ಕನ್ನಡತಿ ಸೀರಿಯಲ್ ನಿಂದ ನಟಿ ರಮೋಲಾ ಹೊರ ಬಂದಿದ್ದೇಕೆ?? ಇಲ್ಲಿದೆ ನೋಡಿ ಅಸಲಿ ಕಾರಣ!!

Entertainment Featured-Articles News
39 Views

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಆಗಿರುವ ಪ್ರಮುಖ ಬದಲಾವಣೆಯ ಕುರಿತಾಗಿ ಈಗಾಗಲೇ ನಿಮಗೆ ತಿಳಿದಿರಬಹುದು, ಈ ಸೀರಿಯಲ್ ನಲ್ಲಿನ ಪ್ರಮುಖ ಪಾತ್ರವಾದ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಆಗಮನ ಆಗಿರುವ ವಿಷಯ ಈಗಾಗಲೇ ದೊಡ್ಡ ಸುದ್ದಿಗಳಾಗಿದೆ ಹಾಗೂ ಹೊಸ ನಟಿಯು ನಟಿಸಿರುವ ಕಂತುಗಳು ಸಹಾ ಪ್ರಸಾರ ಆರಂಭಿಸಿದೆ. ಹಾಗಾದರೆ ಇಂತಹುದೊಂದು ಬದಲಾವಣೆ ಏಕಾಯ್ತು ಅನ್ನೋದು ಈಗ ಪ್ರೇಕ್ಷಕರ ಪ್ರಶ್ನೆಯಾಗಿದೆ. ಇಷ್ಟು ದಿನ ಸಾನಿಯಾ ಪಾತ್ರದಲ್ಲಿದ್ದ ರಮೋಲ ಸೀರಿಯಲ್ ಏಕೆ ಬಿಟ್ರು ಅನ್ನೋ ಅನುಮಾನ ಎಲ್ಲರನ್ನು ಕಾಡಿದೆ.

ಹೌದು ಕನ್ನಡತಿ ಸೀರಿಯಲ್ ನಲ್ಲಿ ನೆಗೆಟಿವ್ ರೋಲ್ ಆಗಿರುವ ಸಾನಿಯಾ ಪಾತ್ರದಲ್ಲಿ ನಟಿ ರಮೋಲ ಮಿಂಚುತ್ತಾ, ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಜನಪ್ರಿಯತೆ ಪಡೆದುಕೊಂಡಿದ್ದರು. ಅವರ ಪಾತ್ರ ಜನರಿಗೆ ಇಷ್ಟವಾಗಿತ್ತು. ಆದರೆ ಇದೀಗ ರಮೋಲ ಅವರು ನಿರ್ವಹಿಸುತ್ತಿದ್ದ ಪಾತ್ರಕ್ಕೆ ನಟಿ ಆರೋಹಿ ನೈನಾ ಅವರ ಆಗಮನವಾಗಿದೆ. ತನಗೆ ಇಷ್ಟೊಂದು ಜನಪ್ರಿಯತೆ ತಂದುಕೊಟ್ಟ ಪಾತ್ರದಿಂದ ರಮೋಲಾ ಏಕೆ ಹೊರ ಬಂದರು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

ಇನ್ನು ರಮೋಲ ಅವರ ಈ ನಿರ್ಧಾರಕ್ಕೆ ಕಾರಣ ಏನಿರಬಹುದು ಎನ್ನುವ ವಿಷಯಕ್ಕೆ ಬಂದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ಅನೇಕ ಕಲಾವಿದರು ತೆಲುಗಿನ ಕಿರುತೆರೆಯಲ್ಲಿ ಅವಕಾಶಗಳನ್ನು ಪಡೆಯುತ್ತಾ ಸಾಲು ಸಾಲು ಕಲಾವಿದರು ತೆಲುಗು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ. ಈಗ ಅದೇ ಸಾಲಿಗೆ ನಟಿ ರಮೋಲ ಕೂಡಾ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ. ಈ ನಟಿಗೂ ತೆಲುಗಿನಿಂದ ಅವಕಾಶ ಬಂದಿದೆ ಎನ್ನಲಾಗಿದೆ‌.

ಸುದ್ದಿಗಳ ಪ್ರಕಾರ ರಮೋಲ ಅವರಿಗೆ ತೆಲುಗಿನ ಸೀರಿಯಲ್ ಒಂದರಲ್ಲಿ ನಾಯಕಿ ಪಾತ್ರ ದೊರಕಿದೆ ಎನ್ನಲಾಗಿದೆ. ನಾಯಕಿ ಪಾತ್ರವೆಂದರೆ ಸಹಜವಾಗಿಯೇ ಸೀರಿಯಲ್ ಗಳಲ್ಲಿ ಹೆಚ್ಚಿನ ಸ್ಕೋಪ್ ಇರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆದ್ದರಿಂದಲೇ ನೆಗೆಟಿವ್ ಶೇಡ್ ಇದ್ದ ಸಾನಿಯಾ ಪಾತ್ರದಿಂದ ಹೊರ ಬಂದಿರುವ ರಮೋಲ ಈಗ ಸೀರಿಯಲ್ ನಲ್ಲಿ ನಾಯಕಿಯಾಗಲು ಹೊರಟಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *