ಬಾಲಿವುಡ್ ನ ಅಂದಗಾತಿ ಮಾತ್ರವೇ ಅಲ್ಲದೇ 1994 ರಲ್ಲಿ ಮಿಸ್ ವರ್ಲ್ಡ್ ಪಟ್ಟವನ್ನು ತನ್ನದಾಗಿಸಿಕೊಂಡ ಅಪ್ಸರೆಯಂತಹ ಚೆಲುವೆ ಎಂದರೆ ನೆನಪಾಗುವುದು ನಟಿ ಐಶ್ವರ್ಯ ರೈ. ನಟಿ ಐಶ್ವರ್ಯ ರೈ ಅವರು ವಿಶ್ವದ ಸುಂದರವಾದ ಮಹಿಳೆಯರ ಪಟ್ಟಿಯಲ್ಲಿ ಸಹಾ ಸ್ಥಾನವನ್ನು ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಪ್ರತಿ ವರ್ಷ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಕೇನ್ಸ್ ಸಿನಿಮಾ ಉತ್ಸವದಲ್ಲಿ ಐಶ್ವರ್ಯ ರೈ ತಮ್ಮ ವಿನೂತನ ಹಾಗೂ ವಿಶಿಷ್ಠವಾದ ವಿನ್ಯಾಸದ ವಸ್ತ್ರಗಳ ಮೂಲಕ ಎಲ್ಲರ ಗಮನವನ್ನೂ ಸೆಳೆಯುತ್ತಾರೆ ಹಾಗೂ ಸುದ್ದಿಯಾಗುತ್ತಾರೆ.
ಇನ್ನು ಕೆಲವು ದಿನಗಳ ಹಿಂದೆ ನಟಿ ಐಶ್ವರ್ಯ ರೈ ಅವರು ತಮ್ಮ ಪತಿ ನಟ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಬಚ್ಚನ್ ಜೊತೆಗೆ ತಮ್ಮ ಪ್ರೈವೇಟ್ ಜೆಟ್ ನಲ್ಲಿ ಕೇನ್ಸ್ ಸಿನಿಮಾ ಉತ್ಸವಕ್ಕೆ ಹೋಗಿದ್ದರು. ಏರ್ ಪೋರ್ಟ್ ನಲ್ಲಿ ಇಳಿದ ನಟಿಯ ಲುಕ್ ಹಾಗೂ ಮಾಡಿಕೊಂಡಿದ್ದ ಮೇಕಪ್ ಅವರ ಅಭಿಮಾನಿಗಳಿಗೆ ಅದೇಕೋ ಇಷ್ಟವಾಗಿಲ್ಲ. ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ನಡೆದು ಬಂದ ಐಶ್ವರ್ಯ ರೈ ಅವರು D&G ಬ್ಲಾಕ್ ಗೌನ್ ಅನ್ನು ಧರಿಸಿ ಹೆಜ್ಜೆ ಹಾಕಿದ್ದರು.
ಐಶ್ವರ್ಯ ಧರಿಸಿದ್ದ ಈ ಗೌನ್ ನ ಒಂದೊಂದು ಕಾರ್ನರ್ ಗಳಿಗೆ ಹೂವುಗಳಂತಹ ಮಾದರಿಗಳನ್ನು ಅಳವಡಿಸಿ ಡ್ರೆಸ್ ಅನ್ನು ಅಲಂಕಾರ ಮಾಡಲಾಗಿತ್ತು. ಐಶ್ವರ್ಯ ಅವರ ಕಣ್ಣುಗಳಿಗೆ ಸ್ವಲ್ಪ ಹೆಚ್ಚಾಗಿಯೇ ಮೇಕಪ್ ಮಾಡಲಾಗಿತ್ತು. ಸಿಂಪಲ್ ಹೇರ್, ಸ್ಟ್ರೈಟ್ ಲುಕ್ ನಲ್ಲಿ ಐಶ್ವರ್ಯ ಅವರು ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಮಾತ್ರ ಅದೇಕೋ ಇಷ್ಟವಾಗಿಲ್ಲ. ನೆರೆದಿದ್ದ ಪ್ರತಿಷ್ಠಿತ ಫೋಟೋಗ್ರಾಫರ್ ಗಳು ನಟಿಯ ವಿವಿಧ ಭಂಗಿಗಳ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.
ನಟಿಯ ಫೋಟೋಗಳು ವೈರಲ್ ಆಗಿವೆ. ವೈರಲ್ ಆದ ಫೋಟೋಗಳನ್ನು ನೋಡಿದ ಮೇಲೆ ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ನಟಿಯ ಮುಖದ ಮೇಲೆ ಚರ್ಮದ ನೆರಿಗೆಗಳು ಕಾಣಿಸಿಕೊಂಡಿದೆ ಎಂದು ಟೀಕೆ ಮಾಡಿದ್ದಾರೆ. ನಟಿ ಐಶ್ವರ್ಯ ರೈ ಅವರು ಗರ್ಭಿಣಿಯಾಗಿದ್ದಾಗ ಅವರ ದೇಹದ ತೂಕ ಹೆಚ್ಚಾಗಿತ್ತು. ಅದಾದ ನಂತರ ನಟಿ ಸ್ಲಿಮ್ ಆಗಿ ಅನಂತರ ಕೆಲವು ಸಿನಿಮಾಗಳಲ್ಲಿ ಸಹಾ ನಟಿಸಿದ್ದರು.
ಆದರೆ ಇದೀಗ ನಟಿಯ ದೇಹದ ಆಕಾರ ಮೊದಲಿನಂತೆ ಇಲ್ಲದಿರುವುದನ್ನು ನೋಡಿ ಕೆಲವರು ಅದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಉತ್ಸವದಲ್ಲಿ ಪಿಂಕ್ ಬಣ್ಣದ ಸೂಟ್ ಧರಿಸಿದ್ದ ಐಶ್ವರ್ಯ ಅವರ ಫೋಟೋ ನೋಡಿದ ನೆಟ್ಟಿಗರು, ದಪ್ಪ ಆಗಿದ್ದೀರಾ? ಅಥವಾ ಇದು ವಯಸ್ಸಾಗಿದ್ದಾ? ತುಂಬಾ ಕೆಟ್ಟದಾಗಿ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಓವರ್ ಡಯಟ್ ಮಾಡಿ ಅಜ್ಜಿಯಂತೆ ಆಗಿದ್ದೀರಿ ಎಂದು ವ್ಯಂಗ್ಯ ಮಾಡಿದ್ದಾರೆ.