯಸ್ಸಿನ ನಟಿ ಚೇತನ ರಾಜ್ ಮೇ 16 ರಂದು ಇಹ ಲೋಕವನ್ನು ತ್ಯಜಿಸಿದ್ದಾರೆ. ನಟಿ ಚೇತನಾ ರಾಜ್ ಅವರು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಆದರೆ ಸರ್ಜರಿಯಿಂದ ಉಂಟಾದ ತೊಂದರೆಯಿಂದಾಗಿ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ನಟಿಯ ಪೋಷಕರು ಆರೋಪ ಮಾಡಿದ್ದಾರೆ. ನಟಿಯು ಕಿರಿಯ ವಯಸ್ಸಿನಲ್ಲಿ ಇಂತಹದೊಂದು ಸರ್ಜರಿಗೆ ಒಳಗಾಗಿ, ತನ್ನ ಪ್ರಾಣ ಕಳೆದುಕೊಂಡಿದ್ದು ಸೆಲೆಬ್ರಿಟಿಗಳಿಗೆ ಶಾ ಕ್ ಆಗಿದೆ.

ಬಹಳಷ್ಟು ಜನ ಈ ವಿಚಾರವಾಗಿ ಸೋಶಿಯಲ್ ಮೀಡಿಯಾ ಗಳು ಮೂಲಕ ಹಾಗೂ ಮಾಧ್ಯಮಗಳ ಮೂಲಕ ತಮ್ಮ ಪ್ರತಿಕ್ರಿಯೆ ಸಹ ನೀಡಿದ್ದಾರೆ. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ರಾಖಿ ಸಾವಂತ್, ಚೇತನ ರಾಜ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತಾ, ಆಕೆಗೆ ಸರ್ಜರಿ ಮಾಡಿದ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನಟಿ ರಾಖಿ ಸಾವಂತ್ ಈ ವಿಚಾರವಾಗಿ ಮಾತನಾಡುತ್ತಾ,ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಬಹಳಷ್ಟು ಜನರಿಗೆ ಸಲಹೆಯನ್ನು ಸಹಾ ನೀಡಿದ್ದಾರೆ.

ರಾಖಿ ಸಾವಂತ್ ಮಾತನಾಡುತ್ತಾ, 21 ವರ್ಷದ ಕನ್ನಡ ನಟಿ ಚೇತನ ರಾಜ್ ಅವರು ಸರ್ಜರಿಗಾಗಿ ಹೋಗಿ ನಿಧನ ಹೊಂದಿರುವುದು ನಿಜಕ್ಕೂ ಆ ಘಾ ತವನ್ನು ಉಂಟು ಮಾಡಿದೆ. ಅವರು ಯಾವ ಸರ್ಜರಿಗೆ ಹೋಗಿದ್ದರು ಎನ್ನುವುದು ನನಗೆ ತಿಳಿದಿಲ್ಲ. ಆದರೆ ಸರ್ಜರಿಯಲ್ಲಿ ಹೀಗೆಲ್ಲಾ ಆಗುವುದಿಲ್ಲ. ಡಾಕ್ಟರ್ ಗೆ ಸರ್ಟಿಫಿಕೇಟ್ ಕೊಟ್ಟವರು ಯಾರು? ಇಂತಹ ಸರ್ಜರಿ ಮಾಡುವ ಆಸ್ಪತ್ರೆ ಹಾಗೂ ವೈದ್ಯರು ಯಾರು ಎಂದು ನಾನು ತಿಳಿದುಕೊಳ್ಳಬೇಕು ಎಂದು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.

ಇದೇ ವೇಳೆ ರಾಖಿ ಸಾವಂತ್ ಒಂದು ವೇಳೆ ಇಂತಹ ಸರ್ಜರಿ ಗಳನ್ನು ಮಾಡಿಸಿಕೊಳ್ಳಬೇಕಾದರೆ ಒಳ್ಳೆಯ ಬಾಲಿವುಡ್ ಮಂದಿಯ ಸಲಹೆಯನ್ನು ಪಡೆಯಿರಿ, ಅಥವಾ ನನ್ನನ್ನು ಕೇಳಿ. ಯಾವ ವೈದ್ಯರ ಬಳಿಗೆ ಹೋಗಬೇಕು ಎಂದು ನಿಮಗೆ ಸೂಕ್ತ ಮಾಹಿತಿಯನ್ನು ನೀಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಯಾರೆಂದರೆ ಅವರು ಡಾಕ್ಟರ್ ಮತ್ತು ನರ್ಸ್ ಗಳಾಗುತ್ತಿದ್ದಾರೆ. ಸರಿಯಾದ ಪ್ರೂಫ್ ಇಲ್ಲದೇ ಹೀಗೆ ಆಪರೇಷನ್ ಥಿಯೇಟರ್ ಗಳಲ್ಲಿ ಮಲಗಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ರಾಖಿ ಸಾವಂತ್ ಹೇಳಿದ್ದಾರೆ.

Leave a Reply

Your email address will not be published. Required fields are marked *