ಕಣ್ಣೀರಿಡುತ್ತಾ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡು ಶಾಕಿಂಗ್ ವಿಚಾರ ತಿಳಿಸಿದ ಆರ್ಯನ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸದ್ಯ ಮಾ ದ ಕ ವಸ್ತುಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಸ್ತುತ ಎನ್ ಸಿ ಬಿ ಅಧಿಕಾರಿಗಳ ವಶದಲ್ಲಿರುವ ಆರ್ಯನ್ ಖಾನ್ ವಿಚಾರಣೆ ಜೋರಾಗಿ ನಡೆದಿದ್ದು, ಈ ವೇಳೆ ಆರ್ಯನ್ ಕಾಲ್ ಎನ್ ಸಿ ಬಿ ಅಧಿಕಾರಿಗಳ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುದ್ದಿಯನ್ನು ಬಿತ್ತರ ಮಾಡಿವೆ. ಎನ್ ಸಿ ಬಿ ಈ ಕುರಿತಾಗಿ ಇನ್ನೂ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲವಾದರೂ ಮಾಧ್ಯಮಗಳ ಸುದ್ದಿಗಳು ಸದ್ದು ಮಾಡುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ ಎನ್ ಸಿ ಬಿ ಅಧಿಕಾರಿಗಳು ನಡೆಸಿದ ವಿಚಾರಣೆಯ ವೇಳೆಯಲ್ಲಿ ಆರ್ಯನ್ ಖಾನ್ ಕಣ್ಣೀರು ಇಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಆರ್ಯನ್ ತಾನು ಕಳೆದ ನಾಲ್ಕು ವರ್ಷಗಳಿಂದಲೂ ಸಹ ಡ್ರಗ್ ಸೇವನೆ ಮಾಡುತ್ತಿರುವ ವಿಷಯವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ತಾನು ಲಂಡನ್, ದುಬೈ ಮತ್ತಿತರ ದೇಶಗಳಲ್ಲಿ ಇದ್ದಾಗಲೂ ಡ್ರ ” ಗ್ಸ್ ಸೇವನೆ ಮಾಡಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಶನಿವಾರ ರಾತ್ರಿ ಮುಂಬೈನ ಕರಾವಳಿಯಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಡ್ರ” ಗ್ಸ್ ಪಾರ್ಟಿ ನಡೆಯುತ್ತಿದೆ ಎನ್ನುವ ಖಚಿತವಾದ ಮಾಹಿತಿ ಮೇರೆಗೆ ಎನ್ ಸಿ ಬಿ ದಾಳಿ ನಡೆಸಿತ್ತು. ಈ ವೇಳೆ ನಟ ಶಾರುಖ್ ಖಾನ್ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿತ್ತು. ಇದೊಂದು ಹೈಪ್ರೊಫೈಲ್ ಪ್ರಕರಣವಾಗಿ ಇದೀಗ ದೊಡ್ಡ ಸುದ್ದಿಯಾಗಿದೆ. ಭಾನುವಾರ ಸಂಜೆಯ ವರೆಗೂ ಆರ್ಯನ್ ವಿಚಾರಣೆ ನಡೆಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನಂತರ ಅವರನ್ನು ಬಂಧಿಸಲಾಗಿತ್ತು.
ಸದ್ಯದ ಮಾಹಿತಿಗಳ ಪ್ರಕಾರ ಇನ್ನು ಕೆಲವೇ ಕ್ಷಣಗಳಲ್ಲಿ ಆರ್ಯನ್ ಖಾನ್ ಅವರನ್ನು ಮತ್ತೊಮ್ಮೆ ನ್ಯಾಯಾಧೀಶರನ್ನು ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಆರ್ಯನ್ ಖಾನ್ ಬಂಧನದ ನಂತರ ಭಾನುವಾರ ತಡರಾತ್ರಿ ನಟ ಸಲ್ಮಾನ್ ಖಾನ್ ನಟ ಶಾರೂಕ್ ಅವರ ಮನ್ನತ್ ಬಂಗಲೆಗೆ ಭೇಟಿ ನೀಡುವ ಮೂಲಕ ಶಾರೂಖ್ ಖಾನ್ ಅವರಿಗೆ ಧೈರ್ಯವನ್ನು ಹೇಳುವ ಕೆಲಸ ಮಾಡಿದ್ದಾರೆ.
ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಶಾರೂಖ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಶಾರುಖ್ ಖಾನ್ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಸ್ಪೈನ್ ಗೆ ಹೋಗಬೇಕಾಗಿತ್ತು. ಆದರೆ ಮಗನ ಬಂ ಧನದ ಕಾರಣದಿಂದ ಅವರು ತಮ್ಮ ಪ್ರವಾಸವನ್ನು ರದ್ದು ಮಾಡಿಕೊಂಡು ಮುಂಬೈನಲ್ಲೇ ಉಳಿದಿದ್ದಾರೆ.