ಕಡೆಗೂ ಡಿವೋರ್ಸ್ ಸುದ್ದಿ ಸುಳ್ಳು ಮಾಡಲು ಸಮಂತಾ ನಿರ್ಧಾರ: ಅಭಿಮಾನಿಗಳಿಗೆ ಮೂಡಿಸಿದೆ ಕೊಂಚ ಬೇಸರ

Written by Soma Shekar

Published on:

---Join Our Channel---

ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗುವ ಮೂಲಕ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ನಾಗಚೈತನ್ಯ ಹಾಗೂ ಸಮಂತಾ ಬೇರೆ ಆಗಲಿದ್ದಾರೆ ಎನ್ನುವ ಸುದ್ದಿಗಳು ರೆಕ್ಕೆಪುಕ್ಕ ಪಡೆದು ಹಾರಾಡುತ್ತಿದೆ. ಆದರೆ ಈ ವಿಷಯವಾಗಿ ಕುಟುಂಬ ವರ್ಗ ಮಾತ್ರ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಅಭಿಮಾನಿಗಳು ಸಹಾ ಅವರ ಸಂಬಂಧದಲ್ಲಿ ಏನಾಗಿಲ್ಲ ಎನ್ನುವ ಮಾತುಗಳನ್ನೇ ಹೇಳುತ್ತಿದ್ದರು, ಪಾಸಿಟಿವ್ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು.

ಆದರೆ ಇದೀಗ ಈ ಸುದ್ದಿಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ನಟಿ ಸಮಂತ ಅಕ್ಕಿನೇನಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅವರ ಅಭಿಮಾನಿಗಳಿಗೆ ಅವರ ಈ ನಿರ್ಧಾರ ಖುಷಿಯ ಜೊತೆಗೆ ಕೊಂಚ ಬೇಸರವನ್ನು ಸಹಾ ಮೂಡಿಸಲಿದೆ ಎಂದು ಹೇಳಲಾಗುತ್ತಿದೆ. ನಟಿ ಸಮಂತಾ ಅವರಿಯೆ ಮದುವೆಯ ನಂತರವೂ ಕೂಡ ಬಹಳಷ್ಟು ಸಿನಿಮಾಗಳಲ್ಲಿ ಹಾಗೂ ವೆಬ್ ಸೀರೀಸ್ ನಲ್ಲಿ ಅವಕಾಶಗಳು ಅರಸಿ ಬಂದಿವೆ.

ಸಿನಿಮಾಗಳಲ್ಲಿ ಸಖತ್ ಬ್ಯಸಿಯಾಗಿರುವ ಸಮಂತ ಕೈ ತುಂಬಾ ಕೆಲಸವನ್ನು ಪಡೆದುಕೊಂಡಿದ್ದಾರೆ. ಆದರೆ ಇದೇ ವೇಳೆ ಅವರು ತಮ್ಮ ಪಾತ್ರಗಳ ಆಯ್ಕೆಯಲ್ಲಿ ಮಾತ್ರ ಬಹಳ ಚ್ಯೂಸಿಯಾಗಿದ್ದಾರೆ. ಉತ್ತಮವೆನಿಸಿದ ಹಾಗೂ ಸ್ಕೋಪ್ ಇರುವಂತಹ ಪಾತ್ರಗಳಿಗೆ ಮಾತ್ರ ಹಸಿರು ನಿಶಾನೆಯನ್ನು ತೋರಿಸುತ್ತಿದ್ದಾರೆ. ಈಗ ಎಲ್ಲಾ ಪ್ರಾಜೆಕ್ಟ್ ಗಳನ್ನು ಮುಗಿಸುತ್ತಾ ಬಂದಿದ್ದು, ಇದರ ನಂತರ ಸಮಂತಾ ನಟನೆಯಿಂದ ಒಂದು ಸಣ್ಣ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ.

ಸಿನಿಮಾಗಳು, ಜಾಹಿರಾತು ಎಂದು ಬ್ಯುಸಿಯಾಗಿ ಕುಟುಂಬದಿಂದ ಅಂತರವನ್ನು ಕಾಯ್ದುಕೊಂಡು, ಹೆಚ್ಚು ಕೆಲಸದಲ್ಲಿ ತೊಡಗಿಕೊಂಡಿದ್ದ ಸಮಂತಾ, ಈಗ ಒಂದು ಬ್ರೇಕ್ ಪಡೆದುಕೊಂಡು ತಮ್ಮ ಕುಟುಂಬದೊಡನೆ ಹೆಚ್ಚು ಸಮಯವನ್ನು ಕಳೆಯುವ ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಅವರು ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಸಮಂತಾ ಹಾಗೂ ನಾಗಚೈತನ್ಯ ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದಿದೆ, ಆದರೆ ಅವರು ಇನ್ನು ಮಕ್ಕಳನ್ನು ಮಾಡಿಕೊಂಡಿಲ್ಲ. ಈ ವಿಷಯವಾಗಿ ಕೂಡಾ ಕೆಲವು ಸಂದರ್ಭಗಳಲ್ಲಿ ಪ್ರಶ್ನೆ ಎದುರಾಗಿದೆ. ಕೆಲವು ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಮಂತ ಈಗ ಮಗುವನ್ನು ಪಡೆಯುವ ಕಡೆಗೂ ಗಮನ ಬಂದು ನೀಡಿದ್ದಾರೆ ಎನ್ನಲಾಗಿದ್ದು, ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಬಹುದು.

ನಟಿ ಸಮಂತಾ ಕೆಲವು ತಿಂಗಳ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಕ್ಕಿನೇನಿ ಎನ್ನುವ ಸರ್ ನೇಮ್ ತೆಗೆದ ನಂತರ, ಅವರ ವಿಚ್ಛೇದನದ ವದಂತಿಗಳು ಹರಡಲು ಪ್ರಮುಖ ಕಾರಣವಾಯಿತು. ಅಲ್ಲದೇ ಎಲ್ಲೂ ಸಮಂತಾ ಹಾಗೂ ನಾಗಚೈತನ್ಯ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ, ಸಮಂತಾ ನಾಗಾರ್ಜುನ ಅವರ ಬರ್ತಡೆ ಸೆಲೆಬ್ರೇಶನ್ ನಲ್ಲಿ ಗೈರು ಹಾಜರಾದರು. ಮಾಧ್ಯಮದಲ್ಲಿ ಸಮಂತ ಹರಡಿರುವ ಸುದ್ದಿಯಳ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಕೂಡ ಹೇಳಿದರು.

ಅಲ್ಲದೇ‌ ನಟ ನಾಗಾರ್ಜು ಅವರು ಮಗ ಸೊಸೆಯ ನಡುವಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಇವೆಲ್ಲವುಗಳ ನಂತರ ಒಂದು ಪಾಸಿಟಿವ್ ವಿಚಾರ ಹೊರಬಂದಿದ್ದು, ಈ ವಿಷಯವು ಹೀಗೆ ನಿಜವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸಮಂತಾ ನಾಗಚೈತನ್ಯ ಒಂದಾಗಿರಲಿ ಎಂದು ಶುಭ ಕೋರಿದ್ದಾರೆ.

Leave a Comment