ಕಚ್ಚಾ ಬದಾಮ್ ಹಾಡಿನಿಂದ ಬದಲಾಯ್ತು ಬದುಕು: ಆದ್ರೆ ಈಗ ಕಾಡುತ್ತಿದೆ ಅವಮಾನದ ಆತಂಕ!

Entertainment Featured-Articles News

ಸೋಶಿಯಲ್ ಮೀಡಿಯಾ ಎನ್ನುವುದು ಪ್ರಸ್ತುತ ಕಾಲದಲ್ಲಿ ಒಂದು ಪ್ರಭಾವ ಶಾಲಿ ಮಾದ್ಯಮವಾಗಿದೆ. ಸೋಶಿಯಲ್ ಮೀಡಿಯಾಗಳ ವಿವಿಧ ವೇದಿಕೆಗಳು ಎಷ್ಟು ಪರಿಣಾಮಕಾರಿ ಹಾಗೂ ಜನಪ್ರಿಯತೆ ಪಡೆದಿದೆ ಎಂದರೆ ಇಲ್ಲಿ ಇರುಳು ಕಳೆದು ಹಗಲಾಗುವ ವೇಳೆಗೆ ಯಾರು ಬೇಕಾದರೂ ಫೇಮಸ್ ಆಗಬಹುದು. ಇದಕ್ಕೆ ಈಗಾಗಲೇ ನಮ್ಮ ಮುಂದೆ ಹಲವು ಸಾಕ್ಷಿಗಳು ಸಹಾ ಇವೆ. ಸೋಶಿಯಲ್ ಮೀಡಿಯಾಗಳಿಂದಲೇ ಜನಪ್ರಿಯತೆ ಪಡೆದು ಸ್ಟಾರ್ ಗಳಾದವರು,‌ ಗಾಯಕರಾದವರು, ಡಾನ್ಸರ್ ಗಳಾದವರು ಹೀಗೆ ಹೇಳುತ್ತಾ ಹೋದರೆ ಅನೇಕ ಉದಾಹರಣೆಗಳು ಉಂಟು.

ಈ ಹಿಂದೆಯಷ್ಟೇ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ರಾನು ಮಂಡಲ್ ಹೇಗೆ ರಾತ್ರೋರಾತ್ರಿ ಸಂಚಲನ ಸೃಷ್ಟಿಸಿ ಗಾಯಕಿಯಾದರು ಎನ್ನುವ ವಿಷಯ ಜನರು ಇನ್ನೂ ಮರೆತಿಲ್ಲ. ಈಗ ಅದೇ ರೀತಿಯಲ್ಲಿ ಪಶ್ವಿಮ ಬಂಗಾಳದ ಹಳ್ಳಿಗಳಲ್ಲಿ ಹಾಡು ಹೇಳುತ್ತಾ ಕಡಲೆಕಾಯಿ ಮಾರುತ್ತಿದ್ದ ಭುಬನ್ ತನ್ನ ಕಚ್ಚಾ ಬಾದಾಮ್ ಹಾಡಿನಿಂದ ಪಡೆದಿರುವ ಜನಪ್ರಿಯತೆ ಅಷ್ಟಿಷ್ಟಲ್ಲ. ಈ ಹಾಡು ರಾತ್ರೋರಾತ್ರಿ ಫೇಮಸ್ ಆಗಿ, ಸೋಶಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಹುಟ್ಟು ಹಾಕಿ, ದೊಡ್ಡ ಸದ್ದನ್ನು ಮಾಡುತ್ತಲೇ ಇದೆ.

ಸೆಲೆಬ್ರಿಟಿಗಳು ಭುಬನ್ ಅವರ ಹಾಡಿಗೆ ಹೆಜ್ಜೆಗಳನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಭುಬನ್ ಹಾಡಿದ ಹಾಡನ್ನು ಊರಿನವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಮೇಲೆ ಅದು ಬಿರುಗಾಳಿಯನ್ನೇ ಎಬ್ಬಿಸಿದೆ. ಭುಬನ್ ಹಾಡಿನಲ್ಲಿ ಅವರ ಸಾಹಿತ್ಯ ಅರ್ಥವಾಗದೇ ಹೋದರೂ ಅವರು ಹಾಡಿರುವ ಶೈಲಿ ಜನರ ಮನಸ್ಸನ್ನು ಗೆದ್ದಿದ್ದು, ಅದೇ ಕಾರಣದಿಂದಲೇ ವೀಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಲು ಕಾರಣವಾಗಿದೆ.

ಹಾಡು ಜನಪ್ರಿಯತೆ ಪಡೆದ ಬೆನ್ನಲ್ಲೇ ಭುಬನ್ ಅವರನ್ನು ಕರೆಯಿಸಿ ಹಾಡನ್ನು ರೆಕಾರ್ಡ್ ಮಾಡಿ, ಮ್ಯೂಸಿಕ್ ಆಲ್ಬಂನ ಹಾಡಿನಂತೆ ರೂಪ ಕೊಟ್ಟು ಬಿಡುಗಡೆ ಮಾಡಲಾಗಿದೆ‌. ಹಲವು ಸೆಲೆಬ್ರಿಟಿಗಳು ಭಬನ್ ಅವರನ್ನು ಕರೆಸಿಕೊಂಡು, ಅವರ ಜೊತೆಗೆ ಸ್ಟೆಪ್ ಗಳನ್ನು ಹಾಕಿದ್ದಾರೆ. ಈಗ ಭುಬನ್ ಅವರನ್ನು ಜನ ನೋಡುವ ದೃಷ್ಟಿ ಬದಲಾಗಿದೆ. ಕಡಲೆಕಾಯಿ ಮಾರುತ್ತಿದ್ದ ವ್ಯಕ್ತಿ ಈಗ ಸೆಲೆಬ್ರಿಟಿ ಆಗಿದ್ದಾರೆ. ಆದ್ದರಿಂದ ಅವರು ಮತ್ತೆ ಮೊದಲಿನಂತೆ ಕಡಲೆಕಾಯಿ ಮಾರುವುದು ಸಾದ್ಯವಿಲ್ಲ ಎನ್ನಲಾಗಿದ್ದು, ಈ ಮಾತನ್ನು ಅವರೇ ಹೇಳಿದ್ದಾರೆ.

ಭುಬನ್ ಅವರು, ನಾನು ಕಲಾವಿದನಾಗಿ ಉಳಿಯಲು ಬಯಸುತ್ತೇನೆ. ನಾನೀಗ ಒಬ್ಬ ಸೆಲೆಬ್ರಿಟಿ ಆಗಿದ್ದೇನೆ. ಹೀಗೆ ಸೆಲೆಬ್ರಿಟಿ ಆದ ಮೇಲೆ ಮೊದಲಿನಂತೆ ಕಡಲೆಕಾಯಿ ಮಾರಾಟವನ್ನು ಮಾಡಲು ಹೋದರೆ ನಾನು ಅವಮಾನವನ್ನು ಎದುರಿಸಬೇಕಾಗಬಹುದು ಎನ್ನುವ ಮಾತನ್ನು ಹೇಳುವ ಮೂಲಕ ಇನ್ನು ಮುಂದೆ ತಾನು ಕಡಲೆಕಾಯಿ ಮಾರಾಟವನ್ನು ಮಾಡುವುದು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಭುಬನ್ ಅವರ ಜನಪ್ರಿಯತೆ ಈಗ ಎಲ್ಲೆಲ್ಲೂ ಸುದ್ದಿಯಾಗಿದೆ.

Leave a Reply

Your email address will not be published.