ಕಥೆ, ನಟನೆ ಇದು ಯಾವುದು ಬೇಡ್ವಾ? 1000 ಕೋಟಿ ಕಲೆಕ್ಷನ್ ಸಾಕಾ? ನಟ ಮನೋಜ್ ಭಾಜಪೇಯಿ ಬೇಸರ

Entertainment Featured-Articles Movies News

ಇತ್ತೀಚಿಗೆ ದಕ್ಷಿಣದ ಸಿನಿಮಾಗಳು ಭರ್ಜರಿ ಯಶಸ್ಸನ್ನು ಪಡೆದುಕೊಂಡು, ಕಲೆಕ್ಷನ್ ವಿಚಾರದಲ್ಲಿ ಸಹಾ ನೂತನ ದಾಖಲೆಗಳನ್ನು ಬರೆಯುತ್ತಿವೆ‌.‌ ಈ ವೇಳೆ ಯಾವ ಸಿನಿಮಾ ಎಷ್ಟು ದಿನಕ್ಕೆ ಎಷ್ಟು ಗಳಿಸಿದೆ? ಎನ್ನುವ ವಿಚಾರಗಳು ಸಹಜವಾಗಿಯೇ ಮಾದ್ಯಮಗಳ ಪ್ರಮುಖ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಅದರಲ್ಲೂ ತ್ರಿಬಲ್ ಆರ್, ಕೆಜಿಎಫ್-2 ಸಿನಿಮಾಗಳ ದೊಡ್ಡ ಸಕ್ಸಸ್ ನ ನಂತರವಂತೂ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾಗಳು ಎನ್ನುವ ಸುದ್ದಿಯು ಸಹಾ ಗಮನ ಸೆಳೆಯುತ್ತಿದೆ. ಹೀಗೆ ಸಾವಿರ ಕೋಟಿ ಗಳಿಸಿದ ಸಿನಿಮಾಗಳ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಲಾಗುತ್ತಿದೆ.

ಈಗ ಇದೇ ವಿಚಾರವಾಗಿ ಬಾಲಿವುಡ್ ನಟ ಮನೋಜ್ ಭಾಜಪೇಯಿ ಅವರು ಮಾತನಾಡಿದ್ದಾರೆ. ನಟ ಮನೋಜ್ ಭಾಜಪೇಯಿ ಅವರು ಕೆಲವೇ ದಿನಗಳ ಹಿಂದೆಯಷ್ಟೇ ದಕ್ಷಿಣ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಮಂದಿ ಬೆದರಿದ್ದಾರೆ, ದಕ್ಷಿಣದಲ್ಲಿ ಸಿನಿಮಾ ಗಳ ಪ್ರತಿಯೊಂದು ಸನ್ನಿವೇಶವನ್ನು ಸಹಾ ಬಹಳ ಒಲವಿಟ್ಟು ಮಾಡುತ್ತಾರೆ ಎಂದೆಲ್ಲಾ ಹಾಡಿ ಹೊಗಳಿದ್ದರು. ಆದರೆ ಈಗ ಅದೇ ನಟ 1000 ಕೋಟಿ ಸಿನಿಮಾಗಳ ಸುದ್ದಿಯ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ನಟ ಮನೋಜ್ ಭಾಜಪೇಯಿ ಅವರು, ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಸಿದೆ ಎಂದು ಜನ ಮಾತಾಡ್ತಾರೆ ವಿನಃ ಯಾವ ವಿಚಾರದ ಬಗ್ಗೆ ಮಾತನಾಡಬೇಕೋ, ಅದನ್ನು ಮಾತ್ರ ಯಾರೂ ಮಾತನಾಡುತ್ತಿಲ್ಲ ಎಂದು ತಮ್ಮ ಬೇಸರ ಹೊರ ಹಾಕುತ್ತಾ, ಸಿನಿಮಾದಲ್ಲಿ ನಟನೆ ಹೇಗಿದೆ ? ಬೇರೆ ಬೇರೆ ವಿಭಾಗಗಳು ಯಾವ ರೀತಿಯ ಕೊಡುಗೆ ನೀಡಿವೆ ? ಎನ್ನುವುದನ್ನು ಯಾರೂ ಚರ್ಚೆ ಮಾಡುತ್ತಿಲ್ಲ. ಎಲ್ಲರೂ 300, 400 ಹಾಗೂ 1000 ಕೋಟಿ ಕಲೆಕ್ಷನ್ ಆಯ್ತು ಎಂದೇ ಮಾತನಾಡುತ್ತಿದ್ದಾರೆ.

ಆದರೆ ಚರ್ಚೆ ಅಷ್ಟಕ್ಕೇ ಮುಗಿಯುವುದಿಲ್ಲ ಎಂದಿರುವ ಅವರು, ನೀವು ಯಾಕೆ ಅಂತಹ ಚಿತ್ರ ಮಾಡುತ್ತಿಲ್ಲ ? ನಿಮ್ಮ ಸಿನಿಮಾ ಯಾಕೆ ಓಡುತ್ತಿಲ್ಲ? ಎಂದು ವಿಮರ್ಶಕರು ಕೇಳುತ್ತಾರೆ. ಮೊದಲು ನನಗೆ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಕಷ್ಟ ಆಗುತ್ತಿತ್ತು. ಈಗ ಸಾವಿರ ಕೋಟಿ ಕಲೆಕ್ಷನ್ ನಿಂದ ಅದು ಇನ್ನೂ ಸ್ವಲ್ಪ ಕಷ್ಟವಾಗಿದೆ. ನನ್ನಂತಹ ನಟರಿಗೆ ಓಟಿಟಿ ವರದಾನವಾಗಿದೆ. ಹೊಸ ಪ್ರತಿಭೆ, ಕಂಟೆಂಟ್ ಗೆ ಓಟಿಟಿ ವೇದಿಕೆಯಾಗಿದೆ. ಓಟಿಟಿ ಒಳ್ಳೆ ಕೆಲಸ ಮಾಡುತ್ತಿದೆ ಎಂದಿದ್ದಾರೆ ಮನೋಜ್.

Leave a Reply

Your email address will not be published. Required fields are marked *