ಕನಸಿನಲ್ಲಿ ಈ 5 ಪ್ರಾಣಿಗಳನ್ನು ಕಂಡರೆ ಬದಲಾಗಲಿದೆ ನಿಮ್ಮ ಭಾಗ್ಯ: ಇವು ನೀಡುವ ಶುಭಾಶುಭ ಸಂಕೇತಗಳೇನು??

0 21

ಕನಸುಗಳು ಅಥವಾ ಸ್ವಪ್ನಗಳು ಎನ್ನುವುದು ನಮ್ಮ ಜೀವನದಲ್ಲಿ ಒಂದು ಭಾಗವಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ ಅನೇಕ ಸಂದರ್ಭಗಳಲ್ಲಿ ನಮ್ಮ ಕನಸುಗಳು ನಮಗೆ ಭವಿಷ್ಯದ ಘಟನೆಗಳ ಕುರಿತಾಗಿ ಸಂಕೇತಗಳನ್ನು ನೀಡುತ್ತವೆ ಎನ್ನಲಾಗಿದೆ. ಇದು ಅವರವರ ನಂಬಿಕೆಗೆ ಸಂಬಂಧಿಸಿದ ವಿಚಾರವೂ ಹೌದು. ನಮಗೆ ಕನಸಿನಲ್ಲಿ ಕಾಣುವ ವಿವಿಧ ರೀತಿಯ ವಸ್ತುಗಳು ನಮಗೆ ವಿವಿಧ ರೀತಿಯ ಸಂಕೇತಗಳನ್ನು ನೀಡುತ್ತವೆ. ಹೀಗೆ ಕನಸಿನಲ್ಲಿ ಕಾಣುವ ಕೆಲವು ವಸ್ತುಗಳು ನಮಗೆ ಶುಭಫಲವನ್ನು ನೀಡಿದರೆ, ಇನ್ನೂ ಕೆಲವು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅವು ಅಶುಭದ ಸಂಕೇತಗಳೆಂದು ಹೇಳಲಾಗಿದೆ.

ಕನಸಿನಲ್ಲಿ ವಸ್ತುಗಳು ಮಾತ್ರವೇ ಅಲ್ಲದೆ ಒಂದು ವೇಳೆ ಪ್ರಾಣಿಗಳು ಕಾಣಿಸಿಕೊಂಡರೂ ಕೂಡ ಶುಭಾಶುಭ ಸಂಕೇತಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ನಾವಿಂದು ಸ್ವಪ್ನ ಶಾಸ್ತ್ರದ ಪ್ರಕಾರ ನಮ್ಮ ಕನಸಿನಲ್ಲಿ ಈ 5 ಪ್ರಾಣಿಗಳು ಕಾಣಿಸಿಕೊಂಡರೆ ಅವುಗಳು ನಮಗೆ ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ, ಅವು ಮಂಗಳಕರವೋ ಅಥವಾ ಅಶುಭದಾಯಕವೋ ಎನ್ನುವ ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಕರಡಿ : ಕನಸಿನಲ್ಲಿ ಕರಡಿಯು ಕಾಣಿಸಿಕೊಂಡರೆ ಅದನ್ನು ಶುಭ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಚಟುವಟಿಕೆಯಿಂದಿರುವ ಕರಡಿಯ ಬದಲಾಗಿ ನಿದ್ರೆ ಮಾಡುತ್ತಿರುವ ಕರಡಿ ಏನಾದರೂ ಕಾಣಿಸಿಕೊಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು, ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಶ್ರಮವನ್ನು ವಹಿಸಬೇಕಾಗುತ್ತದೆ ಎಂಬ ಸಂಕೇತವನ್ನು ನೀಡುತ್ತದೆ.

