ಕನ್ನಡ,ತಮಿಳು, ಹಿಂದಿಗಿಂತ ಪ್ರಾಚೀನವಾದ ಈ ಭಾಷೆ ರಾಷ್ಟ್ರ ಭಾಷೆ ಯಾಕಾಗಿಲ್ಲ? ಕಂಗನಾ ರಣಾವತ್ ಪ್ರಶ್ನೆ !!
ಕಳೆದ ಕೆಲವು ದಿನಗಳಿಂದಲೂ ಸಹಾ ಹಿಂದಿ ರಾಷ್ಟ್ರ ಭಾಷೆ ಎನ್ನುವ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನ್ನಡ ಸಿನಿಮಾ ರಂಗದ ಸ್ಟಾರ್ ನಟನಾಗಿರುವ ನಟ ಕಿಚ್ಚ ಸುದೀಪ್ ಅವರು ಸಿನಿಮಾ ಸಮಾರಂಭವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವ ಮಾತನ್ನು ಹೇಳಿದ ಮೇಲೆ ಇದು ರಾಷ್ಟ್ರ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿತು. ಸುದೀಪ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಬಾಲಿವುಡ್ ನಟ ಅಜಯ್ ದೇವಗನ್ ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಹಾಗಾದರೆ ನಿಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ ಎನ್ನುವ ಮಾತನ್ನು ಹೇಳಿ ವಿ ವಾ ದ ಹುಟ್ಟು ಹಾಕಿದ್ದರು.
ಅಜಯ್ ದೇವಗನ್ ಅವರ ಮಾತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಸ್ಯಾಂಡಲ್ವುಡ್ ನಟರಿಂದ ಹಿಡಿದು, ರಾಜಕೀಯ ನಾಯಕರು ಸಹಾ ಅಜಯ್ ದೇವಗನ್ ಅವರ ಮಾತನ್ನು ಖಂಡಿಸಿದರು, ಸೋಶಿಯಲ್ ಮೀಡಿಯಾಗಳಲ್ಲಿ ಅಜಯ್ ದೇವಗನ್ ಅವರ ಮಾತಿಗೆ ಆ ಕ್ರೋ ಶ ವ್ಯಕ್ತವಾದ ಬೆನ್ನಲ್ಲೇ ನಟ ಅನುವಾದ ಮಾಡುವಲ್ಲಿ ಪ್ರಮಾದ ಆಗಿ ಹೋಗಿದೆ ಎಂದು ತಾನು ಆಡಿದ ಮಾತು ತಪ್ಪೆಂದು ಹೇಳಿದರು. ಈಗ ಈ ಹಿಂದಿ ಭಾಷೆಯ ಕುರಿತ ಚರ್ಚೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಸೇರ್ಪಡೆಯಾಗಿದ್ದಾರೆ.
ಹೌದು, ನಟಿ ಕಂಗನಾ ರಣಾವತ್ ತಮ್ಮದೇ ಶೈಲಿಯಲ್ಲಿ ಹೊಸ ಹೇಳಿಕೆಯೊಂದನ್ನು ನೀಡಿದ್ದಾರೆ. ನಟಿಯು ಸದ್ಯಕ್ಕೆ ಹಿಂದಿ ಭಾಷೆಯೇ ರಾಷ್ಟ್ರ ಭಾಷೆ ಆಗಿದ್ದರೂ, ಈ ಭಾಷೆಯ ಬದಲಾಗಿ ಬೇರೊಂದು ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ. ಅಲ್ಲದೇ ಏಕೆ ಆ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು ಎನ್ನುವುದಕ್ಕೆ ಕಾರಣವನ್ನು ಸಹಾ ನೀಡಿದ್ದಾರೆ. ಹಾಗಾದರೆ ನಟಿ ಕಂಗನಾ ಪ್ರಕಾರ ಯಾವ ಭಾಷೆ ರಾಷ್ಟ್ರ ಭಾಷೆ ಆಗಬೇಕಿದೆ? ಬನ್ನಿ ತಿಳಿಯೋಣ.
ನಟಿ ಕಂಗನಾ ಮಾತನಾಡುತ್ತಾ, ಸಂಸ್ಕೃತ ಭಾಷೆಯು ಕನ್ನಡ, ತಮಿಳು, ಗುಜರಾತಿ, ಹಿಂದಿ ಅಥವಾ ಇನ್ನಾವುದೇ ಭಾಷೆಗಿಂತ ಪ್ರಾಚೀನ ಭಾಷೆಯಾಗಿದೆ. ಎಲ್ಲಾ ಭಾಷೆಗಳ ಮೂಲ ಸಂಸ್ಕೃತವಾಗಿದೆ. ಎಲ್ಲಾ ಭಾಷೆಗಳು ಸಹಾ ಸಂಸ್ಕೃತದಿಂದಲೇ ಉಗಮವಾಗಿದೆ. ಹಾಗಿದ್ದ ಮೇಲೆ ಸಂಸ್ಕೃತ ಏಕೆ ರಾಷ್ಟ್ರ ಭಾಷೆಯಾಗಿಲ್ಲ ಎನ್ನುವ ಮಾತನ್ನು ಹೇಳುವ ಮೂಲಕ ಸಂಸ್ಕೃತವು ರಾಷ್ಟ್ರ ಭಾಷೆಯಾಗಬೇಕಿದೆ ಎನ್ನುವ ಮಾತನ್ನು ಹೇಳಿದ್ದಾರೆ.
ಕಂಗನಾ ಹೇಳಿರುವ ಮಾತಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕಂಗನಾ ನುಡಿದ ಮಾತುಗಳು ಅಕ್ಷರಶಃ ಸತ್ಯವಾದ ಮಾತುಗಳಾಗಿವೆ ಎನ್ನುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ಕಂಗನಾ ಅವರ ಮಾತು ತಪ್ಪು, ಭಾರತದಲ್ಲಿ ತಮಿಳು ಪ್ರಾಚೀನ ಭಾಷೆ ಇತಿಹಾಸ ತಿಳಿಯಿರಿ ಎಂದು ನಟಿಗೆ ಸಲಹೆ ನೀಡಿದ್ದಾರೆ.