ಕಂಗನಾ ಆಡಿದ ಮಾತೇ ಈಗ ಆಗಿದೆ ಆಕೆಗೇ ತಿರುಗುಬಾಣ: ನಟಿಗೆ ನೀಡಿದ ಪದ್ಮಶ್ರೀ ಹಿಂಪಡೆಯಲು ಆಗ್ರಹ
ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದ ಕಾರಣದಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಯಾಗಿರುತ್ತಾರೆ. ಬಹುತೇಕ ಕಂಗನಾ ನೀಡುವ ವಿ ವಾ ದಾ ತ್ಮಕ ಹೇಳಿಕೆಗಳು ಹಾಗೂ ಕಂಗನಾ ಶೇರ್ ಮಾಡುವ ಫೋಟೋಗಳ ವಿಚಾರದಿಂದಾಗಿಯೇ ಕಂಗನಾ ಹೆಚ್ಚು ಸದ್ದು ಮಾಡುತ್ತಾರೆ. ಪದ್ಮಶ್ರೀ ಸ್ವೀಕರಿಸಿದ ನಂತರ ಸಂದರ್ಶನವೊಂದರಲ್ಲಿ ನಟಿ ಕಂಗನಾ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀಡಿರುವ ಹೇಳಿಕೆ ತೀವ್ರವಾದ ವಿವಾದಗಳನ್ನು ಹುಟ್ಟುಹಾಕಿದೆ. ಹಲವು ಪಕ್ಷಗಳು, ರಾಜಕಾರಣಿಗಳು, ನಟರು ಹಾಗೂ ನೆಟ್ಟಿಗರು ಕಂಗನಾ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಕಂಗನಾ
1947 ರಲ್ಲಿ ಗಾಂಧಿ ಅವರ ಭಿಕ್ಷಾ ಪಾತ್ರೆಯಲ್ಲಿ ನಮಗೆ ಸ್ವತಂತ್ರ ನೀಡಲಾಯಿತು. ಭಿಕ್ಷೆಯಾಗಿ ಪಡೆದರೆ ಅದು ಸ್ವಾತಂತ್ರ್ಯವಾಗುತ್ತದೆಯೇ?? ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಿದ್ದು 2014 ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಎಂದು ಕಂಗನಾ ಹೇಳಿಕೆಯನ್ನು ನೀಡಿದ್ದರು. ಕಂಗನಾ ಆಡಿದ ಮಾತುಗಳ 24 ಸೆಕೆಂಡ್ ಗಳ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಂಗನಾ ಈ ಮಾತನಾಡಿದಾಗ ಶೋ ನಲ್ಲಿ ಅನೇಕರು ಚಪ್ಪಾಳೆ ತಟ್ಟಿದ್ದಾರೆ.
ಆದರೆ ವೀಡಿಯೋ ತುಣುಕು ಕಾಡ್ಗಿಚ್ಚಿನಂತೆ ವೈರಲ್ ಆದ ಮೇಲೆ ದೇಶದಾದ್ಯಂತ ವ್ಯಾಪಕ ಆ ಕ್ರೋ ಶ ವ್ಯಕ್ತವಾಗಿದೆ. ಹಲವು ಪಕ್ಷಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಹಾಗೂ ಜನಸಾಮಾನ್ಯರು ಸಹಾ ಕಂಗನಾ ಮಾತಿಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕಂಗನಾ ವಿ ರು ದ್ಧ ದೇಶ ದ್ರೋ ಹ ದ ಕೇಸು ದಾಖಲು ಮಾಡಬೇಕೆಂದು ಅನೇಕರು ಆಗ್ರಹಿಸಿದ್ದಾರೆ. ಇವೆಲ್ಲವುಗಳ ಬೆನ್ನಲ್ಲೇ ಅನೇಕರು ಕಂಗನಾಗೆ ನೀಡಿರುವ ಪದ್ಮಶ್ರೀ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಕಂಗನಾ ಸ್ವಾತಂತ್ರ್ಯ ವನ್ನು ಭಿ ಕ್ಷೆ ಎನ್ನುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಅಪಮಾನ ಮಾಡಿದ್ದಾರೆ. ಇಂತ ಹೇಳಿಕೆ ನೀಡುವ ಮುನ್ನ ಆಕೆ ಒಂದು ಬಾರಿ ಯೋಚಿಸಬೇಕಿತ್ತು. ಇಡೀ ದೇಶಕ್ಕೆ, ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಮಾಡಿರುವ ಅವಮಾನ ಇದು ಎಂದು ಜನರು ಸಿಟ್ಟಾಗಿದ್ದಾರೆ. ಹಲವು ಕಡೆ ಕಂಗನಾ ವಿರುದ್ದ ಈಗಾಗಲೇ ದೂರುಗಳು ಸಹಾ ದಾಖಲಾಗಿದೆ.