ಕನಸಿನಲ್ಲಿ ಈ ವಸ್ತುಗಳು ಕಂಡರೆ ನಿಮ್ಮ ಮೇಲೆ ಲಕ್ಷ್ಮೀ ಕಟಾಕ್ಷ ವಾಗಲಿದೆ ಎಂದರ್ಥ: ಯಾವುದು ಆ ವಸ್ತುಗಳು??

0 10

ನಮ್ಮ ಕನಸಿಗಳಿಗೂ ಸಹಾ ಅರ್ಥವಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಮನುಷ್ಯನು ತನ್ನ ಸ್ವಪ್ನದಲ್ಲಿ ಕಾಣುವ ಕೆಲವೊಂದು ವಿಷಯಗಳು ಶುಭಾಶುಭ ಫಲಗಳ ಸಂಕೇತಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.‌ ನಾವಿಂದು ಕನಸಿನಲ್ಲಿ ಯಾವ ವಸ್ತುಗಳು ಕಾಣಿಸಿಕೊಂಡರೆ ದೇವಿ ಶ್ರೀಮಹಾಲಕ್ಷ್ಕಿಯ ಕೃಪೆ ದೊರೆಯಲಿದೆ ಎನ್ನುವ ಸಂಕೇತವನ್ನು ನೀಡುತ್ತದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳೋಣ. ನಿಮ್ಮ‌ ಕನಸಿನಲ್ಲಿ ಈ ವಸ್ತುಗಳು ಗೋಚರಿಸಿದರೆ ನಿಮಗೆ ದೇವಿ ಮಹಾಲಕ್ಷ್ಮಿಯ ಕೃಪೆ ಪ್ರಾಪ್ತವಾಗಲಿದೆ ಎನ್ನುವ ಅರ್ಥ ವನ್ನು ನೀಡುತ್ತದೆ ಎನ್ನಲಾಗಿದೆ.‌

ಘಂಟೆಗಳು: ರಾತ್ರಿಯ ಕನಸಿನಲ್ಲಿ ಘಂಟೆಗಳ ಶಬ್ದವನ್ನು ಕೇಳುವುದು ಶುಭ ಫಲವನ್ನು ನೀಡುವುದು ಎನ್ನಲಾಗಿದೆ. ಇವು ನಿಮಗೆ ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುವುದಕ್ಕೆ ಮುನ್ನುಡಿಯಾಗಿದೆ. ಅಂತಹ ಕನಸು ನಿಮಗೆ ಒಳ್ಳೆಯ ದಿನಗಳು ಬರಲಿವೆ ಎಂದು ಸೂಚಿಸುತ್ತದೆ ಎಂದು ಹೇಳಲಾಗಿದೆ.

ಕಲಶ: ಕನಸಿನಲ್ಲಿ ನೀರು ತುಂಬಿದ ಮಡಕೆ ಅಥವಾ ಪಾತ್ರೆಯನ್ನು ನೋಡುವುದು ಸಂಪತ್ತಿನ ಆಗಮನದ ಸಂಕೇತವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಮಣ್ಣಿನ ಮಡಕೆ ಅಥವಾ ಕಲಶವನ್ನು ನೋಡಿದರೆ, ಈ ಕನಸನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ಕನಸು ಭೂ ಲಾಭ ಮತ್ತು ಅಪಾರ ಸಂಪತ್ತನ್ನು ಪಡೆಯುವ ಸಂಕೇತವಾಗಿದೆ.

ಕಮಲ: ನಿಮ್ಮ ಕನಸಿನಲ್ಲಿ ನೀವು ಕಮಲದ ಹೂವನ್ನು ಕಂಡರೆ ಇದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಸಂಪತ್ತನ್ನು ಪಡೆಯುವ ಸಂಕೇತವಾಗಿದೆ. ಶೀಘ್ರದಲ್ಲೇ ಬಹಳಷ್ಟು ಹಣವನ್ನು ಪಡೆಯುವ ಸೂಚನೆಯನ್ನು ಇದು ನೀಡುತ್ತದೆ. ಏಕೆಂದರೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಸನವು ಕಮಲದ ಹೂವಾಗಿದೆ.

ಲಕ್ಷ್ಮಿ ದರ್ಶನ: ನಿಮ್ಮ ಕನಸಿನಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಕಂಡರೆ, ಶೀಘ್ರದಲ್ಲೇ ನಿಮ್ಮ ಜೀವನದಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ ಮತ್ತು ನಿಮ್ಮ ಹಣದ ಕೊರತೆಯ ಸಮಸ್ಯೆ ದೂರಾಗುವುದು ಎಂದರ್ಥ. ಶೀಘ್ರದಲ್ಲೇ ನೀವು ನಿಮ್ಮ ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ ಎನ್ನುವ ಸೂಚನೆಯನ್ನು ನೀಡುತ್ತದೆ.

