ಕನ್ನಡತಿ ಸೀರಿಯಲ್ ನ ಹೊಸ ಹೆಜ್ಜೆ, ಹೊಸ ಪಯಣ: ಇನ್ಮುಂದೆ ಹಿಂದಿ ಪ್ರೇಕ್ಷಕರನ್ನು ರಂಜಿಸಲಿದ್ದಾಳೆ ಕನ್ನಡತಿ

Entertainment Featured-Articles News Viral Video

ಕನ್ನಡ ಕಿರುತೆರೆಯ ವಿಚಾರ ಬಂದಾಗ ಇಲ್ಲಿ ಮನರಂಜನೆಯ ಸಿಂಹಪಾಲು ಧಾರಾವಾಹಿಗಳದ್ದೇ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾಗಿದೆ. ಕನ್ನಡದ ಖಾಸಗಿ ವಾಹಿನಿಗಳಲ್ಲಿ ಹತ್ತು, ಹಲವು ಸೀರಿಯಲ್ ಗಳು ಪ್ರಸಾರವಾಗುತ್ತಿವೆ, ಪ್ರೇಕ್ಷಕರನ್ನು ರಂಜಿಸಿ ಅವರಿಗೆ ಮನರಂಜನೆಯನ್ನು ನೀಡುತ್ತಿದೆ. ಕೆಲವು ಸೀರಿಯಲ್ ಗಳು ಪ್ರೇಕ್ಷಕರ ವಿಶೇಷ ಮನ್ನಣೆಯನ್ನು ಪಡೆದುಕೊಂಡಿವೆ. ಇನ್ನು ಕನ್ನಡದ ಧಾರಾವಾಹಿಗಳ ಜೊತೆಗೆ ಹಲವು ಡಬ್ಬಿಂಗ್ ಧಾರಾವಾಹಿಗಳು ಸಹಾ ಜನರನ್ನು ರಂಜಿಸುತ್ತಾ, ಸಾಕಷ್ಟು ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದು, ಜನ ಡಬ್ಬಿಂಗ್ ಸೀರಿಯಲ್ ಗಳಿಗೂ ವಿಶೇಷ ಒಲವು ತೋರಿಸಿದ್ದಾರೆ.

ಕೆಲವು ಡಬ್ಬಿಂಗ್ ಸೀರಿಯಲ್ ಗಳಾದರೆ ಕನ್ನಡದ ಸೀರಿಯಲ್ ಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡುತ್ತಾ ಯಶಸ್ಸನ್ನು ಪಡೆದುಕೊಳ್ಳುತ್ತಿವೆ. ಕನ್ನಡ ಸೀರಿಯಲ್ ಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಆದರೆ ಈಗ ಇವೆಲ್ಲವುಗಳ ನಡುವೆಯೇ ಕನ್ನಡದ ಸೀರಿಯಲ್ ಹಿಂದಿ ಭಾಷೆಗೆ ಡಬ್ ಆಗುವ ಮೂಲಕ, ಹಿಂದಿ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹೌದು, ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಜನರ ಮನಸ್ಸನ್ನು ಗೆದ್ದು ಯಶಸ್ಸಿನ ನಾಗಾಲೋಟ ಮಾಡುತ್ತಿರುವ ಕನ್ನಡತಿ ಡಬ್ಬಿಂಗ್ ಮೂಲಕ ಸದ್ದು ಮಾಡಿದೆ‌.

ಕನ್ನಡತಿ ಧಾರಾವಾಹಿಯ ಹಿಂದಿ ಡಬ್ಬಿಂಗ್ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು, ಅದರ ಪ್ರೊಮೊ ಸಹಾ ಬಿಡುಗಡೆ ಆಗಿದೆ. ಹಿಂದಿಯಲ್ಲಿ ಈ ಸೀರಿಯಲ್ ಅಜ್ನಬಿ ಬನೇ ಹಮ್ ಸಫರ್ ಎನ್ನುವ ಹೆಸರಿನಲ್ಲಿ ಪ್ರಸಾರವನ್ನು ಮಾಡಲಿದೆ. ಇನ್ನು ಕನ್ನಡತಿ ಧಾರಾವಾಹಿಯು ಹಿಂದಿಗೆ ಡಬ್ ಆಗುತ್ತಿರುವ ಖುಷಿಯನ್ನು ಸೀರಿಯಲ್ ನ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ. ಪ್ರೋಮೋವನ್ನು ಅನೇಕರು ಶೇರ್ ಮಾಡಿಕೊಂಡಿದ್ದಾರೆ.

ಕನ್ನಡತಿ ಹಿಂದಿಗೆ ಡಬ್ ಆಗುತ್ತಿರುವ ಖುಷಿಯ ವಿಚಾರವನ್ನು ಸೀರಿಯಲ್ ನ ನಾಯಕ ಕಿರಣ್ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿಯೂ ಶೇರ್ ಮಾಡಿಕೊಂಡು ತಮ್ಮ ಖುಷಿಯನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ಕಿರಣ್ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಿಂದಿ ಪ್ರೋಮೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹಂಚಿಕೊಂಡ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ.

Leave a Reply

Your email address will not be published.