ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಇದೇ ಡಿಸೆಂಬರ್ 17ರಂದು ಎಲ್ಲೆಡೆ ಬಿಡುಗಡೆಯಾಗುತ್ತಿದೆ. ಸಿನಿಮಾ ಈಗಾಗಲೇ ಹಾಡುಗಳು ಹಾಗೂ ಟ್ರೈಲರ್ ಮುಖಾಂತರ ದೊಡ್ಡ ಸದ್ದು ಮಾಡುತ್ತಿದೆ. ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಸಿನಿಮಾ ದಕ್ಷಿಣದ ನಾಲ್ಕು ಭಾಷೆಗಳೂ ಸೇರಿದಂತೆ ಹಿಂದಿಯಲ್ಲಿ ಕೂಡಾ ಬಿಡುಗಡೆಯಾಗುತ್ತಿದೆ. ಕನ್ನಡ ಭಾಷೆಯಲ್ಲಿಯೂ ಪುಷ್ಪ ಡಬ್ಬಿಂಗ್ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ವಿಷಯ ಇದೆ.
ಕರ್ನಾಟಕದಲ್ಲಿ ಪುಷ್ಪ ಕನ್ನಡ ಡಬ್ಬಿಂಗ್ ಗಿಂತಲೂ ಹೆಚ್ಚಾಗಿ, ಮೂಲ ತೆಲುಗು ಅವತರಣಿಕೆಯಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ಐದು ಭಾಷೆಗಳಲ್ಲಿ ಡಬ್ಬಿಂಗ್ ಆಗಿರುವ ಸಿನಿಮಾ ಕನ್ನಡದಲ್ಲಿ ಇದ್ದರೂ ಸಹಾ ತೆಲುಗು ಭಾಷೆಯ ಮೂಲ ಸಿನಿಮಾ ಹೆಚ್ಚಿನ ಥಿಯೇಟರುಗಳಲ್ಲಿ ಬಿಡುಗಡೆ ಮಾಡುತ್ತಿರುವುದು ಸಿನಿಮಾ ವಿತರಕರು ಕನ್ನಡ ಭಾಷೆಗೆ ದ್ರೋಹ ಬಗೆಯುತ್ತಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಮೂಡಿಸುವಂತಿದೆ.
ಈ ಹಿಂದೆ ಡಬ್ಬಿಂಗ್ ಸಿನಿಮಾಗಳಿಗೆ ವಿ ರೋ ಧ ವ್ಯಕ್ತವಾದಾಗ ಅದರ ಪರವಾಗಿ ದನಿ ಎತ್ತಿದವರು, ಅನ್ಯ ಭಾಷೆಯ ಉತ್ತಮ ಸಿನಿಮಾಗಳು ನಮ್ಮ ಜನರಿಗೆ ತಲುಪಲು ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ನೀಡಬೇಕು, ನಮ್ಮ ಭಾಷೆಯನ್ನು ಉಳಿಸಬೇಕು ಎಂದೆಲ್ಲಾ ಹೇಳಿದ್ದರು. ಆದರೆ ಈಗ ಪುಷ್ಪ ಸಿನಿಮಾ ಕನ್ನಡ ಭಾಷೆಗೆ ಡಬ್ ಆಗಿದ್ದರೂ ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲಿಯೇ ಹೆಚ್ಚಿನ ಥಿಯೇಟರುಗಳಲ್ಲಿ ಬಿಡುಗಡೆ ಕಾಣುತ್ತಿದೆ.
ಹೌದು, ಇಂತಹುದೊಂದು ಅನುಮಾನ ಬರಲು ಮುಖ್ಯ ಕಾರಣ ಆನ್ ಲೈನ್ ನಲ್ಲಿ ಸಿನಿಮಾ ಟಿಕೆಟ್ ಬುಕ್ ಮಾಡಲು ಪ್ರಯತ್ನ ಪಟ್ಟವರಿಗೆ ಆನ್ ಲೈನ್ ನಲ್ಲಿ ಪುಷ್ಪ ಸಿನಿಮಾದ ಬುಕಿಂಗ್ ಮಾಡುವಲ್ಲಿ ಕನ್ನಡ ಡಬ್ಬಿಂಗ್ ಬದಲು ಹೆಚ್ಚು ತೆಲುಗು ಸಿನಿಮಾ ಪ್ರದರ್ಶನಕ್ಕೆ ಟಿಕೆಟ್ ಗಳು ಬುಕ್ಕಿಂಗ್ ಕಾಣುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪುಷ್ಪ ಕನ್ನಡ ಡಬ್ಬಿಂಗ್ ನಲ್ಲಿ ಹೆಚ್ಚು ಬಿಡುಗಡೆ ಆಗುತ್ತಿಲ್ಲ ಎನ್ನುವುದು ತಿಳಿಯುತ್ತದೆ.