ಕತ್ರೀನಾ ಶೇರ್ ಮಾಡಿದ ಹಾಟ್ ಫೋಟೋ ನೋಡಿ, ನೆಟ್ಟಿಗರು ಹೀಗಾ ಅನ್ನೋದು?? ಮೆಚ್ಚುಗೆಯೋ, ವ್ಯಂಗ್ಯವೋ??

Written by Soma Shekar

Published on:

---Join Our Channel---

ಬಾಲಿವುಡ್ ಸ್ಟಾರ್ ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿಯ ಮದುವೆಯ ನಂತರ ಈ ಜೋಡಿ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿ ಇರುತ್ತಾರೆ. ಈ ಜೋಡಿಗೆ ಇರುವ ದೊಡ್ಡ ಅಭಿಮಾನ ಬಳಗವು ಇವರ ಬಗ್ಗೆ ತಿಳಿದುಕೊಳ್ಳಲು ಸದಾ ಕಾತುರರಾಗಿರುತ್ತಾರೆ.‌ ಅಭಿಮಾನಿಗಳ ಇಂತಹ ನಿರೀಕ್ಷೆಗಳನ್ನು ಅರಿತು, ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಸಲುವಾಗಿ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹೊಸ ಅಪ್ಟೇಟ್ ಗಳನ್ನು ನೀಡುತ್ತಾ ಇರುತ್ತಾರೆ ಹಾಗೂ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಈಗ ಅಂತಹುದೇ ಒಂದು ಫೋಟೋ ವನ್ನು ಕತ್ರೀನಾ ಶೇರ್ ಮಾಡಿಕೊಂಡಿದ್ದು ಈ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅದರ ಜೊತೆಗೆ ಟ್ರೋಲಿಗರು ಕೂಡಾ ಈ ಫೋಟೋವನ್ನು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.
ಕತ್ರೀನಾ ಶೇರ್ ಮಾಡಿರುವ ಫೋಟೋ ದಲ್ಲಿ ಕತ್ರೀನಾ ಹಾಗೂ ವಿಕ್ಕಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಇರುವುದು ಕಾಣುತ್ತದೆ. ಇಬ್ಬರೂ ಸಹಾ ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವುದನ್ನು ನಾವು ನೋಡಬಹುದಾಗಿದೆ.

ಕತ್ರೀನಾ ಕೈಫ್ ಅವರು ಫೋಟೋ ಶೇರ್ ಮಾಡಿಕೊಂಡು ಅದರ ಜೊತೆಯಲ್ಲಿ ಶೀರ್ಷಿಕೆಯಲ್ಲಿ ಬರೆದುಕೊಂಡಿರುವ ಸಾಲು ಸಹಾ ಅಭಿಮಾನಿಗಳು ಹಾಗೂ ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಬಿಳಿಯ ಬಣ್ಣದ ಸ್ವಿಮ್ ಸೂಟ್ ಧರಿಸಿರುವ ಕತ್ರೀನಾ ಪತಿ ವಿಕ್ಕಿಯನ್ನು ಪ್ರೀತಿಯಿಂದ ಅಪ್ಪಿಕೊಂಡು, ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಸುಂದರ ಫೋಟೋ ಶೇರ್ ಮಾಡಿಕೊಂಡ ಕತ್ರೀನಾ, ಕ್ಯಾಪ್ಷನ್ ನಲ್ಲಿ, “ನಾನು ಮತ್ತು ನನ್ನವನು” ಎಂದು ಬರೆದುಕೊಂಡಿದ್ದಾರೆ.

ಕತ್ರೀನಾ ಶೇರ್ ಮಾಡಿದ ಫೋಟೋವನ್ನು ನೋಡಿದ ಅಭಿಮಾನಿಗಳಂತೂ ಲೈಕ್ ಮತ್ತು ಕಾಮೆಂಟ್ ಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ನೆಟ್ಟಿಗರು ಫೋಟೋ ನೋಡಿ, ಕ್ಯೂಟ್, ಅಡಾರಬೆಲ್, ನೈಸ್ ಕಪಲ್ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಫೋಟೋಗೆ ಬಾಲಿವುಡ್ ನ ಸೆಲೆಬ್ರಿಟಿಗಳು ಸಹಾ ಲೈಕ್ ನೀಡಿರುವುದು ವಿಶೇಷ. ಇನ್ನು ಕೆಲವರು ಈ ಫೋಟೋ ಗೆ ಕಾಮೆಂಟ್ ಮಾಡುತ್ತಾ, “ನಮ್ಮ ವಿಕ್ಕಿಯ ಬಟ್ಟೆಗಳು ಏನಾಯ್ತು” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ‌.

https://www.instagram.com/p/CdPgmVttP0s/?igshid=YmMyMTA2M2Y=

ಮತ್ತೊಬ್ಬರು, “ಈ ಫೋಟೋ ನೋಡಿದ ಮೇಲೆ ಸಲ್ಮಾನ್ ಖಾನ್ ಚೆನ್ನಾಗಿ ಉರ್ಕೊಂಡಿರ್ತಾರೆ” ಎಂದು ಸಹಾ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡುತ್ತಾ, “ಈ ಜೋಡಿಯು ನೀರಿನಲ್ಲಿ ಬೆಂಕಿ ಹೊತ್ತಿಸಿದೆ” ಎಂದು ಮೆಚ್ಚುಗೆಯನ್ನು ನೀಡಿದ್ದಾರೆ. ಒಟ್ಟಾರೆ ಕತ್ರೀನಾ ಶೇರ್ ಮಾಡಿದ ಫೋಟೋಗೆ ಬಂದಿರುವ ಲೈಕ್, ಕಾಮೆಂಟ್ ಈ ಜೋಡಿಯ ಜನಪ್ರಿಯತೆ ಹೇಗಿದೆ ಎನ್ನುವುದನ್ನು ತೋರಿಸುವ ಹಾಗೆ ಕಾಣುತ್ತಿದೆ. ಇನ್ನೂ ಮೆಚ್ಚುಗೆಗಳು ಹರಿದು ಬರುತ್ತಿವೆ.

Leave a Comment