ಫೋರ್ಬ್ಸ್ ಇಂಡಿಯಾ ಬ್ಯುಸಿನೆಸ್ ಮ್ಯಾಗಜೀನ್ ಅಥವಾ ಫೋರ್ಬ್ಸ್ ಪಟ್ಟಿ ಬಿಡುಗಡೆ ಆದಾಗಲೆಲ್ಲಾ ಅಲ್ಲಿ ನಮಗೆ ಕಾಣೋದು ಬಾಲಿವುಡ್ ನ ಮಂದಿ ಮಾತ್ರ. ಒಂದು ರೀತಿ ಸಿನಿಮಾ ಎಂದರೆ ಅದು ಬಾಲಿವುಡ್ ಮಾತ್ರಾನೇನಾ?? ಅನ್ನೋ ಪ್ರಶ್ನೆಗಳು ಸಹಜವಾಗಿಯೇ ದಕ್ಷಿಣದ ಸಿನಿ ಅಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತೆ. ಆದರೆ ಮೊದಲ ಬಾರಿ ಫೋರ್ಬ್ಸ್ ನಲ್ಲಿ ದಕ್ಷಿಣದ ಸಿನಿ ತಾರೆಯರು ಕೂಡಾ ಸ್ಥಾನ ಪಡೆದು ಮಿಂಚಿದ್ದಾರೆ. ಅದರಲ್ಲೂ ಸ್ಯಾಂಡಲ್ವುಡ್ ನಟ ಮುಖಪುಟದಲ್ಲಿ ಮಿಂಚುತ್ತಿರುವುದು ಬಹಳ ವಿಶೇಷ ಹಾಗೂ ಅಭಿಮಾನಿಗಳ ಪಾಲಿಗೆ ಸಂಭ್ರಮ ಮೂಡಿಸಿದೆ.
ದಕ್ಷಿಣ ಸಿನಿಮಾ ರಂಗ ಹಿಂದಿನಂತೆ ಇಲ್ಲ, ಬಾಲಿವುಡ್ ಸ್ಪರ್ಧೆ ನೀಡುವಂತಹ ಸಿನಿಮಾಗಳು ಇಲ್ಲಿ ಸಿದ್ಧವಾಗುತ್ತಿವೆ, ಪ್ಯಾನ್ ಇಂಡಿಯಾ ಸಿನಿಮಾಗಳು ಬಂದ ಮೇಲೆ ಉತ್ತರದ ಜನರಿಗೂ ದಕ್ಷಿಣ ಸಿನಿಮಾಗಳ ಪವರ್ ಗೊತ್ತಾಗಿದೆ. ಈಗ ಇವೆಲ್ಲವುಗಳ ಕಾರಣದಿಂದಲೇ ಫೋರ್ಬ್ಸ್ ತನ್ನ ಮ್ಯಾಗಜೀನ್ ನಲ್ಲಿ ದಕ್ಷಿಣದ ತಾರೆಯರಿಗೆ ಸ್ಥಾನ ನೀಡಿ, ದಕ್ಷಿಣದ ಸೆಲೆಬ್ರಿಟಿ ಎನ್ನುವ ಮ್ಯಾಗಜೀನ್ ಬಿಡುಗಡೆ ಮಾಡಿದೆ. ಇದರಲ್ಲಿ ಕನ್ನಡದ ನಟ ಯಶ್, ದಕ್ಷಿಣದ ಸ್ಟಾರ್ ಗಳಲ್ಲಿ ನಯನತಾರಾ ಮತ್ತು ದುಲ್ಕರ್ ಸಲ್ಮಾನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ದಕ್ಷಿಣದ ನಟರಿಗೆ ಫೋರ್ಬ್ಸ್ ಸ್ಥಾನವನ್ನು ನೀಡಿದೆ. ಅದರಲ್ಲಿ ಕನ್ನಡದ ನಟ ಯಶ್ ಅವರು ಮ್ಯಾಗಜೀನ್ ನ ಮುಖಪುಟದಲ್ಲಿ ಸ್ಥಾನವನ್ನು ಪಡೆದುಕೊಂಡ ಕನ್ನಡದ ಮೊದಲ ನಟನಾಗಿದ್ದಾರೆ. ಇದುವರೆಗೂ ಕೂಡಾ ಕನ್ನಡದ ಬೇರೆ ಯಾವುದೇ ನಟ ಮತ್ತು ನಟಿಗೆ ಇಂತಹ ಗೌರವ ಸಿಕ್ಕಿಲ್ಲ. ಕೆಜಿಎಫ್ ನಂತರ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಜನಪ್ರಿಯತೆ ನಾಡಿನ ಗಡಿಯನ್ನು ದಾಟಿದೆ.
ಕೆಜಿಎಫ್-2 ಬಿಡುಗಡೆಗೆ ಸಜ್ಜಾಗುತ್ತಿದೆ, ಕೆಜಿಎಫ್-2 ನ ಟ್ರೈಲರ್ ಬಿಡುಗಡೆ ನಂತರ ಯಶ್ ಅವರ ಚಾರ್ಮ್ ಇನ್ನೂ ಹೆಚ್ಚಿದೆ. ಅವರು ಕರ್ನಾಟಕದಿಂದ ಹೊರಗೆ ವಿಸಿಟ್ ಮಾಡಿದ ಕಡೆಗಳಲ್ಲೂ ಸಹಾ ಅಭಿಮಾನಿಗಳು ಅವರ ಜೊತೆ ಸೆಲ್ಫಿಗಳಿಗಾಗಿ ಹಾತೊರೆಯುತ್ತಾರೆ. ಇದೆಲ್ಲಾ ಯಶ್ ಅವರ ಜನಪ್ರಿಯತೆ ಹಾಗೂ ಸ್ಟಾರ್ ಡಂ ಹೇಗಿದೆ ಎನ್ನುವಂತಿದ್ದು, ಇವೆಲ್ಲವುಗಳ ಫಲವೇ ಫೋರ್ಬ್ಸ್ ಮ್ಯಾಗಜೀನ್ ನ ಮುಖಪುಟದಲ್ಲಿ ಅವರು ಸ್ಥಾನ ಪಡೆಯಲು ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.