ಕನಸು ನನಸು ಮಾಡಲು ಹೆಲಿಕಾಪ್ಟರ್ ಸಿದ್ಧಪಡಿಸಿದ ಯುವಕ: ಆದರೆ ಆ ವಿಧಿಯಾಟ ಬೇರೆಯೇ ಆಗಿತ್ತು.

Written by Soma Shekar

Published on:

---Join Our Channel---

ಜೀವನದಲ್ಲಿ ನಾವು ಅನೇಕ ಕನಸುಗಳನ್ನು ಕಾಣುತ್ತೇವೆ. ಆದರೆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಮಾತ್ರ ಕೆಲವರು ಮಾತ್ರವೇ ಮಾಡುತ್ತಾರೆ. ಆದರೆ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡುವುದು ತಪ್ಪಲ್ಲ, ಆದರೆ ಆ ದಾರಿಯಲ್ಲಿ ಸಾಗುವಾಗ ಎದುರಾಗುವಂತಹ ಎಲ್ಲಾ ರೀತಿಯ ಅಡೆ ತಡೆಗಳನ್ನು, ಆ ತಂ ಕಗಳನ್ನು ಎದುರಿಸುವ ಕುರಿತಾಗಿಯೂ ಕೂಡ ನಾವು ಸರ್ವ ಸನ್ನದ್ಧರಾಗಿರಬೇಕು. ಸಾಕಷ್ಟು ಜಾಗೃತರಾಗಿರಬೇಕು. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಮುಖ್ಯ, ಆದರೆ ಅದು ನಮ್ಮ ಪ್ರಾಣಕ್ಕೆ ಸಂಚಕಾರ ತಂದರೆ ಆಗ ನಮ್ಮ ಕನಸು ಕನಸಾಗಿಯೇ ಉಳಿಯುತ್ತದೆ. ಆದ್ದರಿಂದಲೇ ಸಾಕಷ್ಟು ಎಚ್ಚರವಾಗಿಯೂ ಇರಬೇಕಾದದ್ದು ಅನಿವಾರ್ಯ ವಾಗಿದೆ. ಇಂತಹುದೇ ಒಂದು ಘಟನೆಯನ್ನು ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮಹಾರಾಷ್ಟ್ರದ ಯುವಕನೊಬ್ಬ ಸ್ವಂತವಾಗಿ ಹೆಲಿಕಾಪ್ಟರ್ ಸಿದ್ಧಪಡಿಸಿದ್ದಾನೆ.

ಯುವಕನು ತಾನು ಬಹಳ ಶ್ರಮ ವಹಿಸಿ, ಸಿದ್ದಪಡಿಸಿದ ಸುಂದರವಾದ ಹೆಲಿಕಾಪ್ಟರನ್ನು ಪರೀಕ್ಷೆ ಮಾಡುವ ಸಲುವಾಗಿ ಆತನು ಮಾಡಿದಂತಹ ಒಂದು ಪ್ರಯತ್ನದಲ್ಲಿ ಆ ಯುವಕನ ಪ್ರಾಣಪಕ್ಷಿ ಹಾರಿ ಹೋದಂತಹ ಮನಕಲಕುವ ಘಟನೆಯೊಂದು ನಡೆದು ಹೋಗಿದೆ. ದೊರೆತಿರುವ ಮಾಹಿತಿಗಳ ಪ್ರಕಾರ
ಯುವಕನನ್ನು ಮಹಾಗಾಂವ್ ತಾಲೂಕಿನ ಫುಲ್ಸವಾಂಗಿ ನಿವಾಸಿ ಶೇಖ್ ಇಸ್ಮಾಯಿಲ್ ಅಲಿಯಾಸ್ ಮುನ್ನಾ ಹೆಲಿಕಾಪ್ಟರ್ ಎಂದು ಗುರುತಿಸಲಾಗಿದೆ. 24 ವರ್ಷದ ಯುವಕ ತಾನೇ ಸ್ವಂತವಾಗಿ ಒಂದು ಸುಂದರವಾದ ಹೆಲಿಕ್ಯಾಪ್ಟರ್ ನಿರ್ಮಾಣ ಮಾಡುತ್ತಿದ್ದನು.

