ಕತ್ತರಿ ಬದಲಾಗಿ ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋ ರೂಂ ಉದ್ಘಾಟನೆ ಮಾಡಿದ ಪಾಕಿಸ್ತಾನದ ಸಚಿವ: ವೀಡಿಯೋ ವೈರಲ್

Written by Soma Shekar

Published on:

---Join Our Channel---

ದೊಡ್ಡ ದೊಡ್ಡ ಸಮಾರಂಭಗಳು ನಡೆದಂತಹ ಸಂದರ್ಭಗಳಲ್ಲಿ ಅವುಗಳ ಉದ್ಘಾಟನೆಗೆ ಗಣ್ಯವ್ಯಕ್ತಿಗಳನ್ನು, ಸಿನಿಮಾ ಸೆಲೆಬ್ರಿಟಿಗಳನ್ನು ಅಥವಾ ರಾಜಕೀಯ ನಾಯಕರನ್ನು ಆಹ್ವಾನಿಸಲಾಗುತ್ತದೆ. ಸಮಾರಂಭಗಳು ಮಾತ್ರವೇ ಅಲ್ಲದೆ ದೊಡ್ಡ ದೊಡ್ಡ ಕಟ್ಟಡಗಳ ಉದ್ಘಾಟನೆಗೂ ಕೂಡಾ ಇಂತಹವರನ್ನು ಆಹ್ವಾನಿಸುವುದು ಒಂದು ಸಂಪ್ರದಾಯದಂತೆ ಹಾಗೂ ಸ್ಟೇಟಸ್ ಸಿಂಬಲ್ ಎಂಬಂತೆ ಬೆಳೆದುಕೊಂಡು ಬಂದಿದೆ. ಇಂತಹ ಉದ್ಘಾಟನಾ ಸಮಾರಂಭದಲ್ಲಿ ಸಾಮಾನ್ಯವಾಗಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ಬಂದಿರುವ ಗಣ್ಯವ್ಯಕ್ತಿಗಳು ಕತ್ತರಿಯಿಂದ ರಿಬ್ಬನ್ ಕತ್ತರಿಸಿ ಕಟ್ಟಡದ ಉದ್ಘಾಟನೆ ಅಥವಾ ಇನ್ನಾವುದೋ ಸಮಾರಂಭದ ಉದ್ಘಾಟನೆಯನ್ನು ಮಾಡುತ್ತಾರೆ.

ಆದರೆ ಇಂತಹವೊಂದು ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನದ ಸಚಿವರೊಬ್ಬರು ರಿಬ್ಬನ್ ಕತ್ತರಿಸಲು ಕತ್ತರಿಯ ಬದಲಾಗಿ ತಮ್ಮ ಹಲ್ಲುಗಳನ್ನು ಬಳಿಸಿದ್ದು, ಬಾಯಿಯಿಂದ ಅವರು ರಿಬ್ಭನ್ ಕತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವರಾಗಿರುವ ಫಯಾಜ್ ಅಲ್ ಹಸನ್ ಚೌಹಾಣ್ ಅವರು ಒಂದು ಶೋರೂಮ್ ನ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಂಪ್ರದಾಯದಂತೆ ರಿಬ್ಬನ್ ಕತ್ತರಿಸಿ ಶೋರೂಮ್ ಉದ್ಘಾಟನೆ ಮಾಡಲು ಅವರ ಕೈ ಗೆ ಕತ್ತರಿಯನ್ನು ನೀಡಲಾಗಿದೆ.

ಸಚಿವರು ಕತ್ತರಿಯನ್ನು ಬಳಸಿ ರಿಬ್ಬನ್ ಕತ್ತರಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಎಷ್ಟೇ ಪ್ರಯತ್ನ ಪಟ್ಟರೂ ಕತ್ತರಿಯಿಂದ ರಿಬ್ಬನ್ ಕಟ್ ಮಾಡುವುದು ಸಾಧ್ಯವಾಗಿಲ್ಲ. ಆಗ ಅವರು ಕತ್ತರಿಯ ಬದಲಾಗಿ ತಮ್ಮ ಹಲ್ಲಿನಿಂದಲೇ ರಿಬ್ಬನ್ ಕಟ್ ಮಾಡುವ ಮೂಲಕ ವಿಭಿನ್ನವಾಗಿ ಶೋರೂಮ್ ನ ಉದ್ಘಾಟನೆಯನ್ನು ಮಾಡಿದ್ದು, ಅವರು ಹೀಗೆ ಹಲ್ಲಿನಿಂದ ರಿಬ್ಬನ್ ಕಟ್ಟಿಂಗ್ ಮಾಡಿದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ. ನೆಟ್ಟಿಗರು ವಿಡಿಯೋ ನೋಡಿ ವೈವಿಧ್ಯಮಯ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

Leave a Comment