ಜನಪ್ರಿಯ ಟಿವಿ ಶೋನಲ್ಲಿ ಕತ್ರಿನಾ ಮದುವೆ ಬಗ್ಗೆ ನಟ ಅಕ್ಷಯ್ ಕುಮಾರ್ ಇಂತಾ ಜೋಕ್ ಮಾಡೋದಾ??

Written by Soma Shekar

Published on:

---Join Our Channel---

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಬಹಳ ಇತ್ತೀಚಿಗಷ್ಟೇ ಅದ್ದೂರಿಯಾಗಿ ನಡೆದಿತ್ತು, ಮದುವೆ ಸಡಗರದಿಂದ ನಡೆದಿತ್ತೆಂದು ಹೇಳುವುದಕ್ಕೆ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿರುವ ಫೋಟೋಗಳು ಸಾಕ್ಷಿಯಾಗಿದೆ. ಆದರೆ ಈ ಜೋಡಿಯ ವಿವಾಹದ ವಿಡಿಯೋಗಳು ಮಾತ್ರ ಇನ್ನೂ ಲಭ್ಯವಾಗಿಲ್ಲ. ಏಕೆಂದರೆ ಈ ಜೋಡಿಯ ವಿವಾಹದ ವಿಡಿಯೋ ಪ್ರಸಾರದ ಹಕ್ಕನ್ನು ದೊಡ್ಡ ಮೊತ್ತ ನೀಡಿ ಅಮೆಜಾನ್ ಪ್ರೈಮ್ ಖರೀದಿ ಮಾಡಿದೆ. ಆದ್ದರಿಂದಲೇ ಮದುವೆಯಾದ ವಿಡಿಯೋಗಳು ಎಲ್ಲಿ ಕೂಡಾ ಇನ್ನೂ ಲಭ್ಯವಾಗಿಲ್ಲ. ಇನ್ನು ಕತ್ರಿನಾ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಟ್ರೋಲ್ ಗಳನ್ನು ಮಾಡಲಾಗುತ್ತಿದೆ.

ಈಗ ಕತ್ರೀನಾ ಮದುವೆಯ ವಿಚಾರವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸಹಾ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನಟ ಅಕ್ಷಯ್ ಕುಮಾರ್ ನಟಿಸಿರುವ ಅಂತರಂಗೀ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆಗೊಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿ ಸಾರಾ ಅಲಿ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಪ್ರಮೋಷನ್ ಭಾಗವಾಗಿ ಅಕ್ಷಯ್ ಕುಮಾರ್ ಹಾಗೂ ಸಾರಾ ಕಿರುತೆರೆಯ ಜನಪ್ರಿಯ ಕಾಮೆಡಿ ಶೋ ದಿ ಕಪಿಲ್ ಶರ್ಮಾ ಶೋ ಗೆ ಆಗಮಿಸಿದ್ದರು.

ಶೋನಲ್ಲಿ ಕಿಕು ಶಾರದಾ ಹಾಸ್ಯ ಚಟಾಕಿ ಹಾರಿಸುತ್ತಾ, ನಾನು ಈಗಷ್ಟೇ ರಾಜಸ್ಥಾನದಿಂದ ಬಂದೆ. ಅಲ್ಲಿ ನಾನು ಒಂದು ಬಹಳ ಅದ್ದೂರಿ, ಹೈ ಫೈ ಎನಿಸುವ ಮದುವೆಯಲ್ಲಿ ಪಾಲ್ಗೊಂಡಿದ್ದೆ. ನನ್ನ ಇಡೀ ಜೀವನದಲ್ಲಿ ನಾನು ಅಂತಹ ಮದುವೆಯನ್ನು ನೋಡಿಲ್ಲ ಎಂದರೆ ನೀವು ನಂಬುವುದಿಲ್ಲ ಎಂದು ಹೇಳುತ್ತಾರೆ. ಆಗ ನಟ ಅಕ್ಷಯ್ ಕುಮಾರ್ ಆ ಮಾತನ್ನು ಕೇಳಿ ಆಶ್ಚರ್ಯ ಪಡುತ್ತಾ ಏಕೆ ?? ಎನ್ನುವ ಪ್ರಶ್ನೆಯನ್ನು ಮಾಡುತ್ತಾರೆ.

ಕಿಕು ಶಾರದಾ ಆಗ, ನನಗೆ ಅವರು ಮದುವೇನಾ ನೋಡೋಕೆ ಬಿಡ್ಲಿಲ್ಲ, ಆದರೆ ಮದುವೆ ಮಾತ್ರ ಚೆನ್ನಾಗಿ ನಡೆಯಿತು ಎಂದು ತಮಾಷೆ ಮಾಡಿದಾಗ, ಅದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರ್ ಬಹುಶಃ ನೀವು ಮದುವೆಯಲ್ಲಿ ಕಿಟ್ ಕ್ಯಾಟ್ ತಿಂದಿರಬಹುದು ಅಲ್ಲವೇ??? ಎಂದು ಪರೋಕ್ಷವಾಗಿ ಕತ್ರಿನಾ ಅವರ ಶಾರ್ಟ್ ಹೆಸರನ್ನು ತಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಅಕ್ಷಯ್ ಹಾಸ್ಯ ಚಟಾಕಿ ಹಾರಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave a Comment