ಕನಸಿನ ರಾಣಿಯ ರಾಮಾಚಾರಿ ಲುಕ್ ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ

Written by Soma Shekar

Published on:

---Join Our Channel---

ಕೆಲವು ಸಿನಿಮಾಗಳು ಹಾಗೂ ಆ ಸಿನಿಮಾಗಳ ಪಾತ್ರಗಳು, ಪಾತ್ರದಲ್ಲಿ ನಟಿಸಿದ ನಟಿಯರ ಲುಕ್ ಜನರ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿದು ಬಿಡುತ್ತದೆ. ಅಂತಹ ಒಂದು ಸುಂದರವಾದ ಲುಕ್ ಕನಸಿನ ಮಾಲಾಶ್ರೀ ಅವರು ರಾಮಚಾರಿ ಸಿನಿಮಾದಲ್ಲಿ ಇತ್ತು. ಸೂಪರ್ ಡೂಪರ್ ಹಿಟ್ ಆಗಿದ್ದ ರಾಮಾಚಾರಿ ಸಿನಿಮಾದಲ್ಲಿನ ಮಾಲಾಶ್ರೀ ಅವರ ಆಕಾಶದಾಗೆ ಯಾರೋ ಮಾಯಗಾರನು ಹಾಡನ್ನಾಗಲೀ, ಆ ಸಿನಿಮಾದಲ್ಲಿ ಅವರ ಲುಕ್ ಅನ್ನೇ ಆಗಲಿ ಸಿನಿ ರಸಿಕರು ಇಂದಿಗೂ ಮರೆತಿಲ್ಲ. ಅಂತಹ ಸುಂದರವಾದ ಲುಕ್ ಅನ್ನು ಕಿರುತೆರೆಯ ನಟಿ ಅನುಪಮ ಗೌಡ ರೀಕ್ರಿಯೇಟ್ ಮಾಡಿದ್ದಾರೆ.

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಹೆಸರುಗಳಲ್ಲಿ ಅನುಪಮ ಗೌಡ ಅವರ ಹೆಸರು ಕೂಡಾ ಸೇರಿದೆ‌‌. ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ಅವರು, ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅನುಪಮಾ ಗೌಡ ಅವರು ಇತ್ತೀಚಿಗೆ ರಾಮಾಚಾರಿ ಸಿನಿಮಾದ ಮಾಲಾಶ್ರೀ ಅವರ ಲುಕ್ಕನ್ನು ಮತ್ತೊಮ್ಮೆ ಜನರ ಮುಂದೆ ತಂದಿದ್ದಾರೆ. ನೆಟ್ಟಿಗರು ಅದನ್ನು ನೋಡಿ ಖುಷಿ ಪಡುತ್ತಿದ್ದಾರೆ.

ಅನುಪಮಾ ಅವರಿಗೆ ಅಕ್ಕ ಸೀರಿಯಲ್ ಒಂದು ಗುರುತನ್ನು ತಂದು ಕೊಟ್ಟಿತ್ತು. ಆ ಧಾರಾವಾಹಿಯಲ್ಲಿ ಎರಡು ಶೇಡ್ ಗಳ ಪಾತ್ರದಲ್ಲಿ, ದ್ವಿಪಾತ್ರದಲ್ಲಿ ನಟಿಸಿ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ನಾಯಕಿಯಾಗಿ ಮೆಚ್ಚುಗೆ, ಖಳ ನಾಯಕಿಯಾಗಿ ತೆಗಳಿಕೆ ಎರಡೂ ವೀಕ್ಷಕರಿಂದ ಸಿಕ್ಕಾಗ ಸಹಜವಾಗಿಯೇ ಅವರ ಪಾತ್ರದ ಪ್ರಭಾವ ಏನೆಂಬುದರ ಪರಿಚಯವಾಗಿತ್ತು. ಅನುಪಮಾ ಗೌಡ ಅನಂತರ ಬಿಗ್ ಬಾಸ್ ಐದರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು.

ಬಿಗ್ ಬಾಸ್ ಗೆ ಎಂಟ್ರಿ ನೀಡಿದ ಅನುಪಮಾ ಅವರು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಅವರ ಜೀವನದ ಏಳು ಬೀಳುಗಳ ಪರಿಚಯ, ಅವರ ಸಾಧನೆ, ಯಶಸ್ಸಿನ ಹಿಂದಿನ ಪರಿಶ್ರಮದ ಬಗ್ಗೆ ತಿಳಿದ ಜನರು ಅವರನ್ನು ಇನ್ನಷ್ಟು ಮೆಚ್ಚಿದರು. ಸಿನಿಮಾ ಒಂದರಲ್ಲಿ ಸಹಾ ನಟಿಸಿದ ಅನುಪಮಾ ಅವರು ಅಲ್ಲಿ ಕೂಡಾ ಮೆಚ್ಚುಗೆಗಳನ್ನು ತನ್ನದಾಗಿಸಿಕೊಂಡರು. ಪ್ರಸ್ತುತ ಅನುಪಮಾ ಅವರು ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ರಾಜಾ ರಾಣಿ ಶೋ ನ ನಿರೂಪಣೆ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರು ಸುಂದರವಾದ ಫೋಟೋ ಶೂಟ್ ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾ ಇರುತ್ತಾರೆ. ಇತ್ತೀಚಿಗೆ ಅವರು ಕನಸಿನ ರಾಣಿ ಮಾಲಾಶ್ರೀ ಅವರ ರಾಮಾಚಾರಿ ಲುಕ್ ರೀಕ್ರಿಯೇಟ್ ಮಾಡಿ, ಫೋಟೋ ಹಂಚಿಕೊಂಡು ಮಾಲಾಶ್ರೀ, ಎಲ್ಲಾ ಹುಡುಗರ ಕನಸಿನ ರಾಣಿ, ಅವರ ಲುಕ್ ರೀಕ್ರಿಯೇಟ್ ಮಾಡೋದು ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.

Leave a Comment