HomeEntertainmentಕನ್ನಡತಿ ಸೀರಿಯಲ್ ನಲ್ಲಿ ನಡೆದಿದೆ ದೊಡ್ಡ ಬದಲಾವಣೆ: ಈ ಬದಲಾವಣೆ ಪ್ರೇಕ್ಷಕರು ಒಪ್ತಾರಾ??

ಕನ್ನಡತಿ ಸೀರಿಯಲ್ ನಲ್ಲಿ ನಡೆದಿದೆ ದೊಡ್ಡ ಬದಲಾವಣೆ: ಈ ಬದಲಾವಣೆ ಪ್ರೇಕ್ಷಕರು ಒಪ್ತಾರಾ??

ಕನ್ನಡ ಕಿರುತೆರೆಯ ಬಹಳಷ್ಟು ಜನಪ್ರಿಯ ಧಾರಾವಾಹಿ ಗಳ ನಡುವೆ ಕೆಲವು ಧಾರಾವಾಹಿಗಳು ಅದ್ಭುತ ಜನಾದರಣೆಯನ್ನು ಪಡೆದುಕೊಂಡಿವೆ. ಅಂತಹ ಜನಪ್ರಿಯ ಧಾರಾವಾಹಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಧಾರಾವಾಹಿ ಕನ್ನಡತಿ. ಈ ಧಾರಾವಾಹಿಯಲ್ಲಿ ಸಾನಿಯ ಪಾತ್ರದ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದಿರುವ ನಟಿ ರಮೋಲಾ. ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಹಾಗೂ ನಾಯಕಿ ಭುವನೇಶ್ವರಿಗೆ ಕೆಟ್ಟದ್ದನ್ನು ಬಯಸುವ ಪಾತ್ರ ಸಾನಿಯಾ ಪಾತ್ರ. ಅಲ್ಲದೇ ರತ್ನಮಾಲಾ ಆಸ್ತಿಯನ್ನು ಹೇಗಾದರೂ ಮಾಡಿ ಕೊಳ್ಳೆ ಹೊಡೆಯಬೇಕೆಂದ ದುರಾಸೆ.

ಅದಕ್ಕಾಗಿ ಹೊಸ ಹೊಸ ಕುತಂತ್ರಗಳನ್ನು ಹೆಣೆಯುವ ಪಾತ್ರದ ಮೂಲಕ ರಮೋಲ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅವರದ್ದು ನೆಗೆಟಿವ್ ಶೇಡ್ ಇರುವ ಪಾತ್ರವಾಗಿದ್ದರೂ ಕೂಡಾ ತನ್ನ ಪಾತ್ರದ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು ನಟಿ ರಮೋಲ ಅವರಿಗೆ ಕನ್ನಡತಿ ಧಾರಾವಾಹಿಯ ಮೂಲಕ ಪ್ರಬಲ ಸಾಕಷ್ಟು ಜನಪ್ರಿಯತೆ ದೊರೆತಿದೆ. ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿ ಪೇಜ್ ಗಳು ಕೂಡ ಪ್ರಾರಂಭವಾಗಿದೆ.

ಹೀಗೆ ಸಾಕಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡ ನಟಿ ರಮೋಲಾ ಇದೀಗ ಕನ್ನಡತಿ ಧಾರವಾಹಿ ಹೊರನಡೆದಿದ್ದಾರೆ. ಹೌದು ನಟಿ ರಮೋಲ ಸಾನಿಯಾ ಪಾತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಅವರು ಸೀರಿಯಲ್ ನಿಂದ ಹೊರ ಬಂದಿರುವ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲವಾದರೂ ಈಗಾಗಲೇ ಅವರ ಪಾತ್ರಕ್ಕೆ ಹೊಸ ನಟಿಯೊಬ್ಬರ ಆಗಮನವಾಗಿದೆ ಎನ್ನಲಾಗಿದೆ. ಆ ನಟಿ ಈಗಾಗಲೇ ಸೀರಿಯಲ್ ತಂಡವನ್ನು ಸೇರಿ ಚಿತ್ರೀಕರಣ ಕೂಡಾ ನಡೆದಿದೆ ಎನ್ನಲಾಗಿದೆ.

ಇನ್ನು ಮುಂದೆ ಸಾನಿಯ ಪಾತ್ರದಲ್ಲಿ ನಟಿ ಆರೋಹಿ ನೈನಾ ನಟಿಸಲಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಆರೋಹಿ ಅವರು ನಟಿಸಿರುವ ಸಂಚಿಕೆಗಳು ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಡಿಮೆ ಟಿ ಆರ್ ಪಿ ಕಾರಣದಿಂದ ಬೇಗ ಮುಗಿದ ಸೀರಿಯಲ್ ಹೂಮಳೆಯಲ್ಲಿ ಆರೋಹಿ ನೈನಾ ಅವರು ನಟಿಸಿದ್ದರು. ಈಗ ರಮೋಲ ನಿರ್ವಹಿಸುತ್ತಿದ್ದ ಸಾನಿಯಾ ಪಾತ್ರಕ್ಕೆ ಅವರು ಜೀವ ತುಂಬಬೇಕಿದೆ.

- Advertisment -