ಓಟಿಟಿ ಯಿಂದ ಟಿವಿ ಬಿಗ್ ಬಾಸ್ 9 ಕ್ಕೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವರೇನಾ? ನಿಮ್ಮ ಆಯ್ಕೆ ಯಾರು?
ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಕೊನೆಯ ಹಂತವನ್ನು ಪ್ರವೇಶಿಸಿದೆ. ಇದೀಗ ಫಿನಾಲೇ ವಾರದ ಕೊನೆಯ ಭಾಗವನ್ನು ತಲುಪಿರುವ ಓಟಿಟಿ ಬಿಗ್ ಬಾಸ್ ಭರ್ಜರಿ ಯಶಸ್ಸನ್ನು ಸಹಾ ಪಡೆದುಕೊಂಡಿದೆ. ಆರು ವಾರಗಳ ಕಾಲಾವಧಿಯ ಓಟಿಟಿ ಬಿಗ್ ಬಾಸ್ ಶೋ ನ ಗ್ರಾಂಡ್ ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದ್ದು, ಓಟಿಟಿಯಲ್ಲಿ ಪ್ರಸಾರ ಕಂಡ ಮೊದಲ ಬಿಗ್ ಬಾಸ್ ಸೀಸನ್ ವಿನ್ನರ್ ಯಾರು ಎನ್ನುವ ಕುತೂಹಲಕ್ಕೆ ಉತ್ತರ ಸಿಗಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದಂಶ ಏನೆಂದರೆ ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಈ ಹಿಂದೆ ಓಟಿಟಿ ಬಿಗ್ ಬಾಸ್ ನಲ್ಲಿ ವಿನ್ನರ್ ಅಲ್ಲ ವಿನ್ನರ್ಸ್ ಇರುತ್ತಾರೆ ಎನ್ನುವ ಮಾತೊಂದನ್ನು ಹೇಳಿದ್ದರು.
ಹೌದು ಬಿಗ್ ಬಾಸ್ ಓಟಿಟಿಯಲ್ಲಿ ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಿ, ಮನರಂಜನೆ ನೀಡುವಲ್ಲಿ ಸದ್ದು ಮಾಡಿರುವಂತಹ ನಾಲ್ಕು ಜನ ಸದಸ್ಯರಿಗೆ ಟಿವಿ ಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನ ಹೊಸ ಸೀಸನ್ ಅಂದರೆ ಬಿಗ್ ಬಾಸ್ 9 ಕ್ಕೆ ಕೂಡಾ ಮನೆಯೊಳಗೆ ಸ್ಪರ್ಧಿಗಳಾಗಿ ಎಂಟ್ರಿ ನೀಡುವ ಅವಕಾಶವನ್ನು ನೀಡಲಾಗುತ್ತದೆ. ಆ ನಾಲ್ಕು ಜನ ಸ್ಪರ್ಧಿಗಳು ಯಾರು ಎನ್ನುವುದು ಈ ವಾರಾಂತ್ಯದ ಗ್ರಾಂಡ್ ಫಿನಾಲೆಯಲ್ಲಿ ಬಹಿರಂಗವಾಗಲಿದೆ. ಹಾಗಾದರೆ ಪ್ರಸ್ತುತ ಮನೆಯಲ್ಲಿರುವ ಎಂಟು ಜನ ಸ್ಪರ್ಧಿಗಳಲ್ಲಿ ಟಿವಿ ಬಿಗ್ ಬಾಸ್ ನ ಹೊಸ ಸೀಸನ್ ಗೆ ಯಾರೆಲ್ಲಾ ಎಂಟ್ರಿ ಪಡೆಯಬಹುದು ಎನ್ನುವ ಚರ್ಚೆಯೊಂದು ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಆರಂಭವಾಗಿದೆ.
