ಕನ್ನಡತಿ: ಹರ್ಷನ ಖುಷಿಗೆ ಮತ್ತೆ ಬ್ರೇಕ್!! ಆಸ್ಪತ್ರೆಯಲ್ಲೇ ನಡೀತಾ ಭುವಿಯ ಹ ತ್ಯೆ ಪ್ರಯತ್ನ??

Entertainment Featured-Articles News

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹತ್ತು ಹಲವು ಧಾರಾವಾಹಿಗಳಲ್ಲಿ ಕೆಲವು ಧಾರಾವಾಹಿಗಳು ಮಾತ್ರ ಜನರ ಮೆಚ್ಚುಗೆಯನ್ನು ಪಡೆದು ಸಿಕ್ಕಾಪಟ್ಟೆ ಸದ್ದು, ಸುದ್ದಿ ಮಾಡುತ್ತವೆ. ಅಂತಹ ಧಾರಾವಾಹಿಗಳ ಸಾಲಿನಲ್ಲಿ ಸದ್ಯಕ್ಕೆ ಕನ್ನಡತಿ ಧಾರಾವಾಹಿ ಸಹಾ ಸೇರಿದೆ. ಇತ್ತೀಚಿಗಷ್ಟೇ ಸೀರಿಯಲ್ ನಲ್ಲಿ ಬಹಳ ದೊಡ್ಡ ಟ್ವಿಸ್ಟ್ ಒಂದು ಇನ್ನಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಅಲ್ಲದೇ ಕೆಲವರ ಬೇಸರ ಹಾಗೂ ಅಸಮಾಧಾನಕ್ಕೆ ಸಹಾ ಇದು ಕಾರಣವಾಗಿದೆ. ಹೌದು, ಭುವನೇಶ್ವರಿ ತನ್ನ ಹುಟ್ಟೂರಾದ ಹಸಿರು ಪೇಟೆಯ ಬಳಿ ಬೆಟ್ಟದಿಂದ ತಳ್ಳಲಾಗಿತ್ತು.

ಆದರೂ ಅದೃಷ್ಟ ಚೆನ್ನಾಗಿದ್ದು ಆಕೆ ಬದುಕಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು, ಬದುಕಿನ ಹೋರಾಟ ಮಾಡುತ್ತಿರುವ ಭುವಿಗೆ ಪ್ರಜ್ಞೆ ಬಂದಿದೆ. ಇದರಿಂದ ನಾಯಕ ಹರ್ಷ ಖುಷಿಯಾಗಿದ್ದಾನೆ. ತಾನು ದೇವರಲ್ಲಿ ಅವಳು ಗುಣಮುಖಳಾಗಲೆಂದು ಕೇಳಿಕೊಂಡಿದ್ದು ನಿಜವಾಗಿದೆ ಎಂದು ಸಂಭ್ರಮದಲ್ಲಿ ಇರುವಾಗಲೇ ಭುವಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಆಕೆಯನ್ನು ಕೊ ಲ್ಲು ವ ಪ್ರಯತ್ನ ಮತ್ತೆ ನಡೆದಿದೆ.

ಕೊಟ್ಟ ಕೆಲಸ ಪೂರ್ಣ ಮಾಡದೇ ಹಣ ಮುಟ್ಟುವುದಿಲ್ಲ ಎಂದಿರುವ ಕಿ ಲ್ಲ ರ್ ಭುವಿ ಇರುವ ವಾರ್ಡ್ ಗೆ ಬಂದು ಆಕೆಯನ್ನು ಕೊ ಲ್ಲು ವ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ಆಕ್ಸಿಜನ್ ಮಾಸ್ಕ್ ತೆಗೆದು, ಅಲ್ಲೊಂದು ಹೂಗುಚ್ಛ ಇಟ್ಟು ಹೋಗಿದ್ದಾನೆ. ಕಿ ಲ್ಲ ರ್ ಗೆ ಸುಪಾರಿ ನೀಡಿದ್ದ ಸಾನಿಯಾಗೆ ಈಗ ಆ ತಂ ಕ ಶುರುವಾಗಿದೆ. ಇನ್ನೊಂದು ಕಡೆ ಭುವಿಯ ಈ ಸ್ಥಿತಿಗೆ ವರೂಧಿನಿ ಕಾರಣ ಎನ್ನುವ ಹರ್ಷ ಅನುಮಾನಕ್ಕೆ ತೆರೆ ಎಳೆಯಲು ವರೂಧಿನಿ ತನ್ನ ತಪ್ಪೇನಿಲ್ಲ ಎಂದು ಸಾಬೀತು ಮಾಡಲು ಕಿ ಲ್ಲ ರ್ ನನ್ನು ಹುಡುಕುವ ನಿರ್ಧಾರ ಮಾಡಿದ್ದಾಳೆ.

ಹಾಗಾದರೆ ವರೂಧಿನಿ ಸಾನಿಯಾಳ ಅಸಲಿ ಮುಖ ಬಯಲು ಮಾಡುತ್ತಾಳಾ? ಅನ್ನೋದು ಸದ್ಯದ ಪ್ರಶ್ನೆ. ಇನ್ನು ಸೀರಿಯಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಕೆಲವರು ಕನ್ನಡತಿ ಮೊದಲು ಹೊಸತನ ಹೊಂದಿತ್ತು, ಆದರೆ ಇದೀಗ ಎಲ್ಲಾ ಸೀರಿಯಲ್ ಹಾದಿಯಲ್ಲೇ ನಡೆದಿದೆ ಎಂದಿದ್ದಾರೆ. ಇನ್ನೂ ಕೆಲವರು ದೃಶ್ಯಗಳನ್ನು ಇಷ್ಟು ಎಳೆಯುವ ಅಗತ್ಯ ಏನು? ಎಂದರೆ, ಮತ್ತೆ ಕೆಲವರು ಮೊದಲು ಸೀರಿಯಲ್ ಮುಗಿಸಿ ಎನ್ನುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಬಹಳ ಆಸಕ್ತಿಯಿಂದ ಚೆನ್ನಾಗಿದೆ ಎನ್ನುತ್ತಿದ್ದಾರೆ.

Leave a Reply

Your email address will not be published.