ಆನೆ: ಕನಸಿನಲ್ಲಿ ಆನೆಯನ್ನು ನೋಡುವುದು ಎಂದರೆ ಮನೆಯಲ್ಲಿ ಸಂಪತ್ತು-ಸಮೃದ್ಧಿ ಬರುತ್ತದೆ ಎನ್ನುವ ಸಂಕೇತವನ್ನು ನೀಡುತ್ತದೆ ಅಂದರೆ ಸಂಪತ್ತಿನ ಆಗಮನ ಎಂದರ್ಥ. ಒಂದು ವೇಳೆ ಕನಸಿನಲ್ಲಿ ನೀವು ಬಿಳಿ ಆನೆಯನ್ನು ಕಂಡರೆ ರಾಜಯೋಗ, ಅಪಾರ ಸಂಪತ್ತು, ಒಳ್ಳೆಯ ಉದ್ಯೋಗ, ಸಂಪತ್ತು, ಸಮೃದ್ಧಿ ಎಂದರ್ಥ.

ಹಕ್ಕಿಯ ಗೂಡು: ಮನೆಯ ಮೇಲ್ಛಾವಣಿ ಅಥವಾ ಗೋಡೆಯ ಮೂಲೆಯಲ್ಲಿರುವ ಪಕ್ಷಿಯ ಗೂಡು ಕನಸು ಕಂಡರೆ, ಅದು ಮನೆಗೆ ಲಕ್ಷ್ಮಿ ದೇವಿಯ ಆಗಮನದ ಸೂಚನೆ ಎಂದು ಪರಿಗಣಿಸಲಾಗುತ್ತದೆ. ನಂಬಿಕೆಯ ಪ್ರಕಾರ, ಈ ಕನಸು ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುವ ಸಂಕೇತವಾಗಿರುತ್ತದೆ ಎನ್ನಲಾಗಿದೆ.

ಪೊರಕೆ: ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಆದ್ದರಿಂದಲೇ ಬೆಳಿಗ್ಗೆ ಒಬ್ಬ ವ್ಯಕ್ತಿಯು ಕನಸಿನಲ್ಲಿ ಮನೆಯ ಸುತ್ತಲೂ ಗುಡಿಸುತ್ತಿರುವುದನ್ನು ನೀವು ನೋಡಿದರೆ, ನಿಮ್ಮ ಮನೆಯು ಶೀಘ್ರದಲ್ಲೇ ಲಕ್ಷ್ಮಿಯಿಂದ ಆಶೀರ್ವದಿಸಲ್ಪಡುತ್ತದೆ ಎಂದರ್ಥ.

ಹಾವು ಅಥವಾ ಗೂಬೆ: ನಿಮ್ಮ ಕನಸಿನಲ್ಲಿ ಹಾವು ಅಥವಾ ಗೂಬೆಯನ್ನು ಕಂಡರೆ, ಅದನ್ನು ಅತ್ಯಂತ ಮಂಗಳಕರ ಕನಸು ಎಂದು ಪರಿಗಣಿಸಲಾಗುತ್ತದೆ. ಶೀಘ್ರದಲ್ಲೇ ಲಕ್ಷ್ಮಿ ದೇವಿಯು ನಿಮ್ಮ ಮನೆಯ ಮೇಲೆ ತನ್ನ ಕೃಪಾ ಕಟಾಕ್ಷವನ್ನು ತೋರುವಳೆಂದು ಹಾಗೂ ನಿಮ್ಮ ಮನೆಗೆ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಬರುತ್ತದೆ.

ಹಲ್ಲಿ: ನಿಮ್ಮ ಕನಸಿನಲ್ಲಿ ತುಳಸಿ ಗಿಡದ ಸುತ್ತಲೂ ಹಲ್ಲಿ ಓಡುತ್ತಿರುವುದನ್ನು ನೀವು ನೋಡಿದರೆ, ಅದು ಲಕ್ಷ್ಮಿ ದೇವಿಯ ಆಶೀರ್ವಾದ, ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಕನಸಿನಲ್ಲಿ ಹಲ್ಲಿಯನ್ನು ನೋಡುವುದು ಎಂದರೆ ಕೆಲಸದಲ್ಲಿ ಯಶಸ್ಸು, ಹಠಾತ್ ಆದಾಯ, ಸಾಲ ಪರಿಹಾರ.

ದೇವಸ್ಥಾನ / ಪಲ್ಲಕಿ / ಶಂಖ: ನಿಮ್ಮ ಕನಸಿನಲ್ಲಿ ದೇವಸ್ಥಾನ, ಪಲ್ಲಕ್ಕಿ, ಶಂಖ ಮಾತ್ರವೇ ಅಲ್ಲದೇ ಗುರು, ಶಿವಲಿಂಗ, ದೀಪ ಅಥವಾ ಬಾಗಿಲು ಕಂಡರೆ ಈ ಕನಸು ಸಂಪತ್ತು ಮತ್ತು ಅದೃಷ್ಟದ ಸಂಕೇತವಾಗಿದೆ ಎನ್ನಲಾಗಿದೆ.

Leave A Reply

Your email address will not be published.