ಕಂಗನಾಗೆ ಎದುರಾಯ್ತು ಹೀನಾಯ ಸೋಲು: 50 ಲಕ್ಷ ಗಳಿಸಲು ಒದ್ದಾಡಿದ ಕಂಗನಾ ಹೊಸ ಸಿನಿಮಾ

Entertainment Featured-Articles Movies News

ಬಾಲಿವುಡ್ ನಲ್ಲಿ ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು ಸುದ್ದಿ ಮಾಡುವ ನಟಿ ಕಂಗನಾ ರಣಾವತ್, ಸಿನಿಮಾ ವಿಷಯಗಳಿಂದ ಹೆಚ್ಚಾಗಿ ನೀಡುವ ಹೇಳಿಕೆಗಳಿಂದಲೇ ಹೆಚ್ಚು ವಿ ವಾ ದಗಳನ್ನು ಸಹಾ ಹುಟ್ಟು ಹಾಕುತ್ತಾರೆ ಕಂಗನಾ. ಇನ್ನು ಇತ್ತೀಚಿಗೆ ಸಲ್ಮಾನ್ ಖಾನ್ ನೀಡಿದ ಈದ್ ಪಾರ್ಟಿಯಲ್ಲಿ ಸಹಾ ಭಾಗಿಯಾಗಿದ್ದ ಕಂಗನಾ ಹೊಸ ಸಂಚಲನ ಹುಟ್ಟು ಹಾಕಿದ್ದರು. ಸದಾ ಬಾಲಿವುಡ್ ಮಂದಿಯನ್ನು ಟೀಕಿಸುವ ನಟಿಯು, ಬಾಲಿವುಡ್ ಸ್ಟಾರ್ ನಟನ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಸಖತ್ ಸುದ್ದಿಯಾಗಿತ್ತು ಕೂಡಾ. ಈಗ ಅದೆಲ್ಲವುಗಳ ನಂತರ ಮತ್ತೊಮ್ಮೆ ಕಂಗನಾ ಸುದ್ದಿಯಾಗಿದ್ದಾರೆ.

ನಟಿ ಕಂಗನಾ ಈ ಬಾರಿ ಸುದ್ದಿಯಾಗಿರುವುದು ಯಾವುದೇ ಹೇಳಿಕೆ ಅಥವಾ ವಿ ವಾ ದ ದಿಂದ ಅಲ್ಲ ಬದಲಾಗಿ ಅವರ ಹೊಸ ಸಿನಿಮಾದ‌ ವಿಚಾರವಾಗಿ. ನಟಿ ಕಂಗನಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ ಧಾಕಡ್ ಬಿಡುಗಡೆ ಆಗಿದೆ. ನಟಿ ಕಂಗನಾ ತಮ್ಮ ಹೊಸ ಸಿನಿಮಾದ ಬಗ್ಗೆ ಬಾರೀ ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದರು. ಅಲ್ಲದೇ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯಗಳನ್ನು ಬಹಳ ಜೋರಾಗಿ ನಡೆಸಿದ್ದರು. ನಟ ಸಲ್ಮಾನ್ ಖಾನ್ ಸಹಾ ಧಾಕಡ್ ಸಿನಿಮಾದ ಪೋಸ್ಟ್ ಶೇರ್ ಮಾಡಿ ಶುಭ ಕೋರಿದ್ದರು.

ಕಂಗನಾ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದ ಅವರ ಧಾಕಡ್ ಸಿನಿಮಾ‌ ಹೀನಾಯ ಸೋಲನ್ನು ಕಂಡಿದೆ. ಸಾಮನ್ಯವಾಗಿ ಸ್ಟಾರ್ ಗಳ ಸಿನಿಮಾ ಎಂದಾಗ ಸಹಜವಾಗಿಯೇ ಮೊದಲನೇ ಕೋಟಿಗಳ ಲೆಕ್ಕದಲ್ಲಾದರೂ ಸಿನಿಮಾ ಗಳಿಕೆಯನ್ನು ಕಾಣುತ್ತದೆ. ಆದರೆ ನಟಿ ಕಂಗನಾ ಅಭಿನಯದ ಧಾಕಡ್ ಸಿನಿಮಾ ಮೊದಲನೇ ದಿನವೇ 50 ಲಕ್ಷ ರೂ. ಗಳಿಸಲು ಕೂಡಾ ಪರದಾಡಿದೆ ಎಂದು ಹೇಳಲಾಗುತ್ತಿದೆ. ಧಾಕಡ್ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿತ್ತು. ಈ ಸಿನಿಮಾದ ಸಾಹಸ ದೃಶ್ಯಗಳನ್ನು ನಿಭಾಯಿಸಲು ಕಂಗನಾ ಮೂರು ತಿಂಗಳ ತರಬೇತಿಯನ್ನು ಸಹಾ ಪಡೆದಿದ್ದರು.

ಆದರೆ ಇಷ್ಟೆಲ್ಲಾ ಸಿದ್ಧತೆಗಳನ್ನು ನಡೆಸಿದರೂ ಸಹಾ ಧಾಕಡ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗಿದೆ. ಕೆಲವು ಮೂಲಗಳ ಪ್ರಕಾರ ಮೊದಲನೇ ದಿನ ಕಲೆಕ್ಷನ್ 65 ಲಕ್ಷ ರೂ. ಗಳು ಎನ್ನಲಾಗಿದ್ದರೆ, ಎರಡನೇ ದಿನವೂ ಸರಿ ಸುಮಾರು ಇದೇ ಮಟ್ಟದಲ್ಲಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಮೊದಲ ವೀಕೆಂಡ್ ನಲ್ಲಿ ಸಿನಿಮಾ ಒಂದೂವರೆ ಕೋಟಿ ಗಳಿಸಬಹುದು ಎನ್ನುವ ಅಂದಾಜನ್ನು ಮಾಡಲಾಗಿದೆ. ಇನ್ನು ಈ ಸಿನಿಮಾ ನಿರ್ಮಾಣಕ್ಕೆ ಸುಮಾರು 100 ಕೋಟಿ ಖರ್ಚಾಗಿದೆ ಎನ್ನಲಾಗಿದ್ದು, ಸಿನಿಮಾ ಮುಂದಿನ ದಿನಗಳಲ್ಲಿ ಹೇಗೆ ಮುಂದೆ ಸಾಗಲಿದೆ ಕಾದು ನೋಡಬೇಕಾಗಿದೆ.

Leave a Reply

Your email address will not be published.