ಕನಸಿನ ಮನೆಯ ಗೃಹಪ್ರವೇಶ ಮಾಡಿದ ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ನಟಿ:ಪೋಟೋ ಗಳು ಇಲ್ಲಿವೆ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ಸುಬ್ಬಮ್ಮ, ಸುಬ್ಬಿ, ಸುಬ್ಬಲಕ್ಷ್ಮಿ ಎಂದೆಲ್ಲಾ ಕರೆಯಲ್ಪಟ್ಟ ಹಳ್ಳಿ ಹೆಣ್ಣಿನ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದವರು ನಟಿ ದೀಪ ಭಾಸ್ಕರ್. ಈ ಧಾರಾವಾಹಿಯಲ್ಲಿ ಹಳ್ಳಿಯ ಹೆಣ್ಣಾಗಿ ನಗರದಲ್ಲಿ ಧೈರ್ಯದಿಂದ ಜೀವನ ನಡೆಸುವ, ಸವಾಲುಗಳನ್ನು ಎದುರಿಸುವ ಮಹಿಳೆಯಾಗಿ ದೀಪಾ ಅವರ ಪಾತ್ರ ವಿಶೇಷವಾಗಿ ಮಹಿಳೆಯರ ಅಚ್ಚು ಮೆಚ್ಚಿನ ಪಾತ್ರವಾಗಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ದೀಪಾ ಅವರನ್ನು ಜನ ಸುಬ್ಬಮ್ಮನಾಗಿಯೇ ಗುರುತಿಸುತ್ತಿದುದು ಅವರ ಪಾತ್ರಕ್ಕೆ ಸಿಕ್ಕ ಮನ್ನಣೆಯಾಗಿತ್ತು.

ಆದರೆ ಕೊರೊನಾ ಲಾಕ್ಡೌನ್ ನಂತರ ಕಾರಣಾಂತರಗಳಿಂದ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ಬಹಳ ಬೇಗ ಮುಗಿದು ಹೋಯಿತು. ಒಂದರ್ಥದಲ್ಲಿ ಸೀರಿಯಲ್ ನಿಂತು ಹೋಯಿತು. ಆದರೆ ಧಾರಾವಾಹಿ ಪ್ರಸಾರ ನಿಂತರೂ ಕೂಡಾ ಸುಬ್ಬಲಕ್ಷ್ಮಿ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸುಗಳನ್ನು ಗೆದ್ದಿದ್ದ ದೀಪಾ ಭಾಸ್ಕರ್ ಅವರನ್ನು ಜನ ಇನ್ನೂ ಮರೆತಿಲ್ಲ. ದೀಪಾ ಅವರ ಪಾತ್ರ ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದೆ.

ನಟಿ ದೀಪಾ ಭಾಸ್ಕರ ಅವರು ನಟನೆ ಮಾತ್ರವೇ ಅಲ್ಲದೆ ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯರಿಗೆ ಕಂಠದಾನ ಕಲಾವಿದೆಯಾಗಿ ಸಹಾ ಕೆಲಸವನ್ನು ಮಾಡಿದ್ದು. ಡಬ್ಬಿಂಗ್ ಆರ್ಟಿಸ್ಟ್ ಆಗಿ ಅವರು ಎರಡು ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಅದರಲ್ಲಿ ದೀಪಿಕಾ ಪಾತ್ರಕ್ಕೆ ದೀಪಾ ಅವರೇ ಡಬ್ಬಿಂಗ್ ಮಾಡಿದ್ದು ವಿಶೇಷ.

ಅದು ಮಾತ್ರವೇ ಅಲ್ಲದೇ ದೀಪ ಭಾಸ್ಕರ್ ಅವರು ಶಾಸ್ತ್ರೀಯ ನೃತ್ಯವನ್ನು ಕಲಿತಿರುವ ನೃತ್ಯಗಾರ್ತಿಯೂ ಹೌದು. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ನಂತರ ಯಾವುದೇ ಹೊಸ ಧಾರವಾಹಿಯಲ್ಲಿ ಕಾಣಿಸಿಕೊಳ್ಳದ ನಟಿ ದೀಪಾ ಭಾಸ್ಕರ್ ಅವರು ಮಜಾ ಟಾಕೀಸ್ ಹಾಸ್ಯ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರನ್ನು ರಂಜಿಸಿ ಮತ್ತೊಮ್ಮೆ ಜನ ಮೆಚ್ಚುಗೆ ಪಡೆದುಕೊಂಡರು.

ದೀಪಾ ಭಾಸ್ಕರದ ಅವರ ವೃತ್ತಿಯು ಬಾಲ ಕಲಾವಿದೆಯಾಗಿ ಪ್ರಾರಂಭವಾಯಿತು. ಆದರೆ ಹೆಚ್ಚು ಹೆಸರನ್ನು ಗಳಿಸಿದ್ದು ಮಾತ್ರ ಕಂಠದಾನ ಕಲಾವಿದೆಯಾಗಿ. ಸ್ಯಾಂಡಲ್ವುಡ್ ನಲ್ಲಿ ಮೋಹಕತಾರೆ ಎಂದು ಹೆಸರನ್ನು ಪಡೆದುಕೊಂಡಿರುವ ನಟಿ ರಮ್ಯಾ ಅವರ ಬಹಳಷ್ಟು ಸಿನಿಮಾಗಳಲ್ಲಿ ಅವರಿಗೆ ಧ್ವನಿಯಾಗಿರುವುದು ಇದೇ ದೀಪಾ ಭಾಸ್ಕರ್ ಅವರು ಎನ್ನುವುದು ವಿಶೇಷ.

ನಟಿ ರಮ್ಯಾ ಮಾತ್ರವೇ ಅಲ್ಲದೇ ಇನ್ನು ಕೆಲವು ನಟಿಯರಿಗೆ ಕಂಠದಾನ ಕಲಾವಿದೆಯಾಗಿ ಕೆಲಸವನ್ನು ಮಾಡಿರುವ ಈ ನಟಿಯು ಇತ್ತೀಚೆಗಷ್ಟೇ ತಮ್ಮ ಹೊಸ ಮನೆಯ ಗೃಹ ಪ್ರವೇಶವನ್ನು ಮಾಡಿದ್ದಾರೆ. ಗೃಹ ಪ್ರವೇಶ ಶುಭ ಸಂದರ್ಭದ ಸುಂದರವಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರೊಡನೆ ಈ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಬಹಳ ಸರಳವಾಗಿ ಕುಟುಂಬದ ಸದಸ್ಯರು ಮತ್ತು ಒಂದಷ್ಟು ಜನ ಆಪ್ತರ ಸಮ್ಮುಖದಲ್ಲಿ ಗೃಹಪ್ರವೇಶ ವನ್ನು ಮಾಡಿ ಹೊಸ ಮನೆಯನ್ನು ಪ್ರವೇಶಿಸಿದ್ದಾರೆ ದೀಪಾ ಭಾಸ್ಕರ್ ಅವರು. ನಟಿ ಹಂಚಿಕೊಂಡ ಫೋಟೋಗಳಿಗೆ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುವ ಮೂಲಕ ಶುಭವನ್ನು ಹಾರೈಸುತ್ತಿದ್ದಾರೆ. ಆದಷ್ಟು ಬೇಗ ದೀಪಾ ಅವರು ಹೊಸ ಸೀರಿಯಲ್ ಗಳಲ್ಲಿ ಮತ್ತೆ ಕಾಣಿಸಿಕೊಳ್ಳಲೆಂದು ನಾವು ಹಾರೈಸೋಣ.

Leave a Comment