ಬೆಕ್ಕು: ಕನಸಿನಲ್ಲಿ ಬೆಕ್ಕನ್ನು ನೋಡುವುದು ಶುಭ ಸಂಕೇತವಾಗಿ ಭಾವಿಸಲಾಗಿದೆ. ಆದರೆ ಒಮ್ಮೊಮ್ಮೆ ಅದು ಕಾಣುವುದು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟದ ಕುರಿತು ಎಚ್ಚರಿಕೆಯನ್ನು ಕೂಡಾ ನೀಡುವುದಕ್ಕೆ ಆಗಿರುತ್ತದೆ ಎಂದು ಹೇಳುತ್ತಾರೆ. ಕನಸಿನಲ್ಲಿ ನಿಮಗೆ ಕಪ್ಪು ಬೆಕ್ಕು ಕಾಣಿಸಿಕೊಂಡರೆ ನಿಮ್ಮ ಪ್ರತಿಭೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎನ್ನುವ ಸಂಕೇತವನ್ನು ನೀಡುತ್ತದೆ. ಒಂದು ವೇಳೆ ಭಯಾನಕ ಬೆಕ್ಕು ಕಾಣಿಸಿಕೊಂಡರೆ ನೀವು ಹೆಚ್ಚು ಜಾಗರೂಕತೆಯಿಂದ ಇರಬೇಕು ಎನ್ನುವ ಸಂಕೇತ ನೀಡುತ್ತದೆ.

ಆನೆ : ಕನಸಿನಲ್ಲಿ ಒಂದು ವೇಳೆ ನಿಮಗೆ ಆನೆ ಅಥವಾ ಗಜರಾಜನು ಕಾಣಿಸಿಕೊಂಡರೆ ಅದು ಶುಭ ಸಂಕೇತವೆಂದು ಹೇಳಲಾಗುತ್ತದೆ. ನೀವು ನಿಜ ಜೀವನದಲ್ಲಿ ಯಾವುದೇ ಕೆಲಸವನ್ನು ಮಾಡುವುದಕ್ಕೂ ಸಿದ್ಧರಾಗಿರಬೇಕು ಎನ್ನುವ ಸೂಚನೆಯನ್ನು ನೀಡುತ್ತದೆ. ಕನಸಿನಲ್ಲಿ ನೀವು ಆನೆಯ ಮೇಲೆ ಕುಳಿತು ಸವಾರಿ ಮಾಡುವಂತೆ ಕಂಡರೆ ವಾಸ್ತವ ಬದುಕಿನಲ್ಲಿ ನೀವು ಅನ್ಯರಿಗೆ ಅತ್ಯುತ್ತಮ ಮಾರ್ಗದರ್ಶಕರಾಗುವಿರಿ ಎನ್ನುವ ಅರ್ಥವನ್ನು ನೀಡುತ್ತದೆ.

ನಾಯಿ: ಕನಸಿನಲ್ಲಿ ಒಂದು ವೇಳೆ ನಾಯಿಯನ್ನು ಕಂಡರೆ ಅದು ಕೂಡ ಶುಭ ಸೂಚಕವೇ ಆಗಿರುತ್ತದೆ. ನಾಯಿ ಬೊಗಳುವ ಸದ್ದು ಕೇಳಿದರೆ ಅದು ಶುಭಕರ ಎನಿಸಿದರೆ, ಕನಸಿನಲ್ಲಿ ನಾಯಿ ಕಚ್ಚಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಕಷ್ಟದ ಸೂಚನೆಯನ್ನು ನೀಡುತ್ತದೆ. ನಾಯಿ ಓಡುತ್ತಿರುವುದು ಕಂಡರೆ ನಿಮ್ಮ ಜೀವನದಲ್ಲಿ ಸುಧಾರಣೆಯನ್ನು ಮಾಡುವುದು ಅವಶ್ಯಕತೆ ಇದೆ ಎನ್ನುವ ಸಂಕೇತವಾಗಿರುತ್ತದೆ.

ಕಪ್ಪೆ : ಕನಸಿನಲ್ಲಿ ಕಪ್ಪೆಯನ್ನು ಏನಾದರೂ ನೀವು ನಿಮ್ಮ ಕೈಯಲ್ಲಿ ಹಿಡಿದಿಟ್ಟುಕೊಂಡಿರುವ ಹಾಗೆ ಕಂಡರೆ ಅದು ಶುಭ ಸಂಕೇತವಾಗಿದೆ. ಕನಸಿನಲ್ಲಿ ಕಪ್ಪೆಯು ಸದ್ದು ಕೇಳಿದರೆ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗಲಿದೆ ಎನ್ನುವ ಅರ್ಥವನ್ನು ನೀಡುತ್ತದೆ. ಒಂದು ವೇಳೆ ಕಪ್ಪೆಯು ನೀರಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು ಎನ್ನುವ ಅರ್ಥವನ್ನು ನಿಮಗೆ ನೀಡುತ್ತದೆ.

Leave A Reply

Your email address will not be published.