ರಾಕೇಶ್ ಅಡಿಗ ಸಿನಿಮಾ ರಂಗದಿಂದ ಜನಪ್ರಿಯತೆ ಪಡೆದವರು. ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ನಂತರ ಜನರಿಗೆ ಅವರು ಇನ್ನಷ್ಟು ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಂತಹುದೇ ಪರಿಸ್ಥಿತಿಯಲ್ಲಿ ಸಂಯಮವನ್ನು ಕಳೆದುಕೊಳ್ಳದೇ ಆಟವನ್ನು ಆಡುತ್ತಾ ಬಂದು, ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಹಾಗಾದರೆ ಪ್ರೇಕ್ಷಕರು ರಾಕೇಶ್ ಗೆ ಬಿಗ್ ಬಾಸ್ ಸೀಸನ್ 9 ಕ್ಕೆ ಬರಲು ಅವಕಾಶ ಕೊಡ್ತಾರಾ? ಕಾದು ನೋಡಬೇಕಾಗಿದೆ. ಇದೇ ವೇಳೆ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಎನಿಸಿಕೊಂಡಿರುವ ಸೋನು ಶ್ರೀನಿವಾಸ್ ಗೌಡ ಕೂಡಾ ಮನೆಯಲ್ಲಿ ಉಳಿದಿರುವ ಎಂಟು ಜನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜಗಳ, ಚರ್ಚೆಗಳು, ವಾದಗಳು ಜೊತೆಗೆ ಮನರಂಜನೆ ನೀಡುತ್ತಾ ಸಖತ್ ಸದ್ದು, ಸುದ್ದಿಯಾದ ಸೋನು ಶ್ರೀನಿವಾಸ್ ಗೌಡ ಟಿವಿ ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದಾ? ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್ ಎಂದು ಜನಪ್ರಿಯತೆ ಪಡೆದ ಆರ್ಯವರ್ಧನ್ ಗುರೂಜಿ ಓಟಿಟಿ ಬಿಗ್ ಬಾಸ್ ನ ಆರಂಭದಲ್ಲಿ ಮೊದಲು ಮನೆಯನ್ನು ಪ್ರವೇಶಿಸಿದ ಸ್ಪರ್ಧಿಯಾಗಿದ್ದರು. ಮೊದ ಮೊದಲು ವೀಕ್ ಎನಿಸಿಕೊಂಡರೂ ಅನಂತರ ಮನರಂಜನೆ ನೀಡುವಲ್ಲಿ ತಾನೇನೂ ಕಮ್ಮಿಯಿಲ್ಲ ಎಂದು ಆರ್ಯವರ್ಧನ್ ಗುರೂಜಿ ಸಾಬೀತು ಮಾಡಿದ್ದು, ಟಿವಿ ಬಿಗ್ ಬಾಸ್ ನ ಹೊಸ ಸೀಸನ್ ನಲ್ಲಿ ಸ್ಪರ್ಧೆಗೆ ಇಳಿತಾರಾ ಗುರೂಜಿ? ಸದ್ಯಕ್ಕೆ ಉತ್ತರಕ್ಕಾಗಿ ಕಾಯಬೇಕಾಗಿದೆ.
ಪತ್ರಕರ್ತ, ನಿರೂಪಕ ಸಹಾ ಆಗಿರುವ ಸೋಮಣ್ಣ ಮಾಚಿಮಾಡ ಬಿಗ್ ಬಾಸ್ ನ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾದರೆ ಸೋಮಣ್ಣ ಅವರಿಗೆ ಸಿಗುತ್ತಾ ಬಿಗ್ ಬಾಸ್ 9 ಕ್ಕೆ ಎಂಟ್ರಿ ಟಿಕೆಟ್? ಇನ್ನು ಕಿರುತೆರೆಯಲ್ಲಿ ಬಾಲನಟಿಯಾಗಿ, ಅನಂತರ ರಿಯಾಲಿಟಿ ಶೋ ಗಳ ಮೂಲಕ ಜನಪ್ರಿಯತೆ ಪಡೆದು, ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಆಟ ಆಡಿ, ರೂಪೇಶ್ ಜೊತೆಗಿನ ಸ್ನೇಹದ ವಿಚಾರವಾಗಿ ಸದ್ದು ಮಾಡಿದ, ಜಶ್ವಂತ್ ಮತ್ತು ನಂದಿನಿ ನಡುವೆ ಜಗಳಕ್ಕೆ ಕಾರಣವಾದ ಸಾನ್ಯಾ ಅಯ್ಯರ್ ಬಿಗ್ ಬಾಸ್ ಒಂಬತ್ತಕ್ಕೆ ಬರಬಹುದಾ? ಚಾನ್ಸಸ್ ತುಂಬಾ ಇದೆ.
ಇನ್ನುಳಿದಂತೆ ಲವರ್ ನಂದಿನಿ ಜೊತೆ ಮನೆಗೆ ಎಂಟ್ರಿ ನೀಡಿದ ಜಶ್ವಂತ್ ಬೋಪಣ್ಣ ತಮ್ಮದೇ ಶೈಲಿಯಲ್ಲಿ ಆಟ ಆಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಾಡುಗಳ ಮೂಲಕ, ಸಾನ್ಯಾ ಜೊತೆಗಿನ ಸ್ನೇಹದ ಮೂಲಕ, ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದ ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಅವರು ಸಹಾ ಬಿಗ್ ಬಾಸ್ 9 ಕ್ಕೆ ಎಂಟ್ರಿ ನೀಡುವ ಎಲ್ಲಾ ಅರ್ಹತೆ ಪಡೆದಿದ್ದಾರೆ. ಮನೆಯಲ್ಲಿ ಹೆಚ್ಚು ಜಗಳಗಳಿಂದ ಸದ್ದು ಮಾಡಿರುವ, ತನ್ನ ಸ್ಥಾನಕ್ಕಾಗಿ ದನಿ ಎತ್ತುವ ಜಯಶ್ರೀ ಆರಾಧ್ಯ ಅವರು ಬಿಗ್ ಬಾಸ್ ಒಂಬತ್ತಕ್ಕೆ ಎಂಟ್ರಿ ನೀಡೋಕೆ ಜನ ಓಟ್ ಮಾಡ್ತಾರಾ? ಒಟ್ಟಾರೆ ಇರುವ ಎಂಟು ಜನರಲ್ಲಿ ಯಾರು ಟಿವಿ ಬಿಗ್ ಬಾಸ್ ಗೆ ಬರ್ತಾರೆ ಅನ್ನೋ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.