ಈ ಹೆಲಿಕಾಪ್ಟರ್ ನಿರ್ಮಾಣಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ಬಹಳಷ್ಟು ಶ್ರಮವಹಿಸಿ, ನಿರಂತರ ಪ್ರಯತ್ನವನ್ನು ಮುಂದುವರಿಸಿದ್ದ. ದಿನಕಳೆದಂತೆ ಆತನ ಕನಸು ಹೆಲಿಕ್ಯಾಪ್ಟರ್ ನ ರೂಪವನ್ನು ತಳೆಯುತ್ತಾ ಸಾಗಿತ್ತು. ಇನ್ನೇನು ಆತನ ಕನಸು ನನಸಾಗುವ ಸಮಯ ಬಂದೇ ಬಂತು ಎನ್ನುವಾಗಲೇ ನಡೆದಂತಹ ಹಾಗೂ ಅ ವ ಘಡದಲ್ಲಿ ಆತ ಪ್ರಾಣವನ್ನು ಕಳೆದುಕೊಂಡಿದ್ದಾನೆ.‌ಆತನ ಕನಸು ಆತನ ಸಾವಿಗೆ ಕಾರಣವಾಗಿದೆ. ವೆಲ್ಡಿಂಗ್ ಶಾಪ್ ಒಂದರಲ್ಲಿ ಇಸ್ಮಾಯಿಲ್ ಬೆಳಗಿನ ಹೊತ್ತು ಕೆಲಸವನ್ನು ಮಾಡಿ, ರಾತ್ರಿಯ ಹೊತ್ತು ತನ್ನ ಕನಸಿನ ಹೆಲಿಕ್ಯಾಪ್ಟರ್ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಿದ್ದನು. ಕೇವಲ 8ನೇ ತರಗತಿಯವರೆಗೆ ಓದಿದ್ದ ಈತನಿಗೆ ಹೆಲಿಕ್ಯಾಪ್ಟರ್ ಸಿದ್ಧಪಡಿಸುವುದು ಒಂದು ಗುರಿಯಾಗಿತ್ತು.

ತನ್ನ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಆತನ ಪ್ರಯತ್ನ ಸಫಲವೇನೋ ಆಯಿತು, ಹೆಲಿಕಾಪ್ಟರ್ ಸಿದ್ಧ ಕೂಡಾ ಆಯಿತು. ಅದರ ಟೆಸ್ಟಿಂಗ್ ಮಾತ್ರ ಬಾಕಿ ಉಳಿದಿತ್ತು. ಆಗಸ್ಟ್ 10 ನೇ ತಾರೀಕು ತಾನು ಸಿದ್ಧಪಡಿಸಿದ ಹೆಲಿಕ್ಯಾಪ್ಟರ್ ನ ಟೆಸ್ಟಿಂಗ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ಇಸ್ಮಾಯಿಲ್ ಹೆಲಿಕ್ಯಾಪ್ಟರ್ ನ ಟೆಸ್ಟಿಂಗ್ ಆರಂಭಿಸಿದ್ದಾನೆ. ಹೆಲಿಕಾಪ್ಟರ್ ನ ಇಂಜಿನ್ ಆರಂಭವಾಗಿದೆ, ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಹೆಲಿಕಾಪ್ಟರ್ ನ ಹಿಂದಿನ ಫ್ಯಾನ್ ಮುರಿದು ಮುಖ್ಯ ಫ್ಯಾನಿಗೆ ತಗುಲಿದೆ. ಇದಾದ ನಂತರ ಫ್ಯಾನ್ ಅಲ್ಲೇ ಇದ್ದ ಇಸ್ಮಾಯಿಲ್ ತಲೆಗೆ ಹೋಗಿ ಬಲವಾಗಿ ಹೊಡೆದಿದೆ. ಫ್ಯಾನ್ ತಗುಲಿದ ಹೊಡೆತಕ್ಕೆ ಇಸ್ಮಾಯಿಲ್ ಕನಸು ಅಲ್ಲಿಗೆ ಕೊನೆಯಾಗಿ, ಆತನ ಪ್ರಾಣ ಪಕ್ಷಿ ಹಾರಿಹೋಗಿದೆ. ಆತನ ಕುಟುಂಬ ವರ್ಗದಲ್ಲಿ ನೋವಿನ ಛಾಯೆ ಮೂಡಿದೆ.

Leave a Comment