ಓಲಾ ಎಲೆಕ್ಟ್ರಿಕ್ ಬೈಕ್ ತಂದಿಟ್ಟ ಸಂಕಷ್ಟ: ಕೋಪದಿಂದ ಮಾಲೀಕ ನಡೆಸಿದ ವಿನೂತನ ಪ್ರತಿಭಟನೆ, ವೈರಲ್ ಆಯ್ತು ವೀಡಿಯೋ

Entertainment Featured-Articles News Viral Video

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸುರಕ್ಷತೆಯ ಕುರಿತಾಗಿ ದೇಶವ್ಯಾಪಿಯಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸ್ಫೋ ಟ ಗೊಂಡಿರುವುದು, ಅವುಗಳ ಬ್ಯಾಟರಿಯಿಂದ ಹೊಗೆ ಬರುವಂತಹ ಘಟನೆಗಳು ವರದಿಯಾಗಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಂದ ಉಂಟಾದ ಅ ವ ಘಡದಲ್ಲಿ ಪ್ರಾಣ ನಷ್ಟ ಕೂಡಾ‌ ಸಂಭವಿಸಿದೆ. ಯಾರೋ ಕೆಲವು ಅದೃಷ್ಟವಂತರು ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಜನರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸುರಕ್ಷತೆಯ ಬಗ್ಗೆ ಸಂಶಯ ಮೂಡಿರುವುದು ಸುಳ್ಳಲ್ಲ.

ನಡೆದಿರುವಂತಹ ದು ರ್ಘ ಟ ನೆ ಗಳಿಂದಾಗಿ ಜನರಿಗೆ ದ್ವಿಚಕ್ರವಾಹನಗಳು ಎಂದರೆ ಅವು ಸುರಕ್ಷಿತವಲ್ಲ ಎನ್ನುವ ಭಾವನೆ ಮೂಡುತ್ತಿದೆ. ಒಂದು ರೀತಿಯಲ್ಲಿ ಆ ತಂ ಕವನ್ನು ಹುಟ್ಟುಹಾಕುತ್ತಿವೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು. ಇಂತಹ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಓಲಾ ಕಂಪನಿಯ ದ್ವಿಚಕ್ರ ವಾಹನ ನಿಂತು ಹೋದ ಕಾರಣ ಕಂಪನಿಗೆ ಈ ವಿಚಾರವಾಗಿ ದೂರನ್ನು ನೀಡಿದ್ದರು ಯಾವುದೇ ರೀತಿಯ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಅಸಮಾಧಾನಗೊಂಡ ವ್ಯಕ್ತಿಯೊಬ್ಬರು ವಿನೂತನ ರೀತಿಯಲ್ಲಿ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಪ್ರದರ್ಶನ ಮಾಡಿದ್ದಾರೆ.

ಕಂಪನಿಯ ಮೇಲಿನ ಅಸಮಾಧಾನವನ್ನು ಅವರು ಪ್ರದರ್ಶಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಿಂದ ಸಮಸ್ಯೆಯನ್ನು ಎದುರಿಸಿದ ವ್ಯಕ್ತಿ, ತನ್ನ ಸಮಸ್ಯೆಗೆ ಕಂಪನಿಯು ಸ್ಪಂದಿಸಲಿಲ್ಲ ಎನ್ನುವ ಬೇಸರದಿಂದ ತಾನು ಹಣಕೊಟ್ಟು ಪಡೆದಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು, ಕತ್ತೆಗೆ ಕಟ್ಟಿ ಸಾರ್ವಜನಿಕವಾಗಿ ಮೆರೆವಣಿಗೆ ಮಾಡಿದ್ದಾರೆ. ಇಂತಹದೊಂದು ಘಟನೆಯು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಪಟ್ಟಣದಲ್ಲಿ ನಡೆದಿದೆ.

ಪರ್ಲಿಯಾ ನಿವಾಸಿಯಾಗಿರುವ ಸಚಿನ್ ಗಿಟ್ಟೆ ಎನ್ನುವವರು ತಮ್ಮ ಸ್ಕೂಟರನ್ನು ಕತ್ತೆಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ. ಈ ಮೆರವಣಿಗೆಯಲ್ಲಿ ಅವರು ಕಂಪನಿಯನ್ನು ನಂಬಬೇಡಿ ಎನ್ನುವ ಭಿತ್ತಿಪತ್ರವನ್ನು ಸಹ ಪ್ರದರ್ಶನ ಮಾಡಿದ್ದಾರೆ. ಓಲಾ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕೊಂಡುಕೊಂಡ ಆರು ದಿನಗಳ ನಂತರ, ಅದು ಕೆಲಸ ಮಾಡುತ್ತಿಲ್ಲ‌, ನಿಂತು ಹೋಗಿದೆ. ಈ ವಿಚಾರವಾಗಿ ಅವರು ಕಂಪನಿಗೆ ಎಷ್ಟು ಸಲ ದೂರು ನೀಡಿದರೂ ಕಂಪನಿ ಸ್ಪಂದಿಸುತ್ತಿಲ್ಲ ಎನ್ನುವ ಕಾರಣಕ್ಕೆ ಈ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.