‘ಕನಸು ನನಸಾದ ದಿನ’: ಫೋಟೋ ಶೇರ್ ಮಾಡಿ ತನ್ನ ಖುಷಿಯನ್ನು ಹಂಚಿಕೊಂಡ ನಟಿ ಪೂಜಾ ಹೆಗ್ಡೆ

Written by Soma Shekar

Published on:

---Join Our Channel---

ಬಾಲಿವುಡ್ ಹಾಗೂ ಟಾಲಿವುಡ್ ನ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಪೂಜಾ ಹೆಗ್ಡೆ, ಬಾಲಿವುಡ್ ಗಿಂತಲೂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಮಾತ್ರ ತೆಲುಗು ಸಿನಿಮಾ ರಂಗದಲ್ಲಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಟಿ ಪೂಜಾ ಹೆಗ್ಡೆ ಟಾಲಿವುಡ್ ನ ಸ್ಟಾರ್ ನಟಿ, ಬಹುಬೇಡಿಕೆಯ ನಟಿ ಹಾಗೂ ಇದೇ ವೇಳೆ ಮತ್ತೋರ್ವ ಸ್ಟಾರ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣಾಗೆ ಒಬ್ಬ ಪ್ರಬಲ ಸ್ಪರ್ಧಿ ಸಹಾ ಎಂದು ಹೇಳಬಹುದು. ಏಕೆಂದರೆ ಸದ್ಯಕ್ಕೆ ತೆಲುಗು ಭಾಷೆಯ ಸಿನಿನಾಗಳಲ್ಲಿ ಈ ಕನ್ನಡ ಮೂಲದ ನಟಿಯರದ್ದೇ ಕಾರು ಬಾರು.

ತೆಲುಗಿನಲ್ಲಿ ಬಹುದೊಡ್ಡ ಜನಪ್ರಿಯತೆ ಹಾಗೂ ಸ್ಟಾರ್ ಡಂ ಪಡೆದಿರುವ ಪೂಜಾ ಬಾಲಿವುಡ್ ನಲ್ಲಿ ತಮ್ಮ ಎಂಟ್ರಿ ಹೃತಿಕ್ ರೋಶನ್ ಜೊತೆ ಮಹೆಂಜೋದಾರೋ ಸಿನಿಮಾ ಮೂಲಕ ಮಾಡಿದರು. ಆದರೆ ಸಿನಿಮಾ ಯಶಸ್ಸನ್ನು ಪಡೆಯಲಿಲ್ಲ. ಇನ್ನು ತೆಲುಗಿನಲ್ಲಿ ನಾಗಚೈತನ್ಯ ಜೊತೆಗೆ ಒಕ ಲೈಲಾ ಕೋಸಂ ಸಿನಿಮಾ ಮೂಲಕ ತೆಲುಗು ಸಿನಿ ಇಂಡಸ್ಟ್ರಿ ಗೆ ಕಾಲಿಟ್ಟ ಪೂಜಾ ಹೆಗ್ಡೆ ಸಾಲು ಸಾಲು ಸ್ಟಾರ್ ನಟರ ಪಕ್ಕದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹಳ ಬೇಗ ಸ್ಟಾರ್ ನಟಿಯಾಗಿ ಬೆಳೆದರು.

ಇದೀಗ ಈ ನಟಿ ಒಂದು ಖುಷಿಯ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಹೌದು ನಟಿ ಪೂಜಾ ಹೆಗ್ಡೆ ಅವರು ಮುಂಬೈನಲ್ಲಿ ಹೊಸ ಮನೆಯನ್ನು ಕಟ್ಟಿಸಿ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಅವರು, “ಮನಸ್ಸಿಗೆ ತೃಪ್ತಿ , ಸಂತೋಷ ತಂದ ದಿನಕ್ಕೆ ಒಂದು ವರ್ಷ, ನಿಮ್ಮನ್ನು ನೀವು ನಂಬಿ ಶ್ರಮ ಪಡಿ, ಇಡೀ ಜಗತ್ತು ನಿನ್ನ ಹಠವಾದಿ ಹೃದಯೊಂದಿಗೆ ಪ್ರೀತಿಯಲ್ಲಿ ಬೀಳುತ್ತದೆ” ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

ಸಾಂಪ್ರದಾಯಿಕ ಉಡುಗೆ ತೊಟ್ಟು ವರ್ಷದ ಹಿಂದೆ ಹೊಸ ಮನೆಯ ಗೃಹ ಪ್ರವೇಶದ ವೇಳೆ ನಡೆದ ಪೂಜೆಯ ಫೋಟೋವನ್ನು ಹಂಚಿಕೊಂಡು ನಟಿ ಅಂದಿನ ಮಧುರ ಕ್ಷಣಗಳನ್ನು ಮತ್ತೊಮ್ಮೆ ಸ್ಮರಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಸಹಾ ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆ ನೀಡಿದ್ದಾರೆ ಹಾಗೂ ಅವರು ತಮ್ಮ ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು, ಇನ್ನಷ್ಟು ಸಂತೋಷವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

Leave a Comment