ಕನಸಿನಲ್ಲಿ ಮೋಡಗಳು ಕಂಡಿತೇ? ಹಾಗಾದರೆ ನಿಮ್ಮ ಅದೃಷ್ಟ ಬದಲಾಗುವ ಕಾಲ ಹತ್ತಿರವಾಗುತ್ತಿದೆ!!

Astrology tips Entertainment Featured-Articles News

ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಕನಸುಗಳು ನಮಗೆ ಭವಿಷ್ಯದ ಘಟನೆಗಳ ಬಗೆಗೆ ಕೆಲವು ಸೂಚನೆಗಳನ್ನು ನೀಡುತ್ತವೆ ಎನ್ನಲಾಗಿದೆ. ಈ ಕನಸುಗಳು ನಮ್ಮ ಮಾನಸಿಕ ಅಥವಾ ದೈಹಿಕ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ ಎಂದು ಸಹಾ ಮನೋವಿಜ್ಞಾನಿಗಳು ನಂಬುತ್ತಾರೆ. ಕನಸಿನಲ್ಲಿ ನಾವು ವೈವಿದ್ಯಮಯ ಅನುಭೂತಿಗಳನ್ನು ಪಡೆಯುತ್ತೇವೆ. ಅನೇಕ ವಸ್ತುಗಳನ್ನು ನೋಡುತ್ತೇವೆ. ಆದರೆ ಕನಸಿನಲ್ಲಿ ಮೋಡಗಳನ್ನು ನೋಡುವುದು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಕನಸಿನಲ್ಲಿ ಮೋಡಗಳನ್ನು ಕಂಡರೆ ಅದರ ಅರ್ಥ ಏನೆಂದು ತಿಳಿಯೋಣ ಬನ್ನಿ.

ಕನಸಿನಲ್ಲಿ ಮೋಡಗಳನ್ನು ನೋಡುವುದನ್ನು ಸಾಮಾನ್ಯವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಭವಿಷ್ಯದಲ್ಲಿ ನಮ್ಮ ಜೀವನಕ್ಕೆ ಪ್ರವೇಶ ನೀಡಲಿರುವ ಸಂತೋಷವನ್ನು ಸೂಚಿಸುತ್ತದೆ. ಚಲಿಸುವ ಮೋಡಗಳನ್ನು ನೋಡುವುದು ಕೂಡಾ ಮಂಗಳಕರ ಎನ್ನಲಾಗಿದ್ದು, ಇದು ಸಂತೋಷದ ಸುದ್ದಿಯ ಸಂಕೇತವಾಗಿದೆ. ಆದರೆ ಇದೇ ವೇಳೆ ನಿಮ್ಮ ಮೇಲೆ ಯಾರೋ ಒಬ್ಬರ ಕೋಪವು ಹೊರಬರಲಿದೆ ಎನ್ನುವ ಅರ್ಥವನ್ನು ಸಹಾ ಅದು ನೀಡುತ್ತದೆ ಎನ್ನಲಾಗಿದೆ.

ಕನಸಿನಲ್ಲಿ ಮೋಡಗಳು ಸಿಡಿಯುವುದನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಭವಿಷ್ಯದಲ್ಲಿ ಎದುರಾಗಲಿರುವ ತೊಂದರೆಯ ಸಂಕೇತವಾಗಿದೆ.
ದಟ್ಟವಾದ ಕಪ್ಪು ಮೋಡಗಳನ್ನು ಕನಸಿನಲ್ಲಿ ಕಂಡರೆ ನೀವು ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರ್ಥ. ಸ್ಪಷ್ಟ ಮತ್ತು ಬಿಳಿ ಮೋಡಗಳನ್ನು ನೋಡಿದರೆ ನೀವು ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದ್ದೀರಿ ಎಂದರ್ಥ.

ಕನಸಿನಲ್ಲಿ ಮೋಡಗಳನ್ನು ಸ್ಪರ್ಶಿಸುವುದು ಎಂದರೆ ನೀವು ಜೀವನದಲ್ಲಿ ಹೊಸ ಎತ್ತರವನ್ನು ಮುಟ್ಟಲಿದ್ದೀರಿ ಎಂದರ್ಥ. ಮೋಡಗಳು ಕಂಡು ಅನಂತರ ಮಳೆ ಬೀಳುವುದನ್ನು ನೋಡುವುದು ಎಂದರೆ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಸಂತೋಷ ಬರುತ್ತದೆ ಎನ್ನುವ ಅರ್ಥ ನೀಡುತ್ತದೆ. ಮೋಡಗಳಿಂದ ಹೊರ ಬರುತ್ತಿರುವ ಸೂರ್ಯನ ಕಿರಣಗಳನ್ನು ನೋಡುವುದು ಎಂದರೆ ನಿಮ್ಮ ಅಡೆತಡೆಗಳು ಕೊನೆಗೊಳ್ಳುತ್ತವೆ ಎಂದರ್ಥ. ಬಿಳಿಯ ಮೋಡಗಳನ್ನು ನೋಡುವುದು ಮಂಗಳಕರ ಎನ್ನಲಾಗಿದ್ದು, ನಂಬಿಕೆಯ ಪ್ರಕಾರ, ಇದು ಅದೃಷ್ಟದ ಸಂಕೇತ ಎನ್ನಲಾಗಿದೆ‌.

Leave a Reply

Your email address will